ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೊಟೊ ಹೊಸ ಟೂರರ್1250 ಟಿಆರ್-ಜಿ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಬೈಕಿನಲ್ಲಿ ಕೆಟಿಎಂ ಮೂಲದ ಎಲ್ಸಿ 8 ಟ್ವಿನ್-ಸಿಲಿಂಡರ್ ಮೋಟರ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಚೀನಾದ ಸಿಐಎಂಎ ಶೋನಲ್ಲಿ ಬ್ರಾಂಡ್‌ನ ಇತ್ತೀಚಿನ ಮಾದರಿಯನ್ನು ಪ್ರದರ್ಶಿಸಿದ್ದರು. ಈ ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಬೈಕ್ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ ಪ್ರೀಮಿಯಂ ಹಾರ್ಡ್‌ವೇರ್‌ನಿಂದ ತುಂಬಿದ ಬ್ರೆಂಬೊ-ಮೂಲದ ಕ್ಯಾಲಿಪರ್‌ಗಳು ಮತ್ತು ಡಬ್ಲ್ಯುಪಿ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಸಿಎಫ್‌ಮೊಟೊ 1250 ಟಿಆರ್-ಜಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಇನವರ್ಡಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಸಿಎಫ್‌ಮೊಟೊ 1250 ಟಿಆರ್-ಜಿ ಬೈಕಿನ ಜೆಬಿಎಲ್ ಸ್ಟಿರಿಯೊ ಸಿಸ್ಟಂ ಮತ್ತು ಫುಲ್ ಕಲರ್ ಡಿಸ್ ಪ್ಲೇಯನ್ನು ಹೊಂದಿದೆ. ಡಿಸ್ ಪ್ಲೇಯಲ್ಲಿ ಮಲ್ಟಿಮೀಡಿಯಾ ಕಂಟ್ರೋಲ್ ಗಳು ಮತ್ತು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಟೂರಿಂಗ್ ಫೋಕಸ್ಡ್ ಹಾರ್ಡ್‌ವೇರ್ ಹಿಟೆಡ್ ಗ್ರಿಪ್ಸ್, ಹಿಟೆಡ್ ಸೀಟುಗಳು ಮತ್ತು ಎಲೆಕ್ಟ್ರಿಕಲ್ ಆಗಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಸಿಎಫ್‌ಮೊಟೊ 1250 ಟಿಆರ್-ಜಿ ಬೈಕಿನಲ್ಲಿ ಸ್ಟೈಲಿಂಗ್ ಅಂಶಗಳ ಬಗ್ಗೆ ನೋಡುವುದಾದರೆ, ಸೆಮಿ-ಫೇರಿಂಗ್ ವಿನ್ಯಾಸ, ಎಲ್ಇಡಿ ಲೈಟಿಂಗ್, ಎತ್ತರದ ವಿಂಡ್ಸ್ಕ್ರೀನ್ ಮತ್ತು ಟಾಪ್-ಬಾಕ್ಸ್ ಮೌಂಟಡ್ ಪಿಲಿಯನ್ ಬ್ಯಾಕ್ ರೆಸ್ಟ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಇನ್ನು ಈ ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಬೈಕಿನಲ್ಲಿ 1279 ಸಿಸಿ, ಎಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಇನ್ನು ಚೀನಾ ಮೂಲದ ಸಿಎಫ್‌ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ 300 ಎಸ್‌ಆರ್ ಬೈಕನ್ನು ಫಿಲಿಪೈನ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ 300 ಎಸ್‌ಆರ್ ಬ್ರ್ಯಾಂಡ್‌ನ ಸರಣಿಯಲ್ಲಿರುವ 300 ಎನ್‌ಕೆ ನೇಕೆಡ್ ಫೇರ್ಡ್ ಆವೃತ್ತಿಯ ಅಪ್ಡೇಟ್ ವರ್ಷನ್ ಆಗಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 1250 ಟಿಆರ್-ಜಿ ಟೂರರ್ ಬೈಕ್

ಸಿಎಫ್‌ಮೊಟೊ 300 ಎಸ್‌ಆರ್ ಬೈಕನ್ನು ಈಗಗಾಲೇ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಚೀನಾ ದೇಶದಲ್ಲಿ ಈಗಾಗಲೇ ಈ ಬೈಕಿನ ರಫ್ತನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Most Read Articles

Kannada
English summary
CFMoto 1250TR-G Tourer Revealed In Kannada. Read In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X