Just In
- 9 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಟಿಎಂ ಮತ್ತು ಹಸ್ಕ್‌ವರ್ನಾ ಬೈಕುಗಳ ಮೇಲೆ ಭರ್ಜರಿ ಆಫರ್
ಆಸ್ಟ್ರೀಯಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಮತ್ತು ಹಸ್ಕ್‌ವರ್ನಾ ತನ್ನ ಸರಣಿಯಲ್ಲಿರುವ ಬೈಕುಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಈ ಎರಡು ಕಂಪನಿಗಳ ಬೈಕುಗಳನ್ನು ಖರೀದಿಸುವವರಿಗೆ ಉಚಿತ ವಿಸ್ತೃತ ವಾರಂಟಿ, ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಮತ್ತು ಇತರ ಆಫರ್ ಗಳನ್ನು ಒಳಗೊಂಡಿದೆ.

ಈ ತಿಂಗಳ 28ರಿಂದ ಪ್ರಾರಂಭವಾಗಿ ಈ ವರ್ಷದ ಸೆಪ್ಟೆಂಬರ್ 20ರವರೆಗೆ ಕೆಟಿಎಂ ಮತ್ತು ಹಸ್ಕ್‌ವರ್ನಾ ಬೈಕುಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಈ ಆಫರ್ ಗಳು ಲಭ್ಯವಿರಲಿದೆ. ಇನ್ನು ಕಂಪನಿಯು ಮೂರು ವರ್ಷಗಳ ವಿಸ್ತೃತ ವಾರಂಟಿಯನ್ನು ನೀಡುವುದರುವುದರೊಂದಿಗೆ ಬೈಕಿಗೆ ಒಟ್ಟು ಐದು ವರ್ಷಗಳ ವಾರಂಟಿ ಲಭ್ಯವಿರುತ್ತದೆ. ಇನ್ನು ಒಂದು ವರ್ಷಗಳಕಾಲ ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಕೂಡ ಒಂದು ವರ್ಷವರೆಗೆ ಉಚಿತವಾಗಿ ಪಡೆಯಬಹುದು.

ಇದರೊಂದಿಗೆ ಕೆಟಿಎಂ ಮತ್ತು ಹಸ್ಕ್‌ವರ್ನಾ ಬೈಕುಗಳನ್ನು ಖರೀದಿಸುವ ಗ್ರಾಹಕರಿಗೆ ರಿವಾರ್ಡ್ಸ್ ಕಾರ್ಯಕ್ರಮದ ಪ್ರಯುಕ್ತ ಉಚಿತವಾಗಿ ಪ್ರತಿವಾರ ಐಫೋನ್ 11 ಗೆಲ್ಲುವ ಅವಕಾಶವೂ ಲಭಿಸುತ್ತದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಇನ್ನು ಕೆಟಿಎಂ ಇಂಡಿಯಾ ಕಂಪನಿಯು ಬಿಎಸ್-6 390 ಅಡ್ವೆಂಚರ್ ಬೈಕಿನ ಮೇಲೆ ಭರ್ಜರಿ ಫೈನಾನ್ಸ್ ಆಫರ್ ಅನ್ನು ಘೋಷಿಸಿದೆ. ಇದರೊಂದಿಗೆ ರೂ.6,999 ಗಳಿಂದ ಪ್ರಾರಂಭವಾಗುವ ಇಎಂಐ ಆಫರ್ ಅನ್ನು ಕೂಡ ನೀಡಿದೆ.

ಕೆಟಿಎಂ 390 ಅಡ್ವೆಂಚರ್ ಬೈಕಿನ ಆನ್ ರೋಡ್ ಬೆಲೆಯ ಶೇ.80 ರಷ್ಟು ಹಣವನ್ನು ಫೆನಾನ್ಸ್ ಆಫರ್ ಅಲ್ಲಿ ನೀಡಲಾಗುತ್ತದೆ. ಇದನ್ನು ಮರುಪಾವತಿಸಲು ಐದು ವರ್ಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. ಈ ಕೆಟಿಎಂ ಅಡ್ವೆಂಚರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.04 ಲಕ್ಷಗಳಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಇನ್ನು ಗ್ರಾಹಕರು ಬಜಾಜ್ ಫೈನಾನ್ಸ್ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನೀಡುವ ಶೇ.95 ರಷ್ಟು ಹಣಕಾಸು ಪ್ಯಾಕೇಜ್ ಅಥವಾ ಇನ್ನಿತರ ಹಣಕಾಸು ಆಫರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದರಲ್ಲಿ ಸಂಸ್ಥೆಯು ಕಡಿಮೆ ಬಡ್ಡಿದರ ಮತ್ತು ಹೆಚ್ಚಿನ ಮರುಪಾವತಿ ಅವಧಿಯ ಆಯ್ಕೆಯನ್ನು ಹೊಂದಿರುತ್ತದೆ. ಇನ್ನು ಕೆಟಿಎಂ ಡೀಲರ್ ಗಳ ಬಳಿ ಎಕ್ಸ್‌ಚೇಂಜ್ ಅಫರ್ ಕೂಡ ಲಭ್ಯವಿರಲಿದೆ.
MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಹಸ್ಕ್‌ವರ್ನಾ ಕಂಪನಿಯು ಈ ವರ್ಷದ ಆರಂಭದಲ್ಲಿ ಸ್ವಾರ್ಟ್‍ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹಸ್ಕ್‌ವರ್ನಾ ಕಂಪನಿಯು ಹೊಸ ಸ್ವಾರ್ಟ್‍ಪಿಲೆನ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಇದರ ಭಾಗವಾಗಿ ಭಾರತದಲ್ಲಿ ಹಸ್ಕ್‌ವರ್ನಾ ಸ್ವಾರ್ಟ್‍ಪಿಲೆನ್ 200 ಬೈಕ್ ಸ್ಪಾಟ್ ಟೆಸ್ಟ್ ನಡಿಸಿದೆ. ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍ಪಿಲೆನ್ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಬೈಕನ್ನು ಬಿಡುಗಡೆಗೊಳಿಸಬಹುದು.