Just In
- 6 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 7 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 7 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 7 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬಿಎಂಡಬ್ಲ್ಯು ಆರ್18 ಬೈಕ್
ಬಿಎಂಡಬ್ಲ್ಯು ಮೋಟರ್ರಾಡ್ ಇಂಡಿಯಾ ಹೊಸ ಆರ್18 ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಜರ್ಮನ್ ಬ್ರ್ಯಾಂಡ್ನ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಕಳೆದ ವರ್ಷ ಪ್ರದರ್ಶಿಸಲಾಗಿತ್ತು. ಹೊಸ ಬಿಎಂಡಬ್ಲ್ಯೂ ಆರ್18 ಕ್ರೂಸರ್ ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯು ಬ್ರ್ಯಾಂಡ್ನ ಕ್ಲಾಸಿಕ್ ಆರ್ 5 ಬೈಕಿನ ವಿನ್ಯಾಸದಿಂದ ಸ್ಪೋರ್ತಿ ಪಡೆದಿದೆ. ಹೊಸ ಬಿಎಂಡಬ್ಲ್ಯೂ ಆರ್18 ಕ್ರೂಸರ್ ಡೊಡ್ಡ ಟಿಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್ನೊಂದಿಗೆ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆಯಾಗುವ ಮೊದಲು ಭಾರತದಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಭಾರತದಲ್ಲಿ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಬಿಎಂಡಬ್ಲ್ಯು ಮೋಟರ್ರಾಡ್ ಕಂಪನಿಯು ತನ್ನ ಹೊಸ ಆರ್18 ಕ್ರೂಸರ್ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು
ಈ ಬೈಕಿನಲ್ಲಿ ಹಲವಾರು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಅನ್ನು ಸ್ಟ್ಯಾಂಡರ್ಡ್ ಮತ್ತು ಫಸ್ಟ್ ಎಡಿಷನ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ.ಇದರಲ್ಲಿ ಫಸ್ಟ್ ಎಡಿಷನ್ ಬೈಕ್ ಆರ್ 5 ಕ್ಲಾಸಿಕ್ ಮಾದರಿಯಂತಿದೆ. ಈ ಬೈಕಿನಲ್ಲಿ ಸ್ಟೈಪಿಂಗ್, ಲೆದರ್ ಬೆಲ್ಟ್ ಮತು ಸ್ಲಾಟ್ಡ್ ಸ್ಕ್ರೂಗಳು ಒಳಗೊಂಡಿದೆ.
ಬಿಎಂಡಬ್ಲ್ಯೂ ಆರ್18 ಕ್ರೂಸರ್ 1,731 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇದು ದೊಡ್ಡ ಗಾತ್ರದ ಬೈಕ್ ಆಗಿದೆ. ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಹೋಂಡಾ ಗೋಲ್ಡ್ ವಿಂಗ್ ಮಾದರಿಗಿಂತ ಉದ್ದವಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್
ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಫೀಚರ್ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಮೂರು ರೈಡಿಂಗ್ ಮೋಡ್ಗಳನ್ನು ಹೊಂದಿದೆ. ಈ ಹೊಸ ಬೈಕ್ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್, ಮೋಟಾರ್ ಸ್ಲಿಪ್ ರೆಗ್ಯೋಲೆಷನ್ ಮತ್ತು ಎಬಿಎಸ್ ಆಗಿದೆ.
ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕಿನಲ್ಲಿ ಹೆಡ್ ಲ್ಯಾಂಪ್, ಟೇಲ್ ಲೈಟ್, ಡಿಆರ್ಎಲ್ ಸೇರಿದಂತೆ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಣ್ಣ ಡಿಜೆಟಲ್ ಡಿಸ್ಪ್ಲೇ ದೊಡ್ಡ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್
ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ನಲ್ಲಿ 1802 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4,750 ಆರ್ಪಿಎಂನಲ್ಲಿ 91 ಬಿಹೆಚ್ಪಿ ಪವರ್ ಮತ್ತು 2000 ರಿಂದ 4000 ಆರ್ಪಿಎಂ ನಡುವೆ 149 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್ಬಾಕ್ಸ್ ಜೋಡಿಸಲಾಗಿದೆ.
ಆರ್ 5 ಕ್ಲಾಸಿಕ್ನಿಂದ ಸ್ಫೂರ್ತಿ ಪಡೆದ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಸಹ ಎಕ್ಸ್ಪೋಸ್ಡ್ ಶಾಫ್ಟ್ ಡ್ರೈವ್ನೊಂದಿಗೆ ಬರುತ್ತದೆ. ಬಿಎಂಡಬ್ಲ್ಯು ಆರ್18 ಜರ್ಮನ್ ಬ್ರಾಂಡ್ನಿಂದ ಪೂರ್ಣ ಪ್ರಮಾಣದ ಹೆವಿವೇಯ್ಟ್ ಕ್ರೂಸರ್ ಮಾದರಿಯಾಗಿದೆ. ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ರೆಟ್ರೂ ಲುಕ್ ಅನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಮಾರ್ಡನ್ ಫೀಚರ್ಗಳನ್ನು ಒಳಗೊಂಡಿದೆ.