Just In
- 3 hrs ago ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- 4 hrs ago ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- 4 hrs ago ಪ್ರೇರಣಾತ್ಮಕ ಕಥೆ: ಮನೆ ಕೆಲಸದಾಕೆಗೆ 'ಸೈಕಲ್' ಖರೀದಿಸಲು ಸಹಾಯ ಮಾಡಿದ ಮಾಲೀಕ.. ವಿಡಿಯೋ ವೈರಲ್
- 6 hrs ago ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನ ಟೀಸರ್ ಬಿಡುಗಡೆ
ಬಿಎಂಡಬ್ಲ್ಯೂ ಮೋಟೊರಾಡ್ ಇಂಡಿಯಾ ಕಂಪನಿಯು ತನ್ನ ಹೊಸ ಎಸ್ 1000 ಎಕ್ಸ್ಆರ್ ಸ್ಪೋರ್ಟ್ ಟೂರರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.
ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದೆ. ಮುಂದಿನ ಎರಡು ತಿಂಗಳಲ್ಲಿ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಅಡ್ವೆಂಚರ್/ಸ್ಪೋರ್ಟ್ ಟೂರರ್ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕ್ ಬ್ರ್ಯಾಂಡ್ ನ ಜನಪ್ರಿಯ ಸ್ಫೋರ್ಟ್ ಬೈಕ್ ಆದ ಎಸ್ 1000 ಆರ್ಆರ್ ಅನ್ನು ಆಧರಿಸಿದೆ.
ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕನ್ನು ಕಂಪನಿಯು ಕಳೆದ ವರ್ಷ ನಡೆದ ಇಐಸಿಎಂಎಯಲ್ಲಿ ಪ್ರದರ್ಶಿಸಿದ್ದರು. ಈ ಬೈಕಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಹಿಂದಿನ ತಲೆಮಾರಿನ ಮಾದರಿಗೆ ಹೋಲಿಸಿದರೆ ಹೆಚ್ಚುವರಿಯಾಗಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕಿನ ಮಾಹಿತಿ
2020ರ ಎಸ್ 1000 ಎಕ್ಸ್ಆರ್ನಲ್ಲಿ ಎರಡು-ಹಂತದವಾಗಿ ಹೊಂದಾಣಿಕೆ ಮಾಡಬಹುದಾದ ವಿಂಡ್ಸ್ಕ್ರೀನ್, ನವೀಕರಿಸಿದ ಬಾಡಿವರ್ಕ್ ಮತ್ತು ಹೊಸ ಹೆಡ್ಲೈಟ್ಗಳನ್ನು ಒಳಗೊಂಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬೈಕ್ 10 ಕೆಜಿ ತೂಕ ಅಧಿಕವಿದೆ.
ಇದರ ಜೊತೆ ಉತ್ತಮ ಕಾರ್ಯಕ್ಷಮತೆಗಾಗಿ ಎಂಜಿನ್ ಅನ್ನು ರಿ-ಟ್ಯೂನ್ ಮಾಡಲಾಗಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನಲ್ಲಿ 999 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಈ ಎಂಜಿನ್ 11,000 ಆರ್ಪಿಎಂನಲ್ಲಿ 164 ಬಿಹೆಚ್ಪಿ ಮತ್ತು 9,250 ಆರ್ಪಿಎಂನಲ್ಲಿ 114 ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಆನ್ನು ಜೋಡಿಸಲಾಗಿದೆ.
ಹಿಂದಿನ ಮಾದರಿಗಿಂತ 3,000 ಆರ್ಪಿಎಂ ಅಧಿಕ ಒದಗಿಸುವಂತೆ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕಿನ ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಹೊಂದಿಸಲಾಗಿದೆ.
MOST READ: ಬಿಎಸ್-6 ಎಂಜಿನ್ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್
ಈ ಬೈಕಿನ ಬ್ರೇಕಿಂಗ್ ಆಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.
ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 1000 ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 1260 ಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ.