ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಕೆಟಿಎಂ ಸೈಕಲ್‌ಗಳು

ಕರೋನಾ ವೈರಸ್ ಬಳಿಕ ಹಲವು ಜನರು ಸಾರ್ವಜನಿಕ ವಾಹನಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಹಲವರು ಕಡಿಮೆ ಬೆಲೆಯ ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದರೆ, ಇನ್ನು ಕೆಲವರು ಸೈಕಲ್ ಸವಾರಿಗೆ ಕಡೆ ಮುಖ ಮಾಡುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಸಿಟಿಗಳಲ್ಲಿ ವಿದೇಶಿಗರು ಮಾತ್ರ ಹೆಚ್ಚಾಗಿ ಸೈಕಲ್ ಸವಾರಿ ಮಾಡುತ್ತಿದ್ದರೆ. ಆದರೆ ಇತ್ತೀಚೆಗೆ ಯುವಜನತೆ ಹೆಚ್ಚಾಗಿ ಸೈಕಲ್ ಸವಾರಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಇದಕ್ಕಾಗಿ ಹಲವಾರು ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಸೈಕಲ್ ಗಾಗಿ ಹೂಡಿಕೆ ಮಾಡಲು ಚಿಂತಿಸುತ್ತಿದೆ. ಇದರ ನಡುವೆ ಬೈಸಿಕಲ್ ಬ್ರ್ಯಾಂಡ್ ಆಲ್ಫಾವೆಕ್ಟರ್ ಜೊತೆ ಕೆಟಿಎಂ ಪಾಲುದಾರಿಕೆಯನ್ನು ಆರಂಭಿಸಿರುವುದಾಗಿ ಘೋಷಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಭಾರತದಲ್ಲಿ ಆಲ್ಫಾವೆಕ್ಟರ್ ಮಾರಾಟ ಮಾಡಲಿರುವ ಕೆಟಿಎಂ ಸೈಕಲ್‌ಗಳ ಬೆಲೆಯು ರೂ.30,000 ದಿಂದ ರೂ.10 ಲಕ್ಷದ ನಡುವೆ ಇರುತ್ತದೆ. ಇನ್ನು ಇದರ ಕುರಿತು ಸಿಇಒ ಸಚಿನ್ ಚೋಪ್ರಾ ಅವರು ಮಾತನಾಡಿ, ಭಾರತದಲ್ಲಿ ಸೈಕ್ಲಿಂಗ್ ಬದಲಾವಣೆಯನ್ನು ಕಂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಹೆಚ್ಚಿನ ಯುವಕರು ಸೈಕಲ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಜನರು ಸೈಕ್ಲಿಂಗ್ ಅನ್ನು ಜೀವನಶೈಲಿಯಾಗಿಸುತ್ತಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಪ್ರೀಮಿಯಂ ಸೈಕಲ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕೆಟಿಎಂ ಸಹಭಾಗಿತ್ವದಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಇನ್ನು ಇದರ ಕುರಿತು ಟಿಎಂ ಬೈಕ್ ಇಂಡಸ್ಟ್ರೀಸ್ ಎಂಡಿ ಜೋಹಾನ್ನಾ ಉರ್ಕಾಫ್ ಅವರು ಮಾತನಾಡಿ,56 ವರ್ಷಗಳಿಂದ ಕೆಟಿಎಂ ಬೈಕ್ ಇಂಡಸ್ಟ್ರೀಸ್ ಬೈಕುಗಳನ್ನು ತಯಾರಿಸುವಲ್ಲಿ ಅತ್ಯುನ್ನತ ಗುಣಮಟ್ಟವನ್ನು ಇಟ್ಟುಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ನಾವು ಅನ್ವೇಷಣೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಮ್ಮ ಪ್ರೀಮಿಯಂ ಸೈಕಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಆಲ್ಫಾವೆಕ್ಟರ್ ಜೊತೆ ಪಾಲುದಾರಿಕೆ ನಮ್ಮ ಸಂತೋಷವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಮೆಟ್ರೊ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಪುಣೆ ಮತ್ತು ಹೈದರಾಬಾದ್‌ನಿಂದ ಪ್ರೀಮಿಯಂ ಸೈಕಲ್‌ಗಳಿಗೆ 75% ಬೇಡಿಕೆಯನ್ನು ಪಡೆಯಬಹುದು ಎಂದು ಆಲ್ಫಾವೆಕ್ಟರ್ ನಿರೀಕ್ಷಿಸುತ್ತಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಭಾರತದ 350 ಕ್ಕೂ ಹೆಚ್ಚು ನಗರಗಳಲ್ಲಿ ಇರುವ ಆಲ್ಫಾವೆಕ್ಟರ್ ಕಂಪನಿಯು ತನ್ನ ಓಮ್ನಿಚಾನಲ್ ವ್ಯವಹಾರ ಮಾದರಿಯೊಂದಿಗೆ ಕೆಟಿಎಂ ಪ್ರೀಮಿಯಂ ಸೈಕಲ್‌ಗಳನ್ನು ಮಾರಾಟ ಮಾಡಲು ಯೋಜಿಸಿದೆ. ಅಲ್ಲದೇ ಹಲವು ಕಾರ್ಯಕ್ರಮ ಹಮ್ಮಿಕೊಂಡು ಗ್ರಾಹಕರನ್ನು ಸೆಳೆಯುವ ತಂತ್ರವನ್ನು ರೂಪಿಸಲು ಚಿಂತಿಸುತ್ತಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ರೂ.30 ಸಾವಿರದಿಂದ ರೂ.10 ಲಕ್ಷದವರೆಗಿನ ಬೆಲೆಯ ಕೆಟಿಎಂ ಸೈಕಲ್‌ಗಳು

ಸೈಕ್ಲಿಂಗ್ ನಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ತೂಕ ಇಳಿಕೆಯಿಂದ ಹಿಡಿದು ಮನಸ್ಸಿಗೆ ಆಹ್ಲಾದ ನೀಡುವವರೆಗೆ ಸೈಕ್ಲಿಂಗ್ ಹಲವು ರೀತಿಯಲ್ಲಿ ನಮಗೆ ಅನುಕೂಲಗಳನ್ನುಂಟು ಮಾಡುತ್ತದೆ. ಕೆಲಸಕ್ಕೆ, ಶಾಲೆಗೆ, ಪಾರ್ಕ್‌ಗೆ ಹೋಗಲು ನಿಜಕ್ಕೂ ಸೈಕಲ್ ಅನುಕೂಲಕಾರಿ. ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸೈಕ್ಲಿಂಗ್‌ನಷ್ಟು ಉತ್ತಮವಾದ ವ್ಯಾಯಾಮ ಇನ್ನೊಂದಿಲ್ಲ.

Most Read Articles

Kannada
Read more on ಕೆಟಿಎಂ ktm
English summary
KTM Cycles To Enter Indian Space. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X