ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಭಾರತೀಯರಿಗೆ ಸಿನಿಮಾ ಕ್ರೇಜ್ ಹೆಚ್ಚೆ ಇದೆ. ಭಾರತೀಯ ಸಿನಿಮಾಗಳು ಕೂಡ ಐಷಾರಾಮಿ ಕಾರು ಬೈಕುಗಳನ್ನು ಬಳಸುತ್ತಾರೆ. ಕೆಲವು ಆಕ್ಷನ್ ಸಿನಿಮಾಗಳಲ್ಲಿ ಮಾಡಿಫೈ ಮಾಡಲಾದ ಬೈಕ್ ಮತ್ತು ಕಾರುಗಳನ್ನು ಕೂಡ ಬಳಸುತ್ತಾರೆ.

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಭಾರತೀಯ ಸಿನಿ ಪ್ರಿಯರು ಕೂಡ ಆಕ್ಷನ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಮೊದಲು ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಹೆಚ್ಚಾಗಿ ಐಷಾರಾಮಿ ಬೈಕುಗಳು ಅಥವಾ ಅತಿಯಾದ ಮಾಡಿಫೈ ಬೈಕ್‍ಗಳನ್ನು ಕಾಣಬಹುದಿತ್ತು. ನಂತರ ಭಾರತೀಯ ಸಿನಿಮಾಗಳಲ್ಲಿಯು ಕೂಡ ಬಳಸಲು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಪ್ರಾದೇಶಿಕ ಸಿನಿಮಾಗಳಲ್ಲಿಯು ಕೂಡ ಮಾಡಿಫೈ ಬೈಕ್‍ಗಳನ್ನು ಬಳಸುತ್ತಾರೆ. ಆಕ್ಷನ್ ಸಿನಿಮಾಗಳಲ್ಲಿ ಅತಿಯಾಗಿ ಮಾಡಿಫೈ ಮಾಡಲಾದ ಬೈಕುಗಳ ದೊಡ್ಡ ಸೌಂಡ್ ಮತ್ತು ಅದರ ಫರ್ಪಾಮೆನ್ಸ್ ಜನರಿಗೆ ಮತ್ತಷ್ಟು ರೋಚಕತೆಯನ್ನು ಸೃಷ್ಟಿಸುತ್ತದೆ.

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ತಮಿಳು 'ಹೀರೋ' ಸಿನಿಮಾದಲ್ಲಿ ಮಾಡಿಫೈ ಬೈಕ್ ಕೂಡ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಚಿತ್ರದ ಪೋಸ್ಟರ್ ಗಳಲ್ಲಿ ಈ ಮಾಡಿಫೈ ಮಾಡಿದ ಕೆಟಿಎಂ ಡ್ಯೂಕ್ 200 ಬೈಕ್ ಪ್ರಮುಖ ಆರಷರ್ಣೆಯಾಗಿತ್ತು. ಶಿವಕಾರ್ತಿಕೇಯನ್, ಅರ್ಜುನ್ ಸರ್ಜಾ ಮತ್ತು ಅಭಯ್ ಡಿಯೋಲ್ ನಟಿಸಿರುವ ಹೀರೋ ಚಿತ್ರದಲ್ಲಿ ಇದೇ ಬೈಕನ್ನು ಬಳಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಹೀರೋ ಚಿತ್ರದಲ್ಲಿ ಮಿಂಚಿದ ಬೈಕ್ ಅನ್ನು ದೆಹಲಿ ಮೂಲದ ನೀವ್ ಮೋಟಾರ್‌ಸೈಕಲ್‌ ಕಸ್ಟಂ ಅವರು ಮಾಡಿಫೈ ಮಾಡಿದ್ದಾರೆ. ನೀವ್ ಮೋಟಾರ್‌ಸೈಕಲ್ ಕಸ್ಟಂ ವಿನ್ಯಾಸಕ ಮತ್ತು ಸಂಸ್ಥಾಪಕ ನವನೀತ್ ಸೂರಿ ಅವರು ಮಾತನಾಡಿ, ಕೆಟಿಎಂ ಡ್ಯೂಕ್ 200 ಬೈಕ್ ಅನ್ನು ಸಾಕಷ್ಟು ಸಮಯ ತೆಗೆದು ಆಸಕ್ತಿಯಿಂದ ತಯಾರಿಸಿದ್ದೇವೆ.

