ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಇಂಡಿಯಾ ಕಂಪನಿಯು ತನ್ನ ಹೊಸ ಎಸ್ 1000 ಎಕ್ಸ್ಆರ್ ಸ್ಪೋರ್ಟ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಸ್ಪೋರ್ಟ್ ಟೂರರ್ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕ್ ಬ್ರ್ಯಾಂಡ್ ನ ಜನಪ್ರಿಯ ಸ್ಫೋರ್ಟ್ ಬೈಕ್ ಆದ ಎಸ್ 1000 ಆರ್‌ಆರ್‌ ಅನ್ನು ಆಧರಿಸಿದೆ.

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿತ್ತು.ಇದೇ ತಿಂಗಳಿನಲ್ಲಿ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕನ್ನು ಕಂಪನಿಯು ಕಳೆದ ವರ್ಷ ನಡೆದ ಇಐಸಿಎಂಎಯಲ್ಲಿ ಪ್ರದರ್ಶಿಸಿದ್ದರು. ಈ ಬೈಕಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಹಿಂದಿನ ತಲೆಮಾರಿನ ಮಾದರಿಗೆ ಹೋಲಿಸಿದರೆ ಹೆಚ್ಚುವರಿಯಾಗಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

2020ರ ಎಸ್ 1000 ಎಕ್ಸ್‌ಆರ್‌ನಲ್ಲಿ ಎರಡು-ಹಂತದವಾಗಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ನವೀಕರಿಸಿದ ಬಾಡಿವರ್ಕ್ ಮತ್ತು ಹೊಸ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬೈಕ್ 10 ಕೆಜಿ ತೂಕ ಅಧಿಕವಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಇದರ ಜೊತೆ ಉತ್ತಮ ಕಾರ್ಯಕ್ಷಮತೆಗಾಗಿ ಎಂಜಿನ್ ಅನ್ನು ರಿ-ಟ್ಯೂನ್ ಮಾಡಲಾಗಿದೆ. ಈ ಹೊಸ ಬಿಎಂಡಬ್ಲ್ಯೂ ಎಸ್ 1000 ಎಕ್ಸ್ಆರ್ ಬೈಕಿನಲ್ಲಿ 999 ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಈ ಎಂಜಿನ್ 11,000 ಆರ್‌ಪಿಎಂನಲ್ಲಿ 164 ಬಿಹೆಚ್‌ಪಿ ಮತ್ತು 9,250 ಆರ್‌ಪಿಎಂನಲ್ಲಿ 114 ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಆನ್ನು ಜೋಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಹಿಂದಿನ ಮಾದರಿಗಿಂತ 3,000 ಆರ್‌ಪಿಎಂ ಅಧಿಕ ಒದಗಿಸುವಂತೆ ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕಿನ ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಹೊಂದಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಈ ಬೈಕಿನ ಬ್ರೇಕಿಂಗ್ ಆಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ. ಈ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜಾದ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್

ಈ ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 1000 ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 1260 ಎಸ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
BMW S 1000 XR To launch In mid-July Details. Read In Kannada.
Story first published: Saturday, July 11, 2020, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X