ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ಆಟೋ ಕಂಪನಿಯು ತನ್ನ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಹೊಸ ಬೇಸ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.73,274 ಗಳಾಗಿದೆ.

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಬೇಸ್ ವೆರಿಯೆಂಟ್ ಮುಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಹೊಸ ಬೇಸ್ ವೆರಿಯೆಂಟ್ ಬ್ರೇಕಿಂಗ್ ಹಾರ್ಡ್‌ವೇರ್ ಅನ್ನು ಹೊರತುಪಡಿಸಿ ಟಾಪ್-ಸ್ಪೆಕ್ ರೂಪಾಂತರದಿಂದ ಅದರ ಎಲ್ಲಾ ವಿನ್ಯಾಸ ಮತ್ತು ಫೀಚರ್ ಗಳನ್ನು ಎರವಲು ಪಡೆದುಕೊಂಡಿದೆ. ಎಂಟ್ರಿ-ಲೆವೆಲ್ ಮಾದರಿಯು ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 170 ಎಂಎಂ ಮತ್ತು 130 ಎಂಎಂ ಡ್ರಮ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಟಾಪ್-ಸ್ಪೆಕ್ ವೆರಿಯೆಂಟ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ. ಎರಡೂ ರೂಪಾಂತರಗಳು ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಡಿಸ್ಕ್ ಬ್ರೇಕ್ ಕಳೆದುಕೊಂಡ ಪರಿಣಾಮವಾಗಿ, ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್‌ನ ಮೂಲ ಮಾದರಿಯು ಟಾಪ್-ಸ್ಪೆಕ್ ರೂಪಾಂತರಕ್ಕಿಂತ ಬೆಲೆಯು ಸುಮಾರು ರೂ.7,000 ಕಡಿಮೆಯಾಗಿದೆ. ಬ್ಲ್ಯಾಕ್ ರೆಡ್ ಮತ್ತು ಬ್ಲ್ಯಾಕ್ ಸಿಲ್ವರ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಬಜಾಜ್ ಪಲ್ಸರ್ 125 ಸುಮಾರು 15 ವರ್ಷಗಳ ಹಿಂದೆ ಬಿಡುಗಡೆಯಾದಾಗ ಹೆಡ್‌ಲೈಟ್ ಕೌಲ್‌ನೊಂದಿಗೆ ಬೈಕಿನ ಮೂಲ ವಿನ್ಯಾಸವನ್ನು ಹೊಂದಿರುವ ಬ್ರ್ಯಾಂಡ್‌ನ ಸರಣಿಯಲ್ಲಿರುವ ಕೆಲವೇ ಕೆಲವು ಬೈಕುಗಳಲ್ಲಿ ಒಂದಾಗಿದೆ. ಇದು ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಇಷ್ಟವಾಗುವ ವಿನ್ಯಾಸವಾಗಿರುವುದರಿಂದ ಇದನ್ನು ಮುಂದುವರೆಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಪಲ್ಸರ್ 125 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಗ್ಯಾಸ್-ಶಾಕ್ ಅಬ್ಸಾರ್ಬರ್ ಯುನಿಟ್ ಅನ್ನು ಹೊಂದಿದೆ. ಈ ಬೈಕಿನ ಎರಡೂ ತುದಿಗಳಲ್ಲಿ ಟ್ಯೂಬ್ಲೆಸ್ ಟಯರ್ ಗಳೊಂದಿಗೆ ಅಲಾಯ್ ವ್ಹೀಲ್ ಷೋಡ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಪಲ್ಸರ್ 125 ಬೈಕಿನಲ್ಲಿ ಎರಡು ಪೈಲಟ್ ಲ್ಯಾಂಪ್ ಗಳೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11.5-ಲೀಟರ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಇದರೊಂದಿಗೆ ಸ್ಪ್ಲೀಟ್ ಗ್ರ್ಯಾಬ್ ರೈಲ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಬೈಕ್ ಎಂಜಿನ್ ಕೌಲ್, ಅಲಾಯ್ ವ್ಹೀಲ್ಸ್ ಬ್ಯಾಡ್ಜಿಂಗ್ ಮತ್ತು ಗ್ರ್ಯಾಬ್ ರೈಲ್ ಮೇಲೆ ಮೇಲೆ ಬಹಳ ಸೂಕ್ಷ್ಮವಾದ ಗ್ರಾಫಿಕ್ಸ್ ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್

ಈ ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 10.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
Bajaj Pulsar 125 Split-Seat Drum Brake Variant Launched In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X