ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಬೆನೆಲ್ಲಿ ಕಂಪನಿಯು ಚೀನಾದ ಮಾರುಕಟ್ಟೆಯಲ್ಲಿ ಹೊಸ ಕ್ಯೂಚೆ ಎಸ್‌ಆರ್‌ಕೆ 600 ಎಂಬ ಹೊಸ 600 ಸಿಸಿ ಬೈಕನ್ನು ಬಿಡುಗಡೆಗೊಳಿಸಿದ್ದಾರೆ. ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಬೆನೆಲ್ಲಿ ಕ್ಯೂಜೆ ಎಸ್‌ಆರ್‌ಕೆ 600 ಬೈಕನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಮಾರುಕಟ್ಟೆಯಲ್ಲಿರುವ ಬೆನೆಲ್ಲಿ ಟಿಎನ್‌ಟಿ 600 ಬೈಕನ್ನು ಬೆನೆಲ್ಲಿಯ ಸಹೋದರ ಬ್ರ್ಯಾಂಡ್ ಆದ ಚೀನಾದ ಕ್ಯೂಜೆ ಮೋಟಾರ್ ಅಡಿಯಲ್ಲಿ ಎಸ್‌ಆರ್‌ಕೆ 600 ಎಂದು ಕರೆಯುತ್ತಾರೆ. ಈ ಕ್ಯೂಚೆ ಎಸ್‌ಆರ್‌ಕೆ 600 ಬೈಕ್ ಹೊಸ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಕೀ ಲೆಸ್ ಇಗ್ನಿಷನ್ ಮತ್ತು ಬ್ಯಾಕ್‌ಲಿಟ್ ಸ್ವಿಚ್‌ಗಳಂತಹ ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕ್ಯೂಚೆ ಎಸ್‌ಆರ್‌ಕೆ 600 ಬೈಕ್ ಅನ್ನು ಸ್ಟ್ಯಾಂಡರ್ಡ್, ಮೀಡಿಯಂ ಮತ್ತು ಹೈ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕನ್ನು ಕೆಂಪು, ಕಪ್ಪು, ಬಿಳಿ ಮತ್ತು ನೀಲಿ ಎಂಬ ನಾಲ್ಕು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಹೊಸ ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕಿನಲ್ಲಿ ಹಿಂದಿನ ಬಿಎಸ್-4 ಮಾದರಿಯಲ್ಲಿದ್ದ 600 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 81 ಬಿಹೆಚ್‌ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಎಂಟ್ರಿ ಲೆವೆಲ್ ಸ್ಟ್ಯಾಂಡರ್ಡ್ ರೂಪಾಂತರವು ಬೆನೆಲ್ಲಿಯಿಂದ ಸಂಸ್ಪೆಕ್ಷನ್ ಮತ್ತು ಬ್ರೇಕ್ ಸೆಟಪ್ ಅನ್ನು ಹೊಂದಿದ್ದರೆ, ಮಿಡ್-ಸ್ಪೆಕ್ ಮೀಡಿಯಂ ರೂಪಾಂತರವು ಕ್ರಮವಾಗಿ ಕೆವೈಬಿ ಮತ್ತು ಕ್ಸಿಹು ತಯಾರಿಸಿದ ಸಂಸ್ಪೆಕ್ಷನ್ ಮತ್ತು ಬ್ರೇಕ್‌ಗಳನ್ನು ಒಳಗೊಂಡಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಇನ್ನು ಟಾಪ್ ಸ್ಪೆಕ್ ಹೈ ರೂಪಾಂತರವು ಮುಂಭಾಗದಲ್ಲಿ ಮಾರ್ಜೋಚಿ ಯುಎಸ್‌ಡಿ ಫೋರ್ಕ್ ಅನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಕೆವೈಬಿಯಿಂದ ಮೊನೊ-ಶಾಕ್ ಹೊಂದಿದೆ. ಬ್ರೇಕ್ ಸೆಟಪ್ ಅನ್ನು ಬ್ರೆಂಬೊದಿಂದ ಪಡೆಯಲಾಗುತ್ತದೆ. .

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಈ ಹೊಸ ಬೈಕ್ 10 ಎಂಎಂ ಸ್ಲಿಮ್ಮರ್ ಮತ್ತು ಪ್ರಸ್ತುತ ತಲೆಮಾರಿನ ಟಿಎನ್‌ಟಿ 600ಗೆ ಹೋಲಿಸಿದರೆ 20 ಎಂಎಂ ಕಡಿಮೆ ವ್ಹೀಲ್ ಬೇಸ್ ಅನ್ನು ಹೊಂದಿದೆ. ಟಿಎನ್‌ಟಿ ಮಾದರಿಗೆ ಹೋಲಿಸಿದರೆ 33 ಕೆಜಿ ಹೆಚ್ಚು ತೂಕವನ್ನು ಹೊಂದಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಈ ಹೊಸ ಬೈಕಿನಲ್ಲಿ ಹೊಸ ಎಲ್ಇಡಿ ಹೆಡ್ ಲೈಟ್, ಮರುವಿನ್ಯಾಸಗೊಳಿಸಲಾದ ಫ್ಯೂಯಲ್ ಟ್ಯಾಂಕ್, ಗೋಲ್ಡನ್-ಪೇಂಟೆಡ್ ಯುಎಸ್ಡಿ ಫೋರ್ಕ್ಸ್ ಮತ್ತು ಸೈಡ್-ಮೌಂಟೆಡ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕ್

ಈ ಹೊಸ ಕ್ಯೂಚೆ ಎಸ್‌ಆರ್‌ಕೆ 600 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ, ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ಝಡ್ 650 ಮತ್ತು ಸಿಎಫ್‌ಮೊಟೊ 600 ಎನ್‌ಕೆ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
New Benelli QJ SRK 600 Launched: Expected To Arrive In India As The 2020 TNT 600. Read In Kannada.
Story first published: Monday, June 8, 2020, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X