2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಹಲವು ಆಟೋ ಕಂಪನಿಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಆಸ್ಟ್ರೀಯಾದ ವಾಹನ ತಯಾಕ ಕಂಪನಿಯಾದ ಕೆಟಿಎಂ ಕೂಡಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಉತ್ಸುಕದಲ್ಲಿದ್ದು, ತನ್ನ ಸಹಭಾಗಿತ್ವದ ಕಂಪನಿಯಾದ ಬಜಾಜ್ ಆಟೋ ಜೊತೆಗೂಡಿ ಹೊಸ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಮೊದಲ ಹಂತವಾಗಿ ಐಷಾರಾಮಿ ಸೌಲಭ್ಯವುಳ್ಳ ಇವಿ ಸ್ಕೂಟರ್ ಮಾದರಿಯು ಬಿಡುಗಡೆಯಾಗಲಿದ್ದು, ಹೊಸ ಇವಿ ಉತ್ಪನ್ನಗಳು 2022ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ ಮಾಡುವುದಾಗಿ ಬಜಾಜ್ ಆಟೋ ಹಾಗೂ ಕೆಟಿಎಂ ಕಂಪನಿಗಳು ಘೋಷಿಸಿದ್ದು, ಇವುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಮೊಪೆಡ್ ಹಾಗೂ ಬೈಸಿಕಲ್ ಸಹ ಸೇರಿವೆ. ವರದಿಗಳ ಪ್ರಕಾರ, ಈ ವಾಹನಗಳನ್ನು ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಳ್ಳಲಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಆದ್ಯತೆ ನೀಡಲಿದೆ.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಬಜಾಜ್-ಕೆಟಿಎಂ ಜಂಟಿಯಾಗಿ ತಮ್ಮ ಎಲೆಕ್ಟ್ರಿಕ್ ವಾಹನದ ಉತ್ಪಾದನೆಯನ್ನು 2022ರಲ್ಲಿ ಪುಣೆಯಲ್ಲಿರುವ ಬಜಾಜ್ ಕಂಪನಿಯ ಸಗಾನ್ ಉತ್ಪಾದನಾ ಘಟಕದಲ್ಲಿ ಆರಂಭಿಸಲಿದ್ದು, ಈ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ, ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುವುದು.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ವಾಹನಗಳು 3 ಕಿ.ವ್ಯಾಟ್‌ನಿಂದ 10 ಕಿ.ವ್ಯಾಟ್ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ಹೇಳಲಾಗಿದ್ದು, ಆಕರ್ಷಕ ಬೆಲೆಯೊಂದಿಗೆ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ದಿಗೊಳಿಸಲು ನಿರ್ಧರಿಸಲಾಗಿದೆ.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಆದರೆ ಬಿಡುಗಡೆಯಾಗಲಿರುವ ಇವಿ ಸ್ಕೂಟರ್ ಮಾದರಿಯ ಬಗೆಗೆ ಯಾವುದೇ ನಿಖರವಾದ ಮಾಹಿತಿ ಬಿಟ್ಟುಕೊಡದ ಕೆಟಿಎಂ ಕಂಪನಿಯು ಗರಿಷ್ಠ 70ಕಿ.ಮೀ ವೇಗದ ಮೋಟಾರ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ 90ಕಿ.ಮೀ ಮೈಲೇಜ್ ನೀಡಬಹುದಾದ ಇವಿ ಸ್ಕೂಟರ್ ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಗರಿಷ್ಠ ಮೈಲೇಜ್ ಜೊತೆಗೆ ಬಜೆಟ್ ದರದಲ್ಲಿ ವಾಹನ ಬಿಡುಗಡೆಗಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಸಹ ನಡೆಸಲಾಗುತ್ತಿದ್ದು, ಕರೋನಾ ವೈರಸ್ ಅಬ್ಬರ ತಗ್ಗಿದ ನಂತರವಷ್ಟೇ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ ಎನ್ನಬಹುದು.

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಇನ್ನು ಸದ್ಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೀಚರ್ಸ್‌ವುಳ್ಳ ಇವಿ ಸ್ಕೂಟರ್‌ಗಳು 60ರಿಂದ 80ಕಿ.ಮೀ ಮೈಲೇಜ್ ಸಾಮರ್ಥ್ಯದೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 60 ಸಾವಿರದಿಂದ ರೂ. 1.30 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿವೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

2022ಕ್ಕೆ ಬಿಡುಗಡೆಯಾಗಲಿದೆ ಕೆಟಿಎಂ ನಿರ್ಮಾಣದ ಮೊದಲ ಇವಿ ಸ್ಕೂಟರ್

ಈ ನಿಟ್ಟಿನಲ್ಲಿ ಹೊಸ ಇವಿ ವಾಹನ ಅಭಿವೃದ್ದಿ ಯೋಜನೆ ಕೈಗೊಂಡಿರುವ ಕೆಟಿಎಂ ಮತ್ತು ಬಜಾಜ್ ಕಂಪನಿಯು ಕೈಗೆಟುಕುವ ಬೆಲೆ ಅಂತರದಲ್ಲಿ ಹೆಚ್ಚು ಮೈಲೇಜ್ ನೀಡುವ ಮಾದರಿಗಳನ್ನು ಸಿದ್ದಪಡಿಸುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಹೊಸ ವಾಹನಗಳ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

Most Read Articles

Kannada
Read more on ಕೆಟಿಎಂ ktm
English summary
KTM To Launch Electric Scooter In 2022 Details. Read in Kannada.
Story first published: Thursday, July 30, 2020, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X