ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಹೆಲ್ಮೆಟ್‍‍ಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತೆಯನ್ನು ನೀಡುತ್ತವೆ. ಈ ಕಾರಣಕ್ಕೆ ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್‍ ಧರಿಸುವುದನ್ನು ಸವಾರರಿಗೆ ಮಾತ್ರವಲ್ಲದೇ ಹಿಂಬದಿಯ ಸವಾರರಿಗೂ ಕಡ್ಡಾಯಗೊಳಿಸಲಾಗಿದೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಆದರೆ ಯುವ ಜನರು ಹೆಲ್ಮೆಟ್ ಧರಿಸುವುದನ್ನು ಇಷ್ಟ ಪಡುವುದಿಲ್ಲ. ಪೊಲೀಸರನ್ನು ರಸ್ತೆಯಲ್ಲಿ ಕಂಡಾಗ ಮಾತ್ರ ಹೆಲ್ಮೆಟ್ ಧರಿಸುತ್ತಿದ್ದಾರೆ. ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ನೀಡುವುದಿಲ್ಲವೆಂಬ ಕಾರಣಕ್ಕೆ ಕೆಲ ಪೆಟ್ರೋಲ್ ಬಂಕ್‍‍ಗಳಿಗೆ ಹೆಲ್ಮೆಟ್ ಧರಿಸಿ ಹೋಗುತ್ತಿದ್ದಾರೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಆದರೆ ಪೊಲೀಸರಿಗೆ ದಂಡ ಕಟ್ಟುವ ಬದಲು ನಮ್ಮ ಸುರಕ್ಷತೆಗಾಗಿಯೂ ಈ ಹೆಲ್ಮೆಟ್‍‍ಗಳಿವೆ ಎಂಬುದನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕು. ಹೆಲ್ಮೆಟ್ ಬಳಕೆಯನ್ನು ಉತ್ತೇಜಿಸಲು ಮಾವೊಕ್ಸ್ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಹೆಲ್ಮೆಟ್ ಮಾರಾಟ ಮಾಡಲು ಮುಂದಾಗಿದೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಈ ಹೆಲ್ಮೆಟ್‍‍ನಲ್ಲಿ ಬ್ಲೂಟೂಥ್ ಕನೆಕ್ಷನ್ ನೀಡಲಾಗಿದೆ ಎಂಬುದನ್ನು ಗಮನಿಸಬೇಕು. ಅಂದ ಹಾಗೆ ಈ ಹೆಲ್ಮೆಟ್‍‍ನ ಹೆಸರು ಹೊಂಚೊ ಎಂದಾಗಿದೆ. ಈ ಹೆಲ್ಮೆಟ್‍‍ನ ಬೆಲೆ ರೂ.999ಗಳಾಗಿದೆ. ಮಾವೊಕ್ಸ್ ಹೆಲ್ಮೆಟ್‍‍ನಲ್ಲಿ ಮೊದಲ ಬಾರಿಗೆ ಬ್ಲೂಟೂಥ್ ಕನೆಕ್ಟಿವಿಟಿಯನ್ನು ನೀಡುತ್ತಿದೆ. ಅದೂ ಸಹ ಕೈಗೆಟಕುವ ಬೆಲೆಯಲ್ಲಿ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಇದರ ಜೊತೆಗೆ ಮಾವೊಕ್ಸ್ ಕಂಪನಿಯು ಈ ಹೆಲ್ಮೆಟ್ ಅನ್ನು ಹಲವು ಬಣ್ಣಗಳಲ್ಲಿ ಬಿಡುಗಡೆಗೊಳಿಸುತ್ತಿದೆ. ಹೊಸ ಹೆಲ್ಮೆಟ್‍‍ನ ಬಿಡುಗಡೆಯೊಂದಿಗೆ ಮಾವೊಕ್ಸ್ ಕಂಪನಿಯು ತನ್ನ ಹೊಸ ಲೊಗೊವನ್ನು ಸಹ ಬಿಡುಗಡೆಗೊಳಿಸಿದೆ. ಮಾವೊಕ್ಸ್ ಕಂಪನಿಯ ಹೊಸ ಲೊಗೊ ಬೀಟ್ ದಿ ಓಟ್ಸ್ ಎಂದಾಗಿದೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಮಾವೊಕ್ಸ್ ಕಂಪನಿಯು ಭಾರತದಲ್ಲಿ 2019ರಲ್ಲಿ ಶುರುವಾಯಿತು. ಬ್ಲೂಟೂಥ್ ಕನೆಕ್ಷನ್ ಹೊಂದಿರುವ ಹೆಲ್ಮೆಟ್ ಬಿಡುಗಡೆಗೊಳಿಸಿ ಮಾವೊಕ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲು ಮುಂದಾಗಿದೆ. ಈ ಹೆಲ್ಮೆಟ್ ಐ‍ಎಸ್‍ಐ ಪ್ರಮಾಣಪತ್ರವನ್ನು ಪಡೆದಿದೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಇದರಿಂದಾಗಿ ಕಂಪನಿಯು ಗ್ರಾಹಕರ ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡಿರುವುದನ್ನು ಕಾಣಬಹುದು. ಮಾವೊಕ್ಸ್ ನ ಹೊಂಚೊ ಹೆಲ್ಮೆಟ್‍‍‍ನ ತಲೆ ಹಾಗೂ ಬಾಯಿಯ ಮಧ್ಯಭಾಗದಲ್ಲಿ ಬ್ಲೂಟೂಥ್ ಅನ್ನು ನೀಡಲಾಗಿದೆ. ಈ ಹೆಲ್ಮೆಟ್ ಅನ್ನು ಮಳೆಗಾಲ ಹಾಗೂ ಬೇಸಿಗೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಈ ಹೆಲ್ಮೆಟ್‍‍ನಲ್ಲಿ ಆ್ಯಂಟಿ ಫಾಗ್ ಫೀಚರ್ ಅನ್ನು ಅಳವಡಿಸಲಾಗಿದೆ. ಹೆಲ್ಮೆಟ್‍‍ನ ಮುಂಭಾಗದಲ್ಲಿ ಏರ್ ಫಿಲ್ಟರ್ ಅನ್ನು ಸಹ ನೀಡಲಾಗಿದೆ. ಮಾವೊಕ್ಸ್ ಕಂಪನಿಯ ಹೊಸ ಹೆಲ್ಮೆಟ್‍‍ಗಳನ್ನು ಮಾರ್ಚ್ ತಿಂಗಳಿನಿಂದ ಮಾರಾಟ ಮಾಡಲಾಗುವುದು.

ಹೆಲ್ಮೆಟ್‍‍‍ಗೂ ಬಂತು ಬ್ಲೂಟೂಥ್ ಟೆಕ್ನಾಲಜಿ

ಹೊಂಚೊ ಹೆಲ್ಮೆಟ್‍‍ಗಳನ್ನು ಮೂರು ಮಾದರಿ ಹಾಗೂ ಹಲವು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ತನ್ನ ಸ್ಟೈಲಿಶ್ ಲುಕ್ ಹಾಗೂ ಇದರಲ್ಲಿರುವ ಟೆಕ್ನಿಕಲ್ ಫೀಚರ್‍‍ಗಳಿಂದಾಗಿ ಈ ಹೆಲ್ಮೆಟ್ ಯುವ ಜನರನ್ನು ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ.

Most Read Articles

Kannada
English summary
Mavox Honcho helmet launched with Bluetooth. Read in Kannada.
Story first published: Friday, February 21, 2020, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X