ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಪುಣೆ ಮೂಲದ ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‍‍ಫಾರ್ಮ್ ಯುಲು ಕಂಪನಿಯಲ್ಲಿ ರೂ.60 ಕೋಟಿ ಹೊಡಿಕೆ ಮಾಡಿದೆ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯಾದ ಯುಲು ಮೊಬಿಲಿಟಿ ಬೆಂಗಳೂರು ಸಿಟಿಯ ಪ್ರಮುಖ ಸ್ಥಳಗಳಲ್ಲಿ ತಮ್ಮ ಇ ಸೈಕಲ್‍‍ಗಳ ಸೇವೆಯನ್ನು ಒದಗಿಸುತ್ತಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಬಜಾಜ್ ಆಟೋ ಲಿಮಿಟೆಡ್ ಕಂಪನಿ ಮತ್ತು ಯುಲು ಕಂಪನಿಗಳು ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ ಬಜಾಜ್ ಆಟೋ, ಯುಲುಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಒದಗಿಸಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜಾಜ್ ಮತ್ತು ಯುಲು ಕಂಪನಿಯು ಅಭಿವೃದ್ದಿಪಡಿಸಲಿದ್ದು, ಇದನ್ನು ಗ್ರಾಹಕರ ಗಮನಸೆಳೆಯುವಂತೆ ತಯಾರಿಸಲಾಗುವುದು. ಪ್ರಸ್ತುತ ಯುಲು ಕಂಪನಿಯು ಲೋ ಪವರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅಭಿವೃದ್ದಿಪಡಿಸುತ್ತಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಬಜಾಜ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯು ಯುಲು ಕಂಪನಿಗಾಗಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಲಿದೆ. ಈ ಸ್ಕೂಟರ್‍‍ಗೆ ರೂ.40,000ಗಿಂತ ಕಡಿಮೆ ಬೆಲೆಯನ್ನು ಹೊಂದಿರಬಹುದು.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಈ ಸ್ಕೂಟರ್ ಅನ್ನು ಚೀನಾದಲ್ಲಿ ಸ್ಕೂಟರ್‍‍ಗಳನ್ನು ತಯಾರಿಸುತ್ತದೆ. ಆ ಸ್ಕೂಟರ್‍‍ಗಳನ್ನು ಭಾರತಕ್ಕೆ ತಂದು ಜೋಡಿಸುತ್ತಾರೆ. ಈ ಸ್ಕೂಟರ್‍‍ಗೆ ಸುಮಾರು ರೂ.35,000 ಗಳಿಂದ ರೂ.37.000ಗಳವರೆಗಿನ ಬೆಲೆಯನ್ನು ಹೊಂದಿರಬಹುದು. ಇದೀಗ ಬಜಾಜ್ ಕಂಪನಿಯು ಯುಲು ಕಂಪನಿಯ ಜೊತೆಯಲ್ಲಿ ಭಾಗಿಯಾಗಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಹೊಸ ಬಜಾಜ್ ನಿರ್ಮಿಸುವ ಎಲೆಕ್ಟ್ರಿಕ್ ಸ್ಕೂಟರ್ ಯುಲು ಸ್ಕೂಟರ್‍‍ಗಿಂತ ಹೆಚ್ಚು ಆಕರ್ಷಕವಾಗಿ ಇರಲಿದೆ ಎಂದು ಯುಲು ಹೇಳಿದೆ. ಪ್ರಸ್ತುತ ಯುಲು ಒಡೆತನದ ಸ್ಕೂಟರ್‍‍ಗಳು ಚಾಸಿಸ್, ಸೀಟ್ ಮತ್ತು ಹ್ಯಾಂಡಲ್ ಬಾರ್ ಅನ್ನು ಒಳಗೊಂಡಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಈ ವರ್ಷದ ಅಂತ್ಯದ ವೇಳೆಗೆ ಒಂದು ಲಕ್ಷ ಬಜಾಜ್ ಆಟೋ ತನ್ನ ಫ್ಲೀಟ್‍‍ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ನಿರ್ಮಿಸಲಿದೆ ಎಂದು ಯುಲು ಬಯಸಿದೆ. ಅಂದ ಹಾಗೆ ಕಂಪನಿಯು ದೇಶಾದ್ಯಂತ ಕೇವಲ ಐದು ನಗರಗಳಲ್ಲಿ 40,000 ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಹೊಂದಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಯುಲು ಎಲೆಕ್ರಿಕ್ ಸ್ಕೂಟರ್ ಪ್ರಸ್ತುತ 48 ವಿ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಪ್ರತಿ ಗಂಟೆಗೆ 25 ಕಿ.ಮೀ ವೇಗವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಚ್ ಮಾಡಿದರೆ 60 ಕಿ.ಮೀ ಚಲಿಸಬಹುದು.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಒಂದನ್ನು ಓಡಿಸಲು ಚಾಲನಾ ಪರವಾನಗಿ ಅಗತ್ಯವಿಲ್ಲ. ಪ್ರಸುತ ಲಭ್ಯವಿರುವ ಯುಲು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಳಸಲು ಗಂಟೆಗೆ ರೂ.10 ಆಗಿದೆ. ಸದ್ಯಕ್ಕೆ ಬೆಂಗಳೂರು, ದೆಹಲಿ, ಪುಣೆ, ಗ್ರೇಟರ್ ಮುಂಬೈ ಮತ್ತು ಭುವನೇಶ್ವರದಲ್ಲಿ ಈ ಇ-ಎಲೆಕ್ಟ್ರಿಕ್ ಸೈಕಲ್ ಮತ್ತು ಸ್ಕೂಟರ್‍‍ಗಳ ಸೇವೆಗಳಿದೆ.

ಯುಲುಗಾಗಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿದೆ ಬಜಾಜ್

ಬಜಾಜ್ ಆಟೋ ಯುಲು ಕಂಪನಿಗಾಗಿ ಉತ್ತಮವಾಗಿ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಲಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಸ್ಕೂಟರ್‍‍‍ನ ಬೆಲೆಯು ರೂ.40,000 ಗಳಿಗಿಂತ ಕಡಿಮೆಯಾಗಿರಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಾಗಿ ಸಿಟಿ ಜನರನ್ನು ಆಕರ್ಷಿಸುತ್ತದೆ.

Most Read Articles

Kannada
English summary
New Bajaj Electric Scooter Built For Yulu To Cost Less Than Rs 40,000. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X