ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಮೊದಲ ಬಾರಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಹೊಸ ಮಹೀಂದ್ರಾ ಮೊಜೊ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಈ ಹೊಸ ಮಹೀಂದ್ರಾ ಮೊಜೊ 300 ಬೈಕ್ ಈ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನ ಸೋಂಕಿನ ಭೀತಿಯಿಂದ ಈ ಹೊಸ ಬೈಕಿನ ಬಿಡುಗಡೆಯು ವಿಳಂಬವಾಗಿದೆ. ಇದೀಗ ಮಹೀಂದ್ರಾ ಕಂಪನಿಯು ಹೊಸ ಮೊಜೊ 300 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಈ ಮಹೀಂದ್ರಾ ಮೊಜೊ 300 ಬೈಕ್ ಪುಣೆಯ ಹೊರವಲಯದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಆಟೋಕಾರ್ ಇಂಡಿಯಾ ಬಹಿರಂಗಪಡಿಸಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಕಂಪನಿಯು ಮೊಜೊ ಎಕ್ಸ್‌ಟಿ 300 ಮತ್ತು ಯುಟಿ 300 ಅನ್ನು ಸ್ಥಗಿತಗೊಳಿಸಿದ ಬಳಿಕ ಮಹೀಂದ್ರಾ ಮೊಜೊ 300 ಎಬಿಎಸ್ ಅನ್ನು 2019ರಲ್ಲಿ ಬಿಡುಗಡೆಗೊಳಿಸಿದ್ದರು. ಇದರ ಬಿಎಸ್-6 ಆವೃತ್ತಿಯು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಮೊಜೊ ಬೈಕನ್ನು 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಹೀಂದ್ರಾ ಮೊಚೊ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಟೂರಿಂಗ್ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ ಆಕರ್ಷಕ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಈ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಹೊಸ ಮಹೀಂದ್ರಾ ಮೊಜೊ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಇರುವ ಮಾದರಿಯ ಎಂಜಿನ್ ಅನ್ನು ಹೊಸ ಮಹೀಂದ್ರಾ ಮೊಜೊ ಬೈಕಿನಲ್ಲಿ ಅಳವಡಿಸುವ ಸಾಧ್ಯತೆಗಳಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಹೊಸ ಮೊಜೊ ಬೈಕಿನಲ್ಲಿ 293 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 0.8 ಬಿಹೆಚ್‌ಪಿ ಮತ್ತು 0.95 ಎನ್ಎಂ ಟಾರ್ಕ್ ಕಡಿಮೆಯಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಬೈಬ್ರೆ ಮೂಲದ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಿದೆ. ಬೈಕಿನ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಂಸ್ಪೆಕ್ಷನ್ ಸೆಟಪ್ ಅನ್ನು ಅಳವಡಿಸಳಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಮೊಜೊ ಬೈಕ್ ಭಾರತೀಯ ಮಾರುಕಟ್ತೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದೀಗ ಮಹೀಂದ್ರಾ ಕಂಪನಿಯು ಈ ಹೊಸ ಮೊಜೊ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಮಹೀಂದ್ರಾ ಟೂ ವ್ಹೀಲರ್ ಸಜ್ಜಾಗುತ್ತಿದೆ.

Most Read Articles

Kannada
English summary
BS6 Mahindra Mojo 300 Spotted Testing For The First Time. Read In Kannada.
Story first published: Friday, July 3, 2020, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X