ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್‌ನಂತೆ ಬಹುತೇಕ ವಾಹನ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ್ದು, ಕರೋನಾ ವೈರಸ್ ಪರಿಣಾಮ ಕೆಟಿಎಂ ಕಂಪನಿಯು ತನ್ನ ಜನಪ್ರಿಯ ಸ್ಟ್ರೀಟ್ ಫೈಟರ್ ಬೈಕ್ ಮಾದರಿಯಾದ ಡ್ಯೂಕ್ 250 ಮಾದರಿಯನ್ನು ಇದೀಗ ಬಿಡುಗಡೆಗೊಳಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಎಂಜಿನ್ ಮತ್ತು ಹೊಸ ವಿನ್ಯಾಸದ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊರತುಪಡಿಸಿ ಈ ಹಿಂದಿನ ಮಾದರಿಯೆಂತೆ ಮಾರುಕಟ್ಟೆ ಪ್ರವೇಶಿಸಿರುವ ಡ್ಯೂಕ್ 250 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.09 ಲಕ್ಷ ಬೆಲೆ ಹೊಂದಿದ್ದು, ಡ್ಯೂಕ್ 390 ಬೈಕ್ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಸೂಪರ್ ಮೊಟೊ ಮೊಡ್‌ನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಹಾಗೆಯೇ ಹೊಸ ಬೈಕಿನಲ್ಲಿ ಅವಶ್ಯಕತೆಯಿಲ್ಲದೆ ಇದ್ದಲ್ಲಿ ಹಿಂಭಾಗದ ಚಕ್ರದಲ್ಲಿ ಎಬಿಎಸ್ ಸೌಲಭ್ಯವನ್ನು ಫುಶ್ ಬಟನ್ ಮೂಲಕ ಆಫ್ ಮಾಡುವಂತಹ ಸೌಲಭ್ಯವಿದ್ದು, ಹೊಸದಾಗಿ ಎರಡು ಹೆಚ್ಚುವರಿ ಬಣ್ಣಗಳ ಆಯ್ಕೆ ನೀಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಗ್ರಾಹಕರು ಇದೀಗ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆಯೊಂದಿಗೆ ಡಾರ್ಕ್ ಗಾಲವಾನೊ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಹೊಸದಾದ ಬಾಡಿ ಗ್ರಾಫಿಕ್ಸ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಸ್ಪೋರ್ಟಿ ಖದರ್ ಹೆಚ್ಚಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ಡ್ಯೂಕ್ 250 ಬೈಕ್ ಮಾದರಿಯಲ್ಲಿ ಉನ್ನತೀಕರಿಸಲಾದ 248-ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 29.6-ಬಿಎಚ್‌ಪಿ ಮತ್ತು 24-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಹೊಸ ಎಂಜಿನ್ ನಂತರವೂ ಬೈಕಿನ ಪರ್ಫಾಮೆನ್ಸ್‌ನಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಮಾಲಿನ್ಯ ಹೊರಸೊಸುವಿಕೆ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದ್ದು, ಈ ಹಿಂದಿನ ಮಾದರಿಯಂತೆಯೇ ಡಬ್ಲ್ಯುಪಿ ಸಸ್ಷೆಂಷನ್ ಮುಂದುವರಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ 43-ಎಂಎಂ ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರದಲ್ಲಿ 10-ಹಂತಗಳಲ್ಲಿ ಮರುಹೋಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊ ಶಾರ್ಕ್ ಸೆಟ್ಅಪ್ ಜೋಡಿಸಲಾಗಿದ್ದು, ಸುರಕ್ಷತೆಗಾಗಿ ಮುಂಭಾಗದಲ್ಲಿ 320-ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 230-ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಎಸ್-6 ಎಂಜಿನ್ ಪ್ರೇರಿತ ಕೆಟಿಎಂ ಡ್ಯೂಕ್ 250 ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಬಿಎಸ್-6 ಎಂಜಿನ್ ಜೋಡಣೆ ನಂತರ 169-ಕೆ.ಜಿ ತೂಕ ಪಡೆದುಕೊಂಡಿದ್ದು, 13.5-ಲೀಟರ್ ಇಂಧನ ಟ್ಯಾಂಕ್ ಜೋಡಿಸಲಾಗಿದೆ. ಹೊಸ ಬೈಕ್ ಈಗಾಗಲೇ ಆಯ್ದ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ಬೈಕ್ ವಿತರಣೆಯು ಆರಂಭವಾಗಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM Duke 250 BS6 Launched In India. Read in Kannada.
Story first published: Wednesday, August 5, 2020, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X