ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ 800ಸಿಸಿಯ ಎರಡು ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಇದು ಲಿಯಾನ್‍‍ಸಿನೊ 800 ಮತ್ತು ಲಿಯಾನ್‍‍ಸಿನೊ 800 ಟ್ರಯಲ್ ಎಂಬ ಎರಡು ಬೈಕುಗಳಾಗಿವೆ.

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಇದರಲ್ಲಿ ಲಿಯಾನ್‍‍ಸಿನೊ 800 ಆನ್-ರೋಡ್ ಆಧಾರಿತ ಬೈಕ್ ಆಗಿದ್ದರೆ, ಲಿಯಾನ್‍‍ಸಿನೊ 800 ಟ್ರಯಲ್ ಆಫ್-ರೋಡ್ ಆಧಾರಿತ ಬೈಕ್ ಆಗಿದೆ. ಈ ಬೈಕುಗಳು ಕೆಲವು ವರ್ಷಗಳಿಂದ ಅಭಿವೃದ್ಧಿಯಲ್ಲಿದ್ದವು ಇದೀಗ ಬೆನಲ್ಲಿ ಕಂಪನಿಯ ಈ ಮಾದರಿಗಳನ್ನು ಜಾಗಾತಿವಾಗಿ ಅನಾವರಣಗೊಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಧುನಿಕ ರೆಟ್ರೊ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಮತ್ತು ಲಿಯಾನ್‍‍ಸಿನೊ 800 ಟ್ರಯಲ್ ಮಾದರಿಗಳು ಡುಕಾಟಿ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಎರಡು ಟ್ರಯಂಫ್ ಬೈಕುಗಳು ಆಕರ್ಷಕ ಆಧುನಿಕ ರೆಟ್ರೊ ವಿನ್ಯಾಸವನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಹೊಸ ಟ್ರಯಂಫ್ ಲಿಯಾನ್‍‍ಸಿನೊ 800 ಮತ್ತು ಲಿಯಾನ್‍‍ಸಿನೊ 800 ಟ್ರಯಲ್ ಬೈಕುಗಳಲ್ಲಿ ಒಂದೇ ರೀತಿಯ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎರಡು ಬೈಕುಗಳಲ್ಲಿ 754ಸಿಸಿ ಪ್ಯಾರೆಲಲ್ ಟ್ವಿನ್-ಎಂಜಿನ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಈ ಎಂಜಿನ್ 76 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಟಾರ್ಕ್ ಅಂಕಿ ಅಂಶಗಳು ಕಂಪನಿಯು ಬಹಿರಂಗಪಡಿಸಲಿಲ್ಲ. ಆದರೆ ಈ ಎಂಜಿನ್ ಉತ್ತಮ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಎರಡು ಬೈಕುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬ್ರೆಂಬೊ ಬ್ರೇಕ್‌ಗಳನ್ನು ಅಳವಡಿಸಿದ್ದಾರೆ. ಆನ್-ರೋಡ್ ಮತ್ತು ಆಫ್-ರೋಡ್ ಆಧಾರಿತವಾದ ಈ ಎರಡು ಬೈಕುಗಳಲ್ಲು ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ.

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಇನ್ನು ಹೊಸ ಟ್ರಯಂಫ್ ಲಿಯಾನ್‍‍ಸಿನೊ 800 ಮತ್ತು ಲಿಯಾನ್‍‍ಸಿನೊ 800 ಟ್ರಯಲ್ ಬೈಕುಗಳಲ್ಲಿ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಅನ್ನು ಹೊಂದಿದ್ದು, ಇದರಲ್ಲಿ ಕೆಲವು ಅಲಂಕಾರಿಕ ವಿನ್ಯಾಸದ ಅಂಶಗಳಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಲಿಯಾನ್‍‍ಸಿನೊ 800 ಟ್ರಯಲ್ ಬೈಕಿನಲ್ಲಿ ಆಫ್-ರೋಡ್ ಟಯರ್ ಗಳನ್ನು ಅಳವಡಿಸಿದೆ. ಇನ್ನು ಈ ಬೈಕಿನಲ್ಲಿ ಹೈ ಮೌಂಟಡ್ ಎಕ್ಸಾಸ್ಟ್ ಮತ್ತು 19 ಇಂಚಿನ ಫ್ರಂಟ್ ವ್ಹೀಲ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಉತ್ತಮ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಎತ್ತರದ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಬೆನೆಲ್ಲಿ ಲಿಯಾನ್‍‍ಸಿನೊ 800 ಬೈಕುಗಳು

ಬೆನೆಲ್ಲಿ ಇಂಡಿಯಾ ಕಂಪನಿಯು ಈ ಎರಡು ಬೈಕುಗಳಲ್ಲಿ ಒಂದನ್ನು ಭಾರತಕ್ಕೆ ತರುವ ಸಾಧ್ಯತೆಯಿದೆ. ಲಿಯಾನ್‍‍ಸಿನೊ 800 ಟ್ರಯಲ್ ಆಫ್-ರೋಡ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಹೆಚ್ಚಿನ ಸಾಧ್ಯತೆಗಳಿದೆ. ಆದರೆ ಭಾರತದಲ್ಲಿ ದುಬಾರಿ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.

Most Read Articles

Kannada
English summary
Benelli Leoncino 800, Leoncino 800 Trail Models Unveiled. Read In Kannada.
Story first published: Saturday, November 14, 2020, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X