Just In
- 7 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 8 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 8 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 9 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್
ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯು ಹೊಸ ಎಸ್ 1000 ಎಕ್ಸ್ಆರ್ ಸ್ಪೋರ್ಟ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಪೋರ್ಟ್ ಟೂರರ್ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಮಾದರಿ ಬ್ರ್ಯಾಂಡ್ನ ಜನಪ್ರಿಯ ಸ್ಫೋರ್ಟ್ ಬೈಕ್ ಆದ ಎಸ್ 1000 ಆರ್ಆರ್ ಅನ್ನು ಆಧರಿಸಿದೆ.
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಎಸ್ 1000 ಎಕ್ಸ್ಆರ್ ಬೈಕನ್ನು ಇದೇ ತಿಂಗಳ 16ರಂದು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕನ್ನು ಕಂಪನಿಯು ಕಳೆದ ವರ್ಷ ನಡೆದ ಇಐಸಿಎಂಎಯಲ್ಲಿ ಪ್ರದರ್ಶಿಸಿದ್ದರು. ಈ ಬೈಕಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಹಿಂದಿನ ತಲೆಮಾರಿನ ಮಾದರಿಗೆ ಹೋಲಿಸಿದರೆ ಹೆಚ್ಚುವರಿಯಾಗಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ.
2020ರ ಎಸ್ 1000 ಎಕ್ಸ್ಆರ್ನಲ್ಲಿ ಎರಡು-ಹಂತದವಾಗಿ ಹೊಂದಾಣಿಕೆ ಮಾಡಬಹುದಾದ ವಿಂಡ್ಸ್ಕ್ರೀನ್, ನವೀಕರಿಸಿದ ಬಾಡಿವರ್ಕ್ ಮತ್ತು ಹೊಸ ಹೆಡ್ಲೈಟ್ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್
ಇದರ ಜೊತೆ ಉತ್ತಮ ಕಾರ್ಯಕ್ಷಮತೆಗಾಗಿ ಎಂಜಿನ್ ಅನ್ನು ರಿ-ಟ್ಯೂನ್ ಮಾಡಲಾಗಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನಲ್ಲಿ 999 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 11,000 ಆರ್ಪಿಎಂನಲ್ಲಿ 164 ಬಿಹೆಚ್ಪಿ ಮತ್ತು 9,250 ಆರ್ಪಿಎಂನಲ್ಲಿ 114 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಆನ್ನು ಜೋಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಹಿಂದಿನ ಮಾದರಿಗಿಂತ 3,000 ಆರ್ಪಿಎಂ ಅಧಿಕ ಒದಗಿಸುವಂತೆ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕಿನ ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಅಳವಡಿಸಿದೆ.
ಈ ಬೈಕಿನ ಬ್ರೇಕಿಂಗ್ ಆಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕಿನ ಮಾಹಿತಿ
ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ. ಈ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್ ಇದೇ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ.
ಈ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 1000 ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 1260 ಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.