ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಕೆಟಿಎಂ ಕಂಪನಿಯು ತನ್ನ ಹೊಸ ಅಡ್ವೆಂಚರ್ ಬೈಕಿನ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ವೀಡಿಯೋದಲ್ಲಿ ಹೊಸ ಕೆಟಿಎಂ ಅಡ್ವೆಂಚರ್ ಬೈಕ್ ಇದೇ ತಿಂಗಳ 19ರಂದು ಅನಾವರಣವಾಗಲಿದೆ ಎಂದು ಬಹಿರಂಗಪಡಿಸಿದ್ದಾರೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಕೆಟಿಎಂ ಟೀಸರ್ ನಲ್ಲಿ ಯಾವ ಅಡ್ವೆಂಚರ್ ಮಾದರಿ ಎಂಬುವುದು ಖಚಿತವಾಗಿಲ್ಲ. ವೀಡಿಯೋವನ್ನು ನೋಡಿ ಯಾವ ಅಡ್ವೆಂಚರ್ ಮಾದರಿ ಎಂಬುವುದು ಹೇಳುವುದು ತುಂಬಾ ಕಠಿಣವಾಗಿದೆ. ಆದರೆ ಕೆಲವು ಮಾಹಿತಿಗಳ ಪ್ರಕಾರ ಇದು ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್ ಆಗಿರಲಿದೆ. ಆದರೆ ಕಂಪನಿಯು 890 ಅಡ್ಚೆಂಚರ್ ಮೂಲ ಮಾದರಿಯನ್ನು ಪ್ರದರ್ಶಿಸಲಿಲ್ಲ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಕೆಟಿಎಂ ಅಡ್ವೆಂಚರ್ ವಿಭಾಗದ ಆರ್ ಮಾದರಿಗಳು ಯಾವಾಗಲೂ ಉತ್ಸಾಹಭರಿತ, ಉತ್ತಮ ಸುಸಜ್ಜಿತ ಮಾದರಿಗಳಾಗಿವೆ. ಟೀಸರ್ ವೀಡಿಯೋವನ್ನು ಹಲವು ಬಾರಿ ನೋಡುವುದರ ಮೂಲಕ ಮತ್ತು ಕೆಲವು ಮಾಹಿತಿಗಳ ಆಧರಿಸಿ ಇದು 890 ಅಡ್ಚೆಂಚರ್ ಬೈಕ್ ಎಂದು ಖಚಿತಪಡಿಸುತ್ತೇವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ ಅಲಂಕಾರಿಕ ಎಲೆಕ್ಟ್ರಾನಿಕ್ಸ್, ಡಬ್ಲ್ಯುಪಿ ಎಕ್ಸ್‌ಪಿಎಲ್ಒಆರ್ ಸಸ್ಪೆಂಕ್ಷನ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕಡಿಮೆಗೊಳಿಸುತ್ತದೆ ಎಂದು ನಿರೀಕ್ಷಿಸಸುತ್ತೇವೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಹೊಸ ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ 889 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 103 ಬಿಹೆಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 100 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗುತ್ತದೆ. 890 ಅಡ್ವೆಂಚರ್ ಆರ್ ನಂತೆ ಕೆಟಿಎಂ ವೆಚ್ಚವನ್ನು ಕಡಿಮೆ ಮಾಡಲು ಡೈರಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಕೈ ಬಿಡಬಹುದು.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಕೆಟಿಎಂ 890 ಅಡ್ವೆಂಚರ್ ಆರ್ ರ‌್ಯಾಲಿಯಂತೆಯೇ ಅದೇ ಮಾಲಿಬ್ಡಿನಮ್ ಫ್ರೇಮ್ ಅನ್ನು ಬಳಸುತ್ತದೆ ಮತ್ತು 21 ಇಂಚಿನ ವ್ಹೀಲ್ ಅನ್ನು ಬಳಸಬಹುದು ಮತ್ತು ಹಿಂಭಾಗದಲ್ಲಿ 18 ಇಂಚಿನ ಯುನಿಟ್ ಅನ್ನು ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

View this post on Instagram

Stay tuned! October 19th, 2020 #KTM #ReadyToRace #GoAdventure

A post shared by KTM (@ktm_official) on

ಹೊಸ ಕೆಟಿಎಂ 890 ಅಡ್ವೆಂಚರ್ ಬೈಕಿನಲ್ಲಿ 5-ಇಂಚಿನ ಫುಲ್-ಬಣ್ಣದ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಬಹುದು. ಕೆಟಿಎಂ ಕಂಪನಿಯು 890 ಅಡ್ವೆಂಚರ್ ಆರ್ ಮತ್ತು ಆರ್ ರ‌್ಯಾಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತೊಂದು ಹೊಸ ಕೆಟಿಎಂ ಅಡ್ವೆಂಚರ್ ಬೈಕ್

ಆದರೆ ಈ ಹೊಸ ಕೆಟಿಎಂ 890 ಅಡ್ವೆಂಚರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಕೆಟಿಎಂ 890 ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟ್ರಯಂಫ್ ಟೈಗರ್ 900, ಹೋಂಡಾ ಆಫ್ರಿಕಾ ಟ್ವಿನ್ 1100 ಮತ್ತು ಬಿಎಂಡಬ್ಲ್ಯು ಜಿಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM Teases New Adventure Model. Read In Kannada.
Story first published: Sunday, October 18, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X