ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ಯುವಕರಾಗಲಿ, ವಯಸ್ಸಾದವರಾಗಲಿ ಅವರ ಮೊದಲ ಆಯ್ಕೆಯ ಬೈಕ್ ರಾಯಲ್ ಎನ್‍‍ಫೀಲ್ಡ್ ಆಗಿರುತ್ತದೆ. ಈ ಕಾರಣಕ್ಕೆ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯ ಬೈಕ್ ಸೆಗ್‍‍ಮೆಂಟಿನ ಮಾರಾಟದಲ್ಲಿ ಹೆಚ್ಚಿನ ಪ್ರಮಾಣದ ಶೇರುಗಳನ್ನು ಹೊಂದಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಥಂಡರ್‍‍ಬರ್ಡ್ ಬೈಕ್ ಕ್ರೂಸರ್ ಬೈಕಿನ ರೀತಿಯಲ್ಲಿ ಮಾರಾಟವಾಗುತ್ತಿದೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ಈ ಬೈಕ್ ಅನ್ನು 350 ಸಿಸಿ ಹಾಗೂ 500 ಸಿಸಿಯಲ್ಲಿ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಬೈಕ್ ಅನ್ನು ಅಪ್‍‍ಗ್ರೇಡ್ ಮಾಡಲು ಮುಂದಾಗಿದೆ. ಹೊಸ ಥಂಡರ್‍‍ಬರ್ಡ್ ಬೈಕ್ ಅನ್ನು 350 ಸಿಸಿಯ ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ಅಪ್‍‍ಗ್ರೇಡ್ ಮಾಡಲಾಗುವ ಥಂಡರ್‍‍ಬರ್ಡ್ ಬೈಕ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇದನ್ನು ಯುಟ್ಯೂಬ್ ಚಾನೆಲ್‍‍ನಲ್ಲಿ ಕಾಣಬಹುದು. ಈ ಹೊಸ ಬೈಕಿಗೆ ಜೆ1ಸಿ0 ಎಂಬ ಕೋಡ್ ನೇಮ್ ಇಡಲಾಗಿದೆ. ಈ ಬೈಕ್ ಅನ್ನು ರಾಯಲ್ ಎನ್‍‍ಫೀಲ್ಡ್ ಕಂಪನಿಯ ಜೆ ಪ್ಲಾಟ್‍‍ಫಾರಂನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಹೊಸ ಬೈಕ್‍‍ಗಳನ್ನು ಇದೇ ಪ್ಲಾಟ್‍‍ಫಾರಂನಲ್ಲಿ ತಯಾರಿಸುತ್ತಿದೆ. ಹೊಸ ಥಂಡರ್‍‍ಬರ್ಡ್ 350 ಬೈಕ್ ಹೊಸದಾದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಟೇಲ್ ಲೈಟ್‍‍ಗಳನ್ನು ಹೊಂದಿದೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ಮಾರುಕಟ್ಟೆಯಲ್ಲಿರುವ ಥಂಡರ್‍‍ಬರ್ಡ್‍‍ನಲ್ಲಿರುವ ಎಂಜಿನ್ ಹೆಚ್ಚಿನ ಪ್ರಮಾಣದ ವೈಬ್ರೆಷನ್ ಅನ್ನು ಹೊಂದಿದೆ. ಹೊಸ ಬೈಕಿನಲ್ಲಿ ಅಳವಡಿಸಲಾಗುವ ಎಂಜಿನ್ ಹೊಸ ಟೆಕ್ನಾಲಜಿಯನ್ನು ಹೊಂದಿರಲಿದ್ದು, ವೈಬ್ರೆಷನ್ ಸಮಸ್ಯೆಯನ್ನು ಹೋಗಲಾಡಿಸಲಿದೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಸರಣಿಯಲ್ಲಿರುವ 500 ಸಿಸಿಯ ಬುಲೆಟ್, ಕ್ಲಾಸಿಕ್ ಹಾಗೂ ಥಂಡರ್‍‍ಬರ್ಡ್ ಬೈಕ್‍‍ಗಳ ಮಾರಾಟವನ್ನು ಮುಂದಿನ ತಿಂಗಳಿನಿಂದ ಸ್ಥಗಿತಗೊಳಿಸುವುದಾಗಿ ಈಗಾಗಲೇ ಘೋಷಿಸಿದೆ.

ಹೊಸ ಹೆಸರಿನೊಂದಿಗೆ ವಿನೂತನ ವಿನ್ಯಾಸದಲ್ಲಿ ಬರಲಿದೆ ಥಂಡರ್‍‍ಬರ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಸದ್ಯಕ್ಕೆ 350 ಸಿಸಿ ಹಾಗೂ 650 ಸಿಸಿಯ ಬೈಕುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್‍‍ಗಳು 500 ಸಿಸಿಯ ಎಂಜಿನ್ ಬದಲಿಗೆ ಇನ್ನು ಹೆಚ್ಚು ಬಲಶಾಲಿಯಾದ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿವೆ.

Most Read Articles

Kannada
English summary
New gen Royal Enfield Thunderbird details revealed. Read in Kannada.
Story first published: Monday, February 24, 2020, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X