ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಪ್ಯೂಜೊ ದ್ವಿಚಕ್ರ ವಾಹನ ಕಂಪನಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಪ್ಯೂಜೊ ಕಂಪನಿಯು ಭಾರತದಲ್ಲಿ ದ್ವಿ ಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಎಕಾನಾಮಿಕ್ ಟೈಮ್ಸ್ ವರದಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಭಾರತದಲ್ಲಿ ಪ್ಯೂಜೊ ಇ ಲುಡಿಕ್ಸ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ. ಪ್ಯೂಜೊ ಇ ಲುಡಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಮಹೀಂದ್ರಾ ಕಂಪನಿಯ ರಿಸರ್ಚ್ ಹಾಗೂ ಡೆವಲಪ್‍‍ಮೆಂಟ್ ಸೆಂಟರ್‍‍ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಈ ಸ್ಕೂಟರ್ ಅನ್ನು ಮಹೀಂದ್ರಾ ಕಂಪನಿಯ ಪಿತಾಂಪುರ ದ್ವಿಚಕ್ರ ವಾಹನ ಘಟಕದಲ್ಲಿ ಉತ್ಪಾದಿಸಿ ಫ್ರಾನ್ಸ್ ಗೆ ರಫ್ತು ಮಾಡಲಾಗುವುದು. ಮಹೀಂದ್ರಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಪವನ್ ಗೊಯಂಕಾರವರು, ನಾವು ಪ್ಯೂಜೊ ಇ ಲುಡಿಕ್ಸ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಆಕರ್ಷಕವಾದ ಬೆಲೆಯಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದು ಹೇಳಿದ್ದಾರೆ.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಬೇರೆ ಕಂಪನಿಯ ಸ್ಕೂಟರಿನ ಬೆಲೆಗಳು ಹೆಚ್ಚಿರುವ ಕಾರಣಕ್ಕೆ ಮಹೀಂದ್ರಾ ಕಂಪನಿಯು ಈ ಸ್ಕೂಟರ್ ಅನ್ನು ಕೈಗೆಟಕುವ ದರದಲ್ಲಿ ಬಿಡುಗಡೆಗೊಳಿಸುವ ಉದ್ದೇಶವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಲುಡಿಕ್ಸ್ ಹೆಸರಿನಲ್ಲಿ ಬಿಡುಗಡೆಗೊಳಿಸಬೇಕೇ ಅಥವಾ ಮಹೀಂದ್ರಾ ಹೆಸರಿನಲ್ಲಿ ಬಿಡುಗಡೆಗೊಳಿಸಬೇಕೇ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲವೆಂದು ಅವರು ತಿಳಿಸಿದರು.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಫ್ಯೂಜೊ ಲುಡಿಕ್ಸ್ 50ಸಿಸಿ ಪೆಟ್ರೋಲ್ ಎಂಜಿನ್ ಮಾದರಿಯ ಸ್ಕೂಟರಿನ ಮೇಲೆ ಆಧಾರವಾಗಿರುವ ಈ ಫ್ಯೂಜೊ ಇ ಲುಡಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2018ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಈ ಸ್ಕೂಟರಿನಲ್ಲಿ ಬಾಷ್ ಕಂಪನಿಯ 3 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಕೂಟರ್ 85 ಕೆ.ಜಿ ತೂಕವನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಪ್ಯೂಜೊ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಮಹೀಂದ್ರಾ

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಸ್ಕೂಟರ್ 50 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಸ್ಕೂಟರಿನಲ್ಲಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 45 ಕಿ.ಮೀಗಳಾಗಿದೆ.

Most Read Articles

Kannada
English summary
Mahindra unveils Peugeot e Ludix Scooter in 2020 Auto Expo. Read in Kannada.
Story first published: Saturday, February 8, 2020, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X