ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಕೆಟಿಎಂ ಮತ್ತು ಹಸ್ಕ್​ವರ್ನಾ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಸರಣಿಯಲ್ಲಿರುವ ಆಯ್ದ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ. ಎರಡು ಬ್ರ್ಯಾಂಡ್‌ಗಳ ಬೈಕುಗಳ ಮಾದರಿಯನ್ನು ಅವಲಂಬಿಸಿ ರೂ.1,200 ರಿಂದ ರೂ.8,500 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಕೆಟಿಎಂ ಕಂಪನಿಯು ತನ್ನ ಸರಣಿಯಲ್ಲಿ ಆಯ್ದ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ ಕೆಟಿಎಂ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಕೆಟಿಎಂ 125 ಡ್ಯೂಕ್ ಮತ್ತು ಕೆಟಿಎಂ 250 ಅಡ್ವೆಂಚರ್ ಬೈಕುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಎರಡು ಹೊಸ ಬೈಕುಗಳು ಬಿಡುಗಡೆಗೊಳಿಸಿದ ಅದೇ ಬೆಲೆಗಳಲ್ಲಿ ಲಭ್ಯವಿರುತ್ತದೆ.

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಕೆಟಿಎಂ ಆರ್‌ಸಿ 125 ಮಾದರಿಯು ತುಸು ದುಬಾರಿಯಾಗಿದೆ. ಎಂಟ್ರಿ ಲೆವೆಲ್ ಫುಲ್ ಫೇರ್ಡ್ ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯನ್ನು ರೂ.1,279 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.61 ಲಕ್ಷಗಳಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಇನ್ನು ಕೆಟಿಎಂ 390 ಡ್ಯೂಕ್ ಬೆಲೆಯನ್ನು ರೂ.8,517 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ನೇಕೆಡ್ ಕೆಟಿಎಂ 390 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ. 2.66 ಲಕ್ಷಗಳಾಗಿದೆ. ಇದರೊಂದಿಗೆ ಕೆಟಿಎಂ ಕಂಪನಿಯು ತನ್ನ 250 ಡ್ಯೂಕ್ ಬೈಕಿನ ಬೆಲೆಯನ್ನು ರೂ.4,738 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಹೊಸ ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.14 ಲಕ್ಷಗಳಾಗಿದೆ.

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಇನ್ನು ಕೆಟಿಎಂ ಜನಪ್ರಿಯ ಆರ್‌ಸಿ 390 ಬೈಕಿನ ಬೆಲೆಯನ್ನು ರೂ.3,539 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಈ ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.56 ಲಕ್ಷಗಳಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಕೆಟಿಎಂ ಡ್ಯೂಕ್ 200 ಮತ್ತು 390 ಅಡ್ವೆಂಚರ್ ಬೈಕುಗಳ ಬೆಲೆಯನ್ನು ಕೂಡ ಹೆಚ್ಚಿಸಿದೆ. ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ರೂ.1,923 ಗಳವರೆಗೆ ಹೆಚ್ಚಿಸಿದರೆ, ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕಿನ ಬೆಲೆಯು ರೂ.1,442 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ರೂ.1.78 ಲಕ್ಷಗಳಾದರೆ, ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕಿನ ಬೆಲೆಯು ರೂ.3.05 ಲಕ್ಷಗಳಾಗಿದೆ.

Model Price (Old) Price (New) Increase
200 Duke ₹1,77,037 ₹1,78,960 ₹1,923
250 Duke ₹2,09,472 ₹2,14,210 ₹4,738
390 Duke ₹2,58,103 ₹2,66,620 ₹8,517
RC 125 ₹1,59,821 ₹1,61,100 ₹1,279
RC 390 ₹2,53,381 ₹2,56,920 ₹3,539
390 Adventure ₹3,04,438 ₹3,05,880 ₹1,442
Svartpilen 250 ₹1,84,960 ₹1,86,750 ₹1,790
Vitpilen 250 ₹1,84,960 ₹1,86,750 ₹1,790
ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ಬೈಕುಗಳ ಬೆಲೆ ಏರಿಕೆಯ ಬಗ್ಗೆ ಹೇಳುವುದಾದರೆ, ಹಸ್ಕ್​ವರ್ನಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ಬೈಕುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಎರಡು ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು 250 ಸಿಸಿ ವಿಭಾಗದ ಮಾದರಿಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ಒಂದೇ ರೀತಿಯ ಬೆಲೆಗಳನ್ನು ಹೊಂದಿದೆ. ಅಲ್ಲದೇ ಈ ಎರಡು ಬೈಕುಗಳ ಬೆಲೆಯನ್ನು ರೂ.1,790 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ ಈ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದೆ.

ದುಬಾರಿಯಾಯ್ತು ಜನಪ್ರಿಯ ಕೆಟಿಎಂ ಮತ್ತು ಹಸ್ಕ್​ವರ್ನಾ ಬೈಕುಗಳು

ಕೆಟಿಎಂ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಖರೀದಿದಾರರಿಗೆ ಅತ್ಯಂತ ಜನಪ್ರಿಯ ಮಾದರಿಗಳಾಗಿವೆ. ಕಂಪನಿಯು ದೇಶದಲ್ಲಿ ತನ್ನ ಮಾದರಿಗಳ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಿದೆ. ಹೊಸದಾಗಿ ಕೆಟಿಎಂ ತನ್ನ ಆಯ್ದ ಮಾದರಿಗಳ ಬೆಲೆ ಏರಿಕೆ ಮಾಡಿರುವುದರ ಕಾರಣವನ್ನು ಬಹಿರಂಗಪಡಿಸಲಿಲ್ಲ.

Most Read Articles

Kannada
English summary
KTM & Husqvarna Prices Increase Announced In India Details. Read In Kannada.
Story first published: Tuesday, December 8, 2020, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X