ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಕರೋನಾ ವೈರಸ್ ನಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಈ ಕರೋನಾ ಸೋಂಕಿನಿಂದಾಗಿ ವಾಹನ ಉತ್ಪಾದಕರಿಗೆ ನೂರಾರು ಕೋಟಿ ನಷ್ಟವಾಗಿದೆ. ಅಲ್ಲದೇ ಜನಪ್ರಿಯ ವಾಹನಗಳ ಮಾರಾಟದ ಮೇಲೆಯು ಪಾರಿಣಮ ಬೀರಿದೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಹಲವಾರು ಜನಪ್ರಿಯ ವಾಹನ ಉತ್ಪಾದನಾ ಕಂಪನಿಯು ತಮ್ಮ ಬೈಕುಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾರ್ಲೆ ಡೇವಿಡ್ಸನ್ ತನ್ನ ಪ್ಯಾನ್ ಅಮೇರಿಕಾ ಅಡ್ವೆಂಚರ್ ಟೂರರ್ ಮತ್ತು ಬ್ರಾಂಕ್ಸ್ ಸ್ಟ್ರೀಟ್‌ಫೈಟರ್ ಅನ್ನು ಈಗ ತಮ್ಮ ಅಧಿಕೃತ ವೆಬ್‌ಸೈಟ್‌ನ 'ಫ್ಯೂಚರ್ ವೆಹಿಕಲ್ಸ್' ವಿಭಾಗದಲ್ಲಿ 2021 ರಲ್ಲಿ ಬರುವಂತೆ ಪಟ್ಟಿ ಮಾಡಲಾಗಿದೆ. ಈ ಎರಡು ಹೊಸ ಬೈಕುಗಳ ಬಿಡುಗಡೆಯ ದಿನಾಂಕದ ಬಗ್ಗೆ ಹಾರ್ಲೆ ಡೇವಿಡ್ಸನ್ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈ ವರ್ಷದ ಕೊನೆಯಲ್ಲಿ ಈ ಎರಡು ಬೈಕುಗಳನ್ನು ಬಿಡುಗಡೆಗೊಳಿಸಬೇಕಾಕಿತ್ತು.

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಫ್ಯೂಚರ್ ವೆಹಿಕಲ್ಸ್ ಪಟ್ಟಿಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರುವ ಬೈಕುಗಳು ಒಳಗೊಂಡಿದೆ. ಈ ಬೈಕನ್ನು 'ಬರೆಕ್ನಕಲ್' ಎಂದು ಕರೆಯಬಹುದು, ಜೊತೆಗೆ ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕುಗಳು ಕೂಡ ಸೇರಿಕೊಂಡಿದೆ. ಹಾರ್ಲೆ ಡೇವಿಡ್ಸನ್ ಬ್ರ್ಯಾಂಡ್ ನ ಇತಿಹಾಸದಲ್ಲಿ ದೊಡ್ಡ ಕುಸಿತವನ್ನು ಈಗ ಎದುರಿಸುತ್ತಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಹಾರ್ಲೆ ಡೇವಿಡ್ಸನ್ ಇಂಡಿಯಾಆ ತನ್ನ ಹೊಸ ಬೈಕುಗಳ ಬೆಲೆಯನ್ನು ಬಹಿರಂಗಪಡಿಸಿದೆ. ಅದರಂತೆ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಹಾಗೂ 2020ರ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಎಸ್ ಬೈಕುಗಳ ಬೆಲೆಯನ್ನು ಅಪ್ ಡೇಟ್ ಮಾಡಿದೆ. ಹೊಸ ಹಾರ್ಲೆ ಡೇವಿಡ್ಸನ್ ಲೋ ರೈಡರ್‌ ಬೈಕಿನ ಬೆಲೆ ರೂ. 13.75 ಲಕ್ಷಗಳಾದರೆ, ಲೋ ರೈಡರ್ ಎಸ್ ಬೈಕಿನ ಬೆಲೆ ರೂ.14.69 ಲಕ್ಷಗಳಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಹೊಸ ಹಾರ್ಲೆ ಡೇವಿಡ್ಸನ್ ಲೋ ರೈಡರ್ ಬೈಕಿನ ವಿನ್ಯಾಸ ಹಾಗೂ ಶೈಲಿಯನ್ನು ಈ ಬೈಕಿನ ಹಳೆಯ 1970ರ ಮಾದರಿಯಿಂದ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಕ್ರೂಸ್ ವಿನ್ಯಾಸ, ಡ್ಯುಯಲ್ ಇನ್ಸ್ ಟ್ರೂಮೆಂಟ್ ಗೂಸ್, ಹೆಡ್ಲೈಟ್ ವೈಸರ್, ಕ್ರೋಮ್ ಎಕ್ಸಾಸ್ಟ್ ವಿನ್ಯಾಸಗಳು ಸೇರಿವೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಹಾರ್ಲೆ ಡೇವಿಡ್ಸನ್ ಲೋ ರೈಡರ್ ಬೈಕಿನಲ್ಲಿ 1,745 ಸಿಸಿ ವಿ-ಟ್ವಿನ್ ಮಿಲ್ವಾಕೀ 107 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,000 ಆರ್‌ಪಿಎಂನಲ್ಲಿ 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಕ್ಲಾಸಿಕ್ ಸಾಫ್ಟೈಲ್ ಲೈನ್ ಅನ್ನು ಬೈಕಿನ ಫ್ರೇಮ್ ನಲ್ಲಿ ಬಳಸಲಾಗಿದೆ. ಈ ಬೈಕ್ ಮೊದಲಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಹೆಚ್ಚಿನ ರೆಸ್ಪಾನ್ಸ್ ಪಡೆಯಲಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಹಾರ್ಲೇ ಡೇವಿಡ್ಸನ್ ಕಂಪನಿಯು ತನ್ನ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಮೇಲೆ ಇತ್ತೀಚೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದರು. ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಮೇಲೆ ಅಧಿಕೃತ ಡೀಲರ್ ಗಳು ರೂ.72,000 ರೂ.ಗಳವರೆಗೆ ಭರ್ಜರಿ ರಿಯಾಯಿತಿ ನೀಡುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ಕರೋನಾ ವೈರಸ್ ನಿಂದಾಗಿ ಹಾರ್ಲೆ-ಡೇವಿಡ್ಸನ್ ಮಾತ್ರವಲ್ಲದೆ ಜಗತ್ತಿನಾದ್ಯಂತದ ಇಡೀ ವಾಹನ ಉದ್ಯಮವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೊಸ ವಾಹನಗಳ ಉತ್ಪಾದನೆಯನ್ನು ಹಲವಾರು ಕಂಪನಿಗಳು ಪ್ರಾರಂಭಿಸಿದೆ. ಇದರಿಂದಾಗಿ ನಿಧಾನವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಚೇತರಿಕೆ ಕಾಣಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Harley-Davidson Pan America And Bronx Launch Postponed. Read in Kannada.
Story first published: Wednesday, May 13, 2020, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X