Just In
- 5 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 6 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 6 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 8 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ
ಹೋಂಡಾ ಮೋಟಾರ್ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್ ಅನ್ನು ಬಿಡುಗಡೆಗೊಳಿಸುವ ದಿನಾಂಕ ಬಹಿರಂಗವಾಗಿದೆ. ಮುಂದಿನ ಮಾರ್ಚ್ 5 ರಂದು ಈ ಹೊಸ ಟ್ವಿನ್ ಸಿಆರ್ಎಫ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ.
ಪ್ರಸ್ತುತ ಮಾದರಿಗಿಂತ 2020ರ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಹೆಚ್ಚು ಪವರ್ ಫುಲ್ ಬೈಕ್ ಆಗಿದೆ. ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್ 1048ಸಿಸಿ ಎಂಜಿನ್ 109 ಬಿಹೆಚ್ಪಿ ಪವರ್ ಮತ್ತು 105 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯ ಎಂಜಿನ್ಗಿಂತ 2.5 ಕಿ.ಗ್ರಾಂ ಹೆಚ್ಚು ತೂಕವನ್ನುಹೊಂದಿರಲಿದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಡಿಸಿಟಿ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್, 999.11ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 102 ಬಿಹೆಚ್ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13.5 ಲಕ್ಷಗಳಾಗಿವೆ.
ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.15.5 ಲಕ್ಷಗಳಾಗಿರಬಹುದು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅನವಾರಣಗೊಂಡ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್ಗಿಂತ ಹೆಚ್ಚು ಬದಲಾವಣೆ ಮಾಡಲಿದೆ.
ಹೊಸ 2020ರ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಮುಂಭಾಗದಲ್ಲಿ ಶೋವಾ 45 ಎಂಎಂ ಕಾರ್ಟ್ರಿಡ್ಜ್ ಮಾದರಿಯ ಇನ್ವರ್ಡಡ್ ಟಿಲಿಸ್ಕೋಪಿಕ್ ಫೋರ್ಕ್ಗಳು ಮತ್ತು ಪ್ರೊ-ಲಿಂಕ್ನೊಂದಿಗೆ ಮೊನೊಬ್ಲಾಕ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಹಿಂಭಾಗದಲ್ಲಿ ಶೋವಾ ಗ್ಯಾಸ್-ಚಾರ್ಜ್ಡ್ ಡ್ಯಾಂಪರ್ ಅನ್ನು ಒಳಗೊಂಡಿದೆ.
ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್ ಫ್ರೆಮ್ ನವೀಕರಿಸಲಾಗಿದೆ. ಆಫ್ರಿಕಾ ಟ್ವಿನ್ ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್ ಅನ್ನು ಹೊಂದಿದೆ.
ಇದಲ್ಲದೆ ಅಡ್ವೆಂಚರ್ ಸ್ಪೋರ್ಟ್ ಇಎಸ್ ಮಾದರಿಯು ಎಲೆಕ್ಟ್ರಾನಿಕ್ ಸಸ್ಪೆಂಷನ್ ಅನ್ನು ಹೊಂದಿದೆ. ಹೊಸ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಪ್ರಮುಖ ಫೀಚರ್ಸ್ ಅಂದರೆ ಹೊಸ 6.5 ಇಂಚಿನ ಟಿಎಫ್ಟಿ ಟಚ್ಸ್ಕ್ರೀನ್ ಡಿಸ್ಪ್ಲೇ ಅನ್ನು ಹೊಂದಿದ್ದು, ಇದರೊಂದಿಗೆ ಆ್ಯಪಲ್ ಕಾರ್ಪ್ಲೇ ಅನ್ನು ಅಳವಡಿಸಲಾಗಿದೆ. ಹೊಸ ಬೈಕ್ ಆರು ಎಕ್ಸಸ್ ಐಎಂಯು ಮತ್ತು ಬ್ಲೂಟತ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.
ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಈ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಹೈಡ್ರಾಲಿಕ್ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ 256 ಎಂಎಂ ಹೈಡ್ರಾಲಿಕ್ ಡಿಸ್ಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಆನ್ ರೋಡ್ ಮತ್ತು ಆಫ್-ರೋಡ್ ಗಳಲ್ಲಿ ಎಬಿಎಸ್ ಮೋಡ್ ಅನ್ನು ಸಹ ಒಳಗೊಂಡಿದೆ.
ಹೊಸ ಹೋಂಡಾ ಆಫ್ರಿಕಾ ಟ್ವಿನ್ ಸಿಆರ್ಎಫ್ 1100ಎಲ್ ಬೈಕ್ ಅನ್ನು ಮುಂದಿನ ಮಾರ್ಚ್ 5 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್ ಹಚ್ಚು ಪವರ್ ಅನ್ನು ಹೊಂದಿರುವುದರಿಂದ ಹೆಚ್ಚು ಯುವ ಬೈಕ್ ಪ್ರಿಯರನ್ನು ಸೆಳೆಯಬಹುದು.