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಈ ಬೈಕ್ ಅನ್ನು ಸ್ಮಾರ್ಟ್ ಕಾಲೇಜ್ ವಿದ್ಯಾರ್ಥಿಗಳು ನಿರ್ಮಿಸಿದು ಎಂದು ಭಾವಿಸಬೇಕು ಆ ರೀತಿ ಇದನ್ನು ಮಾಡಿಫೈ ಮಾಡಿದ್ದೇವೆ. ಇದನ್ನು ಸಾಕಷ್ಟು ಮೆಟಲ್ ಮತ್ತು ವೆಲ್ಡಿಂಗ್‌ಗಳನ್ನು ಮಾಡಿ ಮಾಡಿಫೈ ಮಾಡಿದ್ಡೇವೆ. ಕೆಟಿಎಂ ಡ್ಯೂಕ್ 200 ಅಗ್ರೇಸಿವ್ ಲುಕ್ ಕಾಣಲು ಸಾಕಷ್ಟು ಪರಿಶ್ರಮವನ್ನು ವಹಿಸಿದ್ಡೇವೆ ಎಂದು ಹೇಳಿದರು.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಈ ಬೈಕ್ ಅನ್ನು ಮಾಡಿಫೈ ಮಾಡಲು ನವನೀತ್ ಮತ್ತು ಅವರ ತಂಡ ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ಈ ಬೈಕಿನ ಚಾಸಿಸ್ ಅನ್ನು ಕೂಡ ಗಮನಾರ್ಹವಾಗಿ ಬದಲಾವಣೆಗಳನ್ನು ಮಾಡಲಾಗಿದೆ.

ಈ ವೀಡಿಯೋದಲ್ಲಿರುವುದು ವಾಸ್ತವಾಗಿ ಎರಡನೇ ಬಾರಿ ಇವರು ಕೆಟಿಎಂ ಡ್ಯೂಕ್ 200 ಬೈಕ್ ಅನ್ನು ಮಾಡಿಫೈ ಮಾಡುತ್ತಿರುವ ದೃಶ್ಯ. ಈ ಬೈಕ್ ಅನ್ನು ಸಂಪೂರ್ಣವಾಗಿ ಮಾಡಿಫೈ ಮಾಡಲು 40 ದಿನಗಳ ಅವಧಿಯನ್ನು ತೆಗೆದುಕೊಂಡಿದ್ದಾರೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

2020ರ ಕೆಟಿಎಂ ಡ್ಯೂಕ್ 200 ಮತ್ತು ಆರ್‍‍‍ಸಿ 200 ಬೈಕಿಗಳಲ್ಲಿ ಅಲ್ಟ್ರಾ-ಕಾಂಪ್ಯಾಕ್ಟ್ ಲಿಕ್ವಿಡ್ ಕೂಲ್ಡ್ ಡಿಒ‍ಹೆಚ್‍‍ಸಿ 4 ವಾಲ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.6 ಬಿ‍ಹೆಚ್‍‍ಪಿ ಪವರ್ ಮತ್ತು 19.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೀರೊ ಚಿತ್ರದ ಬೈಕ್ ತಯಾರಾಗಿದ್ದು ಹೇಗೆ ಗೊತ್ತಾ?

ಈ ಬೈಕ್ ಅನ್ನು ಸಿನಿಮಾದ ಆಕ್ಷನ್ ದೃಶ್ಯಗಳನ್ನು ಚಿತ್ರಿಕರಿಸಲು ಚೆನ್ನೈಗೆ ತಂದಿದ್ದರು. ಆಕ್ಷನ್ ದೃಶ್ಯಗಳಲ್ಲಿ ಆರಂಭದಲ್ಲಿ ಕೆಲವು ಸಮಸ್ಯೆಗಳಾಗಿತ್ತು. ನಂತರದಲ್ಲಿ ಈ ಬೈಕ್ ಉತ್ತಮ ಫರ್ಪಾಮೆನ್ಸ್ ನಿಂದ ಸಿನಿಮಾ ತಂಡವು ನೀವ್ ಮೋಟಾರ್‌ಸೈಕಲ್‌ ಕಸ್ಟಂ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Most Read Articles

Kannada
Read more on ಕೆಟಿಎಂ ktm
English summary
KTM Duke 200 modified to feature in a movie. Read in Kannada.
Story first published: Monday, April 13, 2020, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X