Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು ಕಡಿಮೆ ಬೆಲೆಯ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್
ತೆಲಂಗಾಣ ಮೂಲದ ಜಿಮೊಪೈ ಎಲೆಕ್ಟ್ರಿಕ್ ಕಂಪನಿಯು ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.44,000 ಗಳಾಗಿದೆ.

ಈ ಹೊಸ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಲಾಗಿದೆ. ಈ ಮಿಸೊ ಮಿನಿ ಎಲೆಕ್ತ್ರಿಕ್ ಸ್ಕೂಟರ್ ಬ್ಯಾಟರಿ ಸೆಲ್ ಗಳನ್ನು ಹೊರತುಪಡಿಸಿದರೆ ಇದು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಈ ಹೊಸ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಚ್ ಮಾಡಿದರೆ 75 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಎರಡು ಗಂಟೆಗಳಲ್ಲಿ ಈ ಸ್ಕೂಟರ್ 90 ರಷ್ಟು ಜಾರ್ಜ್ ಆಗುತ್ತದೆ.

ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 48ವಿ, 1 ಕಿವ್ಯಾಟ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೆಕ್ಸಾ ಹೆಡ್‌ಲೈಟ್ ಮತ್ತು ಎಲ್‌ಇಡಿ ಬ್ಯಾಟರಿ ಎಂಡಿಕೇಟರ್ ಅನ್ನು ಅಳವಡಿಸಲಾಗಿದೆ. ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ಮೂರು ವರ್ಷಗಳ ಕಾಲ ಉಚಿತ ಸರ್ವಿಸ್ ಅನ್ನು ನೀಡಿದೆ.
MOST READ: ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಗ್ರಾಜಿಯಾ 125 ಸ್ಕೂಟರ್

ಜಿಮೊಪೈ ಎಲೆಕ್ಟ್ರಿಕ್ ಸಹ-ಸಂಸ್ಥಾಪಕ, ಅಮಿತ್ ರಾಜ್ ಸಿಂಗ್ ಅವರು ಮಾತನಾಡಿ, ಕರೋನಾ ವೈರಸ್ ಜನರ ಜೀವನಕ್ಕೆ ಮತ್ತು ವ್ಯವಹಾರಗಳಿಗೆ ಹಾನಿ ಉಂಟುಮಾಡಿದೆ. ಜನರು ತಿರುಗಾಡಲು ಸ್ವಂತ ವಾಹನಗಳನ್ನು ಬಳಸುವುದು ಹೆಚ್ಚಾಗಿದೆ.ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ದಿನನಿತ್ಯವಾಗಿ ಬಳಸಲು ಉತ್ತಮ ಆಯ್ಕೆಯಾಗಿದೆ ಎಂದರು.

ಇನ್ನು ಜೆಮೋಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಮಧ್ಯಮ ವರ್ಗದ ಯುವಕರಿಗೆ ಉತ್ತಮ ಆಯ್ಕೆಯಾಗಿದೆ, ಅಲ್ಲದೇ ತಾವು ಕೆಲಸಕ್ಕೆ ತೆರಳಲು ದಿನನಿತ್ಯ ಈ ಮಿನಿ ಸ್ಕೂಟರ್ ಅನ್ನು ಬಳಸಬಹುದಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಇದರೊಂದಿಗೆ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಿಂಗಲ್ ಸೀಟ್ ಇರುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ ಎಂದು ಅಮಿತ್ ರಾಜ್ ಸಿಂಗ್ ಹೇಳೀದ್ದಾರೆ.

ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ರೆಡ್, ಡೀಪ್ ಸ್ಕೈ ಬ್ಲೂ, ಲುಶಿಯಸ್ ಗ್ರೀನ್ ಮತ್ತು ಸನ್ಸೆಟ್ ಆರೆಂಜ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಈ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ 120 ಕೆಜಿ ಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ. ಏಕೆಂದರೆ ಈ ಮಿನಿ ಸ್ಕೂಟರ್ ಟಾಪ್ ಸ್ಪೀಡ್ 25 ಕಿ.ಮೀ ಆಗಿದೆ.

ಹೊಸ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜೆಮೊಪೈ ಕಂಪನಿಯ ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಅನ್ನು ಮಾಡಬಹುದಾಗಿದೆ. ಪ್ರೀ ಬುಕ್ಕಿಂಗ್ ಮಾಡುವವರಿ ಕಂಪನಿಯು ರೂ.2,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.