Just In
- 15 min ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 15 min ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 30 min ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- 1 hr ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
Don't Miss!
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಟಿಎಂ ಡ್ಯೂಕ್ 790 ಬೈಕಿನ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿ
ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ ಡ್ಯೂಕ್ 790 ಬೈಕಿನ ಮೇಲೆ ಬರೊಬ್ಬರಿ ರೂ.1 ಲಕ್ಷಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆದರೆ ಈ ರಿಯಾಯಿತಿಯು ಕೇವಲ ಸೀಮಿತ ಅವಧಿಗೆ ಮಾತ್ರ ನೀಡುತ್ತದೆ.
ಬಿಎಸ್-4 ಎಂಜಿನ್ನ 790 ಡ್ಯೂಕ್ ಬೈಕಿಗೆ ಈ ಭರ್ಜರಿ ರಿಯಾಯಿತಿಯನ್ನು ನೀಡಿದ್ದಾರೆ. ಕೆಟಿಎಂ 790 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷ ಗಳಾಗಿದೆ. ನೇಕೆಟ್ ಸೆಗೆಮೆಂಟ್ನ ಈ ಬೈಕ್ ಅನ್ನು ಸಿಕೆಡಿ(ಕಂಪ್ಲೀಟ್ ನಾಕ್ ಡೌನ್) ಮೂಲಕ ಭಾರತಕ್ಕೆ ತರಲಾಗಿದೆ ಮತ್ತು ಬಜಾಜ್ ಘಟಕದಲ್ಲಿ ಈ ಬೈಕ್ ಅನ್ನು ಜೋಡಿಸಲಾಗಿದೆ.
ಮುಂಬೈ, ದೆಹಲಿ, ಬೆಂಗಳೂರು, ಪುಣೆ, ಕೋಲ್ಕತಾ, ಹೈದರಾಬಾದ್, ಸೂರತ್, ಗುವಾಹಟಿ ಮತ್ತು ಚೆನ್ನೈ ಸೇರಿದಂತೆ ದೇಶದ ಒಂಬತ್ತು ನಗರಗಳಲ್ಲಿ ಮಾತ್ರ 790 ಡ್ಯೂಕ್ ಲಭ್ಯವಿದೆ. 2020ರ ಏಪ್ರಿಲ್ ವೇಳೆಗೆ ಬಿಎಸ್-6 ಡ್ಯೂಕ್ 790 ಆವೃತ್ತಿಯನ್ನು 30 ಕ್ಕೂ ಹೆಚ್ಚು ನಗರಗಳಲ್ಲಿಈ ಮಾರಾಟ ಮಾಡುವ ಯೋಜನೆಯನ್ನು ಕಂಪನಿ ರೂಪಿಸಿದೆ.
ಡ್ಯೂಕ್ 790 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750, ಡುಕಾಟಿ ಮಾನ್ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ -09 ಮತ್ತು ಕವಾಸಕಿ 9 ಝಡ್900 ಬೈಕ್ಗಳಿಗೆ ಪೈಪೋಟಿ ನೀಡುತ್ತಿವೆ. ಕೆಟಿಎಂ 790 ಬೆಲೆಯು ತನ್ನ ಪ್ರತಿಸ್ಪರ್ಧಿಗಳಿಗಿಂತ ದುಬಾರಿಯಾಗಿದೆ.
ಕೆಟಿಎಂ ಡ್ಯೂಕ್ 790 ಬೈಕ್ 799 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 ಬಿಎಚ್ಪಿ ಪವರ್ ಮತ್ತು 87 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಿದ್ದಾರೆ. 169 ಕೆಜಿ ಡ್ರೈ ತೂಕದೊಂದಿಗೆ, ಡ್ಯೂಕ್ 790 ತನ್ನ ವಿಭಾಗದಲ್ಲಿ ಹಗುರವಾದ ಬೈಕ್ಗಳಲ್ಲಿ ಒಂದಾಗಿದೆ.
ಡ್ಯೂಕ್ 790 ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 240 ಎಂಎಂ ಡಿಸ್ಕ್ ಅನ್ನು ಅಳವಡಿಸಿದ್ದಾರೆ.
ಡ್ಯೂಕ್ 790 ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ನಾಲ್ಕು ರೈಡಿಂಗ್ ಮೋಡ್ಗಳನ್ನು ಹೊಂದಿದೆ. ಅವುಗಳಲ್ಲಿ ರೈನ್, ಸ್ಟ್ರೀಟ್ಸ್, ಸ್ಪೋರ್ಟ್ಸ್, ಮತ್ತು ಟ್ರ್ಯಾಕ್ ಮೋಡ್ಗಳಾಗಿವೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಂ) ಮತ್ತು ಲೀನ್ ಆ್ಯಂಗಲ್ ಸೆನೆಸ್ಟಿವ್ ಅನ್ನು ಹೊಂದಿದೆ.
ಇದರೊಂದಿಗೆ ಮೋಟಾರ್ ಸ್ಲಿಪ್ ರೆಗ್ಯೋಲೇಶನ್, ಸ್ಟೇಬಿಲಿಟಿ ಕಂಟ್ರೋಲ್, ಸ್ಲಿಪ್ಲರ್ ಕ್ಲಚ್ ಮತ್ತು ಕ್ಲಚ್ಲೆಸ್ ಆಪ್ಶಿಫ್ಟ್ ಮತ್ತು ಡೌನ್ಶಿಫ್ಟ್ ಮತ್ತು ಕ್ವಿಕ್ ಶಿಪ್ಟರ್ ಅನ್ನು ಸಹ ಒಳಗೊಂಡಿದೆ. ಕೆಟಿಎಂ ಡ್ಯೂಕ್ 790 ಸಂಪೂರ್ಣ ಡಿಜೆಟಲ್ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಡಿಸ್ಪ್ಲೇಯನ್ನು ಹೊಂದಿದ್ದು, ಸವಾರನಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ.
ಕೆಟಿಎಂ ಕಂಪನಿಯು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಶೀಘ್ರದಲ್ಲೇ ಡ್ಯೂಕ್ 790 ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಎಸ್-4 ಡ್ಯೂಕ್ 790 ಬೈಕಿನ ಮಾರಾಟವಾದ ಸಂಖ್ಯೆಯು ಶೂನ್ಯವಾಗಿದೆ. ಇದರಿಂದ ಬಿಎಸ್-4 ಡ್ಯೂಕ್ 790 ಬೈಕಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.