ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಕರೋನಾವನ್ನು ಕಟ್ಟಿ ಹಾಕಲು ಸದ್ಯಕ್ಕೆ ಸಾಮಾಜಿಕ ಅಂತರವೊಂದೇ ಪರಿಹಾರವಾಗಿದೆ. ಇದಕ್ಕಾಗಿ ಹಲವರು ಸಾಮಾಜಿಕ ಅಂತರ ಬಗ್ಗೆ ವಿಭಿನ್ನವಾಗಿ ಜಾಗೃತಿಯನ್ನು ಮೂಡಿಸುತ್ತಿದಾರೆ. ಇದೀಗ ಬಜಾಜ್ ಕಂಪನಿಯು ಸಮಾಜಿಕ ಅಂತರದ ಬಗ್ಗೆ ಒಂದು ಆಕರ್ಷಕ ಟಿವಿಸಿಯನ್ನು ಬಿಡುಗಡೆಗೊಳಿಸಿದೆ.

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಹೊಸ ಬಜಾಜ್ ಪಲ್ಸರ್ ಟಿವಿಸಿಯಲ್ಲಿ 2 ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಗೀತೆಯ ಮೂಲಕ ಸಾರಿದೆ. ಬಜಾಜ್ ಪಲ್ಸರ್ ಟಿವಿಸಿಯು ರೋಚಕ ಸ್ಟಂಟ್ ಮತ್ತು ಆಕರ್ಷಕ ಆಡಿಯೋ ಟ್ರ್ಯಾಕ್ ಅನ್ನು ಒಳಗೊಂಡಿದೆ. ಈ ಟಿವಿಸಿ ವೀಡಿಯೋದಲ್ಲಿ ಪಲ್ಸರ್ ಆರ್ಎಸ್ 200 ಮತ್ತು ಪಲ್ಸರ್ ಎನ್ಎಸ್ 200 ಬೈಕುಗಳ ನಿರ್ಜನ ಬಂದರಿನಲ್ಲಿ ಸಿಂಕ್ರೊನೈಸ್ಡ್ ಸ್ಟಂಟ್ ಅನ್ನು ಪ್ರದರ್ಶಿಸಿದ್ದಾರೆ,

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಪಲ್ಸರ್ ಬೈಕುಗಳ ಹಿಂದಿನ ಟಿವಿಸಿಗೆ ಹೋಲಿಸಿದರೆ ಹೊಸ ಟಿವಿಸಿಯು ಹೆಚ್ಚು ಸ್ಪೋರ್ಟಿಯಾಗಿದೆ. ಪಲ್ಸರ್ ಎನ್ಎಸ್ 200 ಸ್ಟ್ರೀಟ್ ಪೈಟರ್ ಗಾಗಿ ಹೊಸ ಬಣ್ಣ ಥೀಮ್ ಅನ್ನು ವೀಡಿಯೋ ಬಹಿರಂಗಪಡಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಇನ್ನು ಪಲ್ಸರ್ ಆರ್ಎಸ್ 200 ಬೈಕ್ ನೀಲಿ ಮತ್ತು ಬಿಳಿ ಬಣ್ಣದ ಥೀಮ್‌ ಅನ್ನು ಹೊಂದಿದೆ. ವೀಡಿಯೋದಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಕೆಂಪು ಮತ್ತು ಬಿಳಿ ಡ್ಯುಯಲ್-ಟೋನ್ ಬಣ್ಣದ ಥೀಮ್‌ನಲ್ಲಿ ಬದಲಾಯಿಸಲಾಗಿದೆ.

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಸ್ಟ್ರೀಟ್ ಫೈಟರ್ ತನ್ನ ಮೊದಲ ಬಾರಿಗೆ ಬಿಳಿ ಬಣ್ಣದ ಅಲಾಯ್ ವ್ಜೀಲ್ ಗಳು ಮತ್ತು ಚಾಸಿಸ್ ಅನ್ನು ಒಳಗೊಂಡಿದೆ. ಫ್ಯೂಯಲ್ ಟ್ಯಾಂಕ್ ಆಕರ್ಷಕ ಗ್ರಾಫಿಕ್ಸ್ ಅನ್ನು ಹೊಂದಿದೆ. ಬ್ಲ್ಯಾಕ್ ಬಣ್ಣದೊಂದಿಗೆ ತಾಜಾ ಡೆಕಲ್‌ಗಳನ್ನು ಹೊಂದಿರುವಂತೆ ತೋರುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಇನ್ನು ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ.

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿ‍‍ಹೆಚ್‍‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ ಆರ್‍ಎಸ್ 200 ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140.8 ಕಿ.ಮೀಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಪಲ್ಸರ್ ಆರ್‍ಎಸ್200 ಬೈಕಿನಲ್ಲಿರುವ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‍‍ಗಳನ್ನು ಬೇರೆ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುವಂತೆ ಅಪ್‍‍ಗ್ರೇಡ್ ಮಾಡಲಾಗಿದೆ.

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಇನ್ನು ಬಿ‍ಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕ್ ಅನ್ನು ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಯಾವುದೇ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿಲ್ಲ. ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಬದಲಾವಣೆ ಮಾಡಲಾಗಿಲ್ಲ. ಈ ಬಿ‍ಎಸ್-6 ಪಲ್ಸರ್ ಎನ್‍ಎಸ್200 ಕಪ್ಪು, ಬಿಳಿ, ಕೆಂಪು ಮತ್ತು ಹಳದಿ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಪಲ್ಸರ್ ಬೈಕುಗಳ ಟಿವಿಸಿ ಮೂಲಕ ಸಾಮಾಜಿಕ ಅಂತರದ ಸಂದೇಶ ಸಾರಿದ ಬಜಾಜ್

ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಪಲ್ಸರ್ ಬೈಕುಗಳ ಹೊಸ ಟಿವಿಸಿ ಹೆಚ್ಚಿನ ಯುವಜನತೆಯನ್ನು ಸೆಳೆಯುವಂತೆ ಆಕರ್ಷಕವಾಗಿದೆ.

Most Read Articles

Kannada
English summary
New Bajaj Pulsar TVC has Stunts with Social Distance Message. Read In Kannada.
Story first published: Saturday, September 19, 2020, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X