ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್ ಗೆಂಝ್, ಇನ್ನು 6 ತಿಂಗಳಲ್ಲಿ ಸ್ಥಗಿತಗೊಳ್ಳಲಿದೆ. ಮಹೀಂದ್ರಾದ ಗೆಂಝ್ ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್ ಬೈಸಿಕಲ್ ಮತ್ತು ಸ್ಕೂಟರ್ ಬ್ರಾಂಡ್ ಆಗಿದ್ದು, ಅದರ ಉತ್ಪನ್ನಗಳನ್ನು ಅಮೆರಿಕಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ 2019-20ರ ಹಣಕಾಸು ವರ್ಷದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪವನ್ಗೋಯಂಕಾರವರು ಅಮೆರಿಕಾ ಮೂಲದ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಮಹೀಂದ್ರಾ, ಗೆಂಝ್ ಷೇರುಗಳನ್ನು ಮಾರಾಟ ಮಾಡುವಲ್ಲಿ ನಿರತವಾಗಿದೆ.

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಮುಂಬರುವ 6 ತಿಂಗಳಲ್ಲಿ ಗೆಂಝ್ ಹಾಗೂ ಅದರ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಗೊಯಿಂಕಾರವರ ಪ್ರಕಾರ, ಗೆಂಝ್ಆಸ್ತಿಯನ್ನು ಮಹೀಂದ್ರಾ ಎಲೆಕ್ಟ್ರಿಕ್ ಹಾಗೂ ಮಹೀಂದ್ರಾ ಗ್ರೂಪ್‌ನ ಮುಂಬರುವ ವಾಹನಗಳಿಗೆ ಬಳಸಿಕೊಳ್ಳಲಾಗುವುದು.

MOST READ:

ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಅಮೆರಿಕಾದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಾರ್ವಜನಿಕ ಹಂಚಿಕೆ ವ್ಯವಸ್ಥೆಯಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಗೆಂಝ್ 2.0ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸೇರಿವೆ. ಈ ಸ್ಕೂಟರ್‌ಗಳನ್ನು ಡೆಲಿವರಿ ಸೇವೆಗಳಿಗಾಗಿ ಬಳಸಲಾಗುತ್ತದೆ.

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಎರಡು ವರ್ಷಗಳ ಹಿಂದೆ ಮಹೀಂದ್ರಾ ಕಂಪನಿಯು ಭಾರತದಲ್ಲಿ ಗೆಂಝ್ ಸ್ಕೂಟರ್‌ನ ಸ್ಪಾಟ್ ಟೆಸ್ಟ್ ನಡೆಸಿತ್ತು. ಮಹೀಂದ್ರಾ ಕಂಪನಿಯು ಗೆಂಝ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದೆಂಬ ನಿರೀಕ್ಷೆಗಳಿದ್ದವು. ಆದರೆ ಇದೀಗ ಗೆಂಝ್ ಸ್ಕೂಟರ್‌ ಅನ್ನು ಸ್ಥಗಿತಗೊಳಿಸಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಜೂನ್ 12ರಂದು ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆಗೊಳಿಸಿದೆ. 2020ರ ಜನವರಿಯಿಂದ 2020ರ ಮಾರ್ಚ್‌ವರೆಗೆ ಕಂಪನಿಯು ಒಟ್ಟು ರೂ.3,255 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ.969 ಕೋಟಿ ಲಾಭಗಳಿಸಿತ್ತು.

ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಮಹೀಂದ್ರಾ ಗ್ರೂಪ್‌ನ ಎಲೆಕ್ಟ್ರಿಕ್ ಸ್ಕೂಟರ್

ಕಂಪನಿಯು ಬಿಡುಗಡೆಗೊಳಿಸಿರುವ ವರದಿಗಳ ಪ್ರಕಾರ, ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 35%ನಷ್ಟು ಕುಸಿದು ರೂ.9,005 ಕೋಟಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ರೂ.13,808 ಕೋಟಿ ಆದಾಯಗಳಿಸಿತ್ತು.

Most Read Articles

Kannada
English summary
Mahindra could soon shutdown Genze electric two wheeler business. Read in Kannada.
Story first published: Saturday, June 13, 2020, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X