Just In
- 2 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 3 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 4 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 4 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಕೆಟಿಎಂ ಡ್ಯೂಕ್ 200
ಭಾರತದಲ್ಲಿ ಹೊಸ ಬಿಎಸ್ 6 ಮಾಲಿನ್ಯ ನಿಯಮ ಏಪ್ರಿಲ್ 1ರಿಂದ ಜಾರಿಗೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ.
ಇದರಿಂದ ಜನಪ್ರಿಯ ಕೆಟಿಎಂ ಕಂಪನಿಯು ಸಹ ಹೊರತಾಗಿಲ್ಲ. ಕೆಟಿಎಂ ಕಂಪನಿಯು ಈ ಮೊದಲು ತನ್ನ 390 ಅಡ್ವೆಂಚರ್ ಬೈಕ್ ಅನ್ನು ಬಿಎಸ್ 6 ಎಂಜಿನ್ನೊಂದಿಗೆ ಬಿಡುಗಡೆಗೊಳಿಸಿತ್ತು. ಈಗ ಡ್ಯೂಕ್ 390 ಮತ್ತು ಡ್ಯೂಕ್ 250 ಬೈಕ್ಗಳನ್ನು ಸಹ ಬಿಎಸ್ 6 ಎಂಜಿನ್ನೊಂದಿಗೆ ಬಿಡುಗಡೆಗೊಳಿಸಿದೆ. ಇದೀಗ ತನ್ನ ಸರಣಿಯಲ್ಲಿರುವ ಡ್ಯೂಕ್ 250 ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದ್ದಾರೆ.
ಕೆಟಿಎಂ ಡ್ಯೂಕ್ 390 ಬೈಕ್ ಅನ್ನು 2017ರಲ್ಲಿ ನವೀಕರಿಸಲಾಗಿತ್ತು. ಆದರೆ ಕೆಟಿಎಂ ಕಂಪನಿಯು ಡ್ಯೂಕ್ 200 ಬೈಕ್ ಅನ್ನು ನವೀಕರಿಸಿಲ್ಲ. ಆದರೆ ಜನಪ್ರಿಯ ಕಾಂಪ್ಯಾಕ್ಟ್ ಡ್ಯೂಕ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿ 250 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.
ಕಂಪನಿಯು ಡ್ಯೂಕ್ 200 ಬೈಕಿನ ಉತ್ತರಾಧಿಕಾರಿ ಡ್ಯೂಕ್ 250 ಎಂದು ತಿಳಿಸಿತ್ತು. ಆದರೆ ಆಸ್ಟ್ರೀಯನ್ ಬ್ರ್ಯಾಂಡ್ ಹಳೆಯ ಡ್ಯೂಕ್ 250 ಅದರ ಮೂಲ ವಿನ್ಯಾಸದಲ್ಲಿ ಇರಿಸಲು ಬಯಸಿದ್ದರು. ಭಾರತದಲ್ಲಿ ಈ ಮಾದರಿಯು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು.
ಇದೀಗ ಕೆಟಿಎಂ ಡ್ಯೂಕ್ 200 ಅಭಿಮಾನಿಗಳಿಗೆ ಕಂಪನಿಯು ಹೊಸ ಸಿಹಿ ಸುದ್ದಿ ನೀಡಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಡ್ಯೂಕ್ 200 ಬೈಕ್ ಅನ್ನು ನವೀಕರಿಸಲು ನಿರ್ಧರಿಸಿದೆ. 2020ರ ಕೆಟಿಎಂ ಡ್ಯೂಕ್ 200 ಚಿತ್ರಗಳು ಆನ್ಲೈನ್ನಲ್ಲಿ ಬಹಿರಂಗವಾಗಿದೆ. ಹೊಸ ಕೆಟಿಎಂ 200 ಬೈಕ್ ಶೀಘ್ರದಲ್ಲೇ ಡೀಲರ್ಗಳನ್ನು ತಲಪಲು ಪ್ರಾರಂಭವಾಗಬಹುದು.
ಕೆಟಿಎಂ ಕಂಪನಿಯು ಡ್ಯೂಕ್ 200 ಬೈಕ್ ಅನ್ನು ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೊಸ ಡ್ಯೂಕ್ 200 ಬೈಕ್ ಮುಂಭಾಗ ಟ್ರೈಗಲರ್ ಹೆಡ್ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನೂ ಫುಲ್ ಎಲ್ಇಡಿ ಯುನಿಟ್ ಆಕರ್ಷಕವಾಗಿದೆ. ಕೆಟಿಎಂ ಕಂಪನಿಯ ಜನಪ್ರಿಯ ಡ್ಯೂಕ್ ಬೈಕಿನ ಸರಣಿಯಲ್ಲಿರುವ ಇತರ ಬೈಕ್ಗಳಂತೆ ಈ ಬೈಕಿನ ಫ್ಯೂಯಲ್ ಟ್ಯಾಂಕ್ ದೊಡ್ಡದಾಗಿದೆ.
2020ರ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿ ದೊಡ್ಡ ಸ್ಪ್ಲಿಟ್ ಸೀಟ್ ಮತ್ತು ಹೊಸ ಎಲ್ಇಡಿ ಟೇಲ್ಲೈಟ್ನೊಂದಿಗೆ ಹೊಸ ರೇರ್ ಸಬ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕ್ ಹಳೆಯ ಡಿಜಟಲ್ ಕ್ಲಸ್ಟರ್, ಹ್ಯಾಂಡಲ್ಬಾರ್ ಮತ್ತು ಸ್ವಿಚ್ಗೇರ್ ಅನ್ನು ಹೊಂದಿದೆ. ಹೊಸ ಬಣ್ಣ ಮತ್ತು ಆಕರ್ಷಕ ವಿನ್ಯಾಸವನ್ನು ಈ ಬೈಕ್ ಹೊಂದಿದೆ.
ಹೊಸ ಕೆಟಿಎಂ ಡ್ಯೂಕ್ 200 ಬೈಕ್ 17 ಇಂಚಿನ ಅಲಾಯ್ ವ್ಹೀಲ್, 300 ಎಂಎಂ ಫ್ರಂಟ್ ಡಿಸ್ಕ್, 230 ಎಂಎಂ ರೇರ್ ಡಿಸ್ಕ್, ಡಬ್ಲ್ಯೂಪಿ ಇನ್ವಟೆರ್ಡ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ರೇರ್ ಮೊನೊಶಾಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.
2020ರ ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.6 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಡ್ಯೂಕ್ 125 ಬೈಕ್ ಅನ್ನು ಕೂಡ ಮುಂದಿನ ದಿನಗಳಲ್ಲಿ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ.