500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

ಆಸ್ಟ್ರಿಯಾ ಮೂಲದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಹೊಸ 500 ಸಿಸಿ ಬೈಕ್‌ ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಭಾರತದಲ್ಲಿ 500 ಸಿಸಿಯ ನೇಕೆಡ್ ಹಾಗೂ ಟೂರಿಂಗ್ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಕೆಟಿಎಂ ಕಂಪನಿಯು ಭಾರತದಲ್ಲಿ ಬಜಾಜ್ ಆಟೋ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

ಮೂಲಗಳ ಪ್ರಕಾರ ಬಜಾಜ್ ಕಂಪನಿಯು ಭಾರತದಲ್ಲಿ ಕೆಟಿಎಂನ ಹೊಸ 500 ಸಿಸಿ ಬೈಕ್‌ಗಳನ್ನು ತಯಾರಿಸಲಿದೆ. ಸದ್ಯಕ್ಕೆ ಪುಣೆಯ ಚಕನ್ ಉತ್ಪಾದನಾ ಘಟಕದಲ್ಲಿ ಕೆಟಿಎಂ ಬೈಕ್‌ಗಳನ್ನು ತಯಾರಿಸಲಾಗುತ್ತಿದೆ. ಕೆಟಿಎಂನಲ್ಲಿ ಬಜಾಜ್ ಆಟೋ ಕಂಪನಿಯು 48%ನಷ್ಟು ಪಾಲನ್ನು ಹೊಂದಿದೆ. ಸ್ವೀಡನ್ ಮೂಲದ ಬೈಕ್ ತಯಾರಕ ಕಂಪನಿಯಾದ ಹಸ್ಕ್‌ವರ್ನಾ ಸಹ ಕೆಟಿಎಂ ಎಂಜಿನ್‌ಗಳನ್ನು ಬಳಸುತ್ತಿದೆ. ಹಸ್ಕ್‌ವರ್ನಾ ತನ್ನ ಬೈಕ್‌ಗಳಲ್ಲಿ ಕೆಟಿಎಂನ ಹೊಸ 500 ಸಿಸಿ ಎಂಜಿನ್‌ಗಳನ್ನು ಸಹ ಬಳಸಲಿದೆ.

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

ಪುಣೆಯಲ್ಲಿರುವ ಬಜಾಜ್‌ನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದಲ್ಲಿ 500 ಸಿಸಿಯ ಹೊಸ ಎಂಜಿನ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಕೆಟಿಎಂ ಅಧಿಕೃತವಾಗಿ ಪ್ರಕಟಿಸಿದೆ. ಹೊಸ 500 ಸಿಸಿ ಬೈಕ್‌ಗಳನ್ನು ನೇಕೆಡ್, ಟೂರಿಂಗ್ ಹಾಗೂ ಪೂರ್ಣ ಫೇರಿಂಗ್ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

ಈ ಎಲ್ಲಾ ಮಾದರಿಗಳು ಪ್ಯಾರಾಲೆಲ್ ಟ್ವಿನ್ ಕೂಲ್ಡ್ ಎಂಜಿನ್‌ಗಳನ್ನು ಹೊಂದಿರಲಿವೆ. ಈ ಮಾದರಿಗಳಲ್ಲಿ ಹೊಸ ಫ್ರೇಮ್‌ ಅಳವಡಿಸಲಾಗುವುದು. ಹೊಸ ಫ್ರೇಮ್ ಕೆಟಿಎಂ 390 ಡ್ಯೂಕ್‌ ಬೈಕ್‌ನಲ್ಲಿರುವುದಕ್ಕಿಂತ ದೊಡ್ಡದಾಗಿ ಹಾಗೂ 790 ಡ್ಯೂಕ್‌ಗಿಂತ ಚಿಕ್ಕದಾಗಿರಲಿದೆ. ಇದರಲ್ಲಿ ಹೊಸ ಟ್ರೆಲ್ಲಿಸ್ ಫ್ರೇಮ್ ಅಳವಡಿಸಬಹುದು.

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

500 ಸಿಸಿ ಬೈಕ್‌ಗಳಿಗೆ ಕೆಟಿಎಂ 490 ಡ್ಯೂಕ್, ಕೆಟಿಎಂ 490 ಆರ್‌ಸಿ ಹಾಗೂ ಕೆಟಿಎಂ ಅಡ್ವೆಂಚರ್ ಎಂದು ಹೆಸರಿಡುವ ಸಾಧ್ಯತೆಗಳಿವೆ. ಕೆಟಿಎಂ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ಮೂರು ಶ್ರೇಣಿಯ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

500 ಸಿಸಿ ಬೈಕ್‌ಗಳನ್ನು ಭಾರತದಲ್ಲಿ 2022ರ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಎಲ್ಲಾ ಬೈಕ್‌ಗಳು ಭಾರತದಲ್ಲಿಯೇ ತಯಾರಾಗುವುದರಿಂದ ಅವುಗಳ ಬೆಲೆ ಸ್ಪರ್ಧಾತ್ಮಕವಾಗಿರಲಿದೆ. 500 ಸಿಸಿ ಬೈಕ್‌ಗಳ ಬೆಲೆ ರೂ.4 ಲಕ್ಷದಿಂದ ರೂ.4.5 ಲಕ್ಷಗಳಾಗುವ ಸಾಧ್ಯತೆಗಳಿವೆ.

500 ಸಿಸಿ ಎಂಜಿನ್‌ನಲ್ಲಿ ಬಿಡುಗಡೆಯಾಗಲಿವೆ ಕೆಟಿಎಂ ಬೈಕ್‌ಗಳು

ಲಾಕ್‌ಡೌನ್ ಸಡಿಲಿಕೆಯ ನಂತರ ಕಂಪನಿಯು ದೇಶದಲ್ಲಿರುವ ತನ್ನ ಶೋರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ತೆರೆಯಲು ಆರಂಭಿಸಿತು. ಕಂಪನಿಯ ಬಹುತೇಕ ಶೋರೂಂಗಳನ್ನು ಪುನರಾರಂಭಿಸಲಾಗಿದೆ. ಭಾರತದಲ್ಲಿ ಕೆಟಿಎಂ ಹಾಗೂ ಹಸ್ಕ್‌ವರ್ನಾ ಬೈಕ್‌ಗಳನ್ನು ಒಂದೇ ಡೀಲರ್‌ಗಳ ಬಳಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM developing 500cc bikes for Indian market. Read in Kannada.
Story first published: Thursday, June 18, 2020, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X