Just In
- 35 min ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 1 hr ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 2 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಗಲಿದೆ ದುಬಾರಿ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್
ಬಿಎಂಡಬ್ಲ್ಯು ಮೋಟರ್ರಾಡ್ ಕಂಪನಿಯು ತನ್ನ ಹೊಸ ಆರ್ 18 ಕ್ರೂಸರ್ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು.ಇದೀಗ ಬಿಎಂಡಬ್ಲ್ಯು ಮೋಟರ್ರಾಡ್ ಇಂಡಿಯಾ ಹೊಸ ಆರ್ 18 ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಜರ್ಮನ್ ಬ್ರ್ಯಾಂಡ್ನ ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಕಳೆದ ವರ್ಷ ಪ್ರದರ್ಶಿಸಲಾಗಿತ್ತು. ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯು ಬ್ರ್ಯಾಂಡ್ನ ಕ್ಲಾಸಿಕ್ ಆರ್ 5 ಬೈಕಿನ ವಿನ್ಯಾಸದಿಂದ ಸ್ಪೋರ್ತಿ ಪಡೆದಿದೆ. ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಡೊಡ್ಡ ಟಿಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್ನೊಂದಿಗೆ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ.
ಈ ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕನ್ನು ಭಾರತದಲ್ಲಿ ಹಬ್ಬದ ಸೀಸನ್ ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಅಂದರೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಈ ಬೈಕ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಈ ಬೈಕಿನಲ್ಲಿ ಹಲವಾರು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ 1800 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಅನ್ನು ಸ್ಟ್ಯಾಂಡರ್ಡ್ ಮತ್ತು ಫಸ್ಟ್ ಎಡಿಷನ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ.ಇದರಲ್ಲಿ ಫಸ್ಟ್ ಎಡಿಷನ್ ಬೈಕ್ ಆರ್ 5 ಕ್ಲಾಸಿಕ್ ಮಾದರಿಯಂತಿದೆ. ಈ ಬೈಕಿನಲ್ಲಿ ಸ್ಟೈಪಿಂಗ್, ಲೆದರ್ ಬೆಲ್ಟ್ ಮತು ಸ್ಲಾಟ್ಡ್ ಸ್ಕ್ರೂಗಳು ಒಳಗೊಂಡಿದೆ.
ಬಿಎಂಡಬ್ಲ್ಯೂ ಆರ್ 18 ಕ್ರೂಸರ್ 1,731 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರುತ್ತದೆ. ಇದು ದೊಡ್ಡ ಗಾತ್ರದ ಬೈಕ್ ಆಗಿದೆ. ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ಹೋಂಡಾ ಗೋಲ್ಡ್ ವಿಂಗ್ ಮಾದರಿಗಿಂತ ಉದ್ದವಾಗಿದೆ.
MOST READ: ಹೊಸ ಸೂಪರ್ ಬೈಕನ್ನು ಬಿಡುಗಡೆಗೊಳಿಸಲಿದೆ ಎಂವಿ ಅಗಸ್ಟಾ
ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ತನ್ನ ಪ್ರತಿಸ್ಪರ್ಧಿ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ ಗಿಂತ 23ಕೆಜಿ ಹೆಚ್ಚು ಭಾರವನ್ನು ಹೊಂದಿದೆ. ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕ್ ರೆಟ್ರೂ ಲುಕ್ ಅನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಮಾರ್ಡನ್ ಫೀಚರ್ಗಳನ್ನು ಒಳಗೊಂಡಿದೆ.
ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಫೀಚರ್ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಮೂರು ರೈಡಿಂಗ್ ಮೋಡ್ಗಳನ್ನು ಹೊಂದಿದೆ. ಈ ಹೊಸ ಬೈಕ್ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್, ಮೋಟಾರ್ ಸ್ಲಿಪ್ ರೆಗ್ಯೋಲೆಷನ್ ಮತ್ತು ಎಬಿಎಸ್ ಆಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕಿನ ಮಾಹಿತಿ
ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಬೈಕಿನಲ್ಲಿ ಹೆಡ್ ಲ್ಯಾಂಪ್, ಟೇಲ್ ಲೈಟ್, ಡಿಆರ್ಎಲ್ ಸೇರಿದಂತೆ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಣ್ಣ ಡಿಜೆಟಲ್ ಡಿಸ್ಪ್ಲೇ ದೊಡ್ಡ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ನಲ್ಲಿ 1802 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4,750 ಆರ್ಪಿಎಂನಲ್ಲಿ 91 ಬಿಹೆಚ್ಪಿ ಪವರ್ ಮತ್ತು 2000 ರಿಂದ 4000 ಆರ್ಪಿಎಂ ನಡುವೆ 149 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್ಬಾಕ್ಸ್ ಜೋಡಿಸಲಾಗಿದೆ.
ಆರ್ 5 ಕ್ಲಾಸಿಕ್ನಿಂದ ಸ್ಫೂರ್ತಿ ಪಡೆದ ಹೊಸ ಬಿಎಂಡಬ್ಲ್ಯು ಆರ್ 18 ಕ್ರೂಸರ್ ಸಹ ಎಕ್ಸ್ಪೋಸ್ಡ್ ಶಾಫ್ಟ್ ಡ್ರೈವ್ನೊಂದಿಗೆ ಬರುತ್ತದೆ. ಬಿಎಂಡಬ್ಲ್ಯು ಆರ್ 18 ಜರ್ಮನ್ ಬ್ರಾಂಡ್ನಿಂದ ಪೂರ್ಣ ಪ್ರಮಾಣದ ಹೆವಿವೇಯ್ಟ್ ಕ್ರೂಸರ್ ಮಾದರಿಯಾಗಿದೆ.