Just In
- 24 min ago Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- 1 hr ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 2 hrs ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 2 hrs ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೋಂಡಾ ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್ ಟ್ವಿನ್ ಬೈಕ್ಗಳ ಬೆಲೆ ಮಾಹಿತಿ ಬಹಿರಂಗ
ಹೋಂಡಾ ಮೋಟಾರ್ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಸೂಪರ್ ಬೈಕ್ ಮಾದರಿಗಳಾದ ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್ ಮತ್ತು ಫೈರ್ಬ್ಲೇಡ್ ಎಸ್ಪಿ ಬೈಕ್ ಮಾದರಿಗಳನ್ನು ಬಿಡುಗಡೆ ಸಿದ್ದವಾಗಿದ್ದು, ಬುಕ್ಕಿಂಗ್ ಆರಂಭಿಸುವುದರ ಜೊತೆಗೆ ಹೊಸ ಬೈಕಿನ ಬೆಲೆ ಮಾಹಿತಿಯನ್ನು ಸಹ ಬಹಿರಂಗ ಪಡಿಸಲಾಗಿದೆ.
ಹೋಂಡಾ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವು ಸೂಪರ್ ಬೈಕ್ ಮಾದರಿಗಳ ಮಾರಾಟವನ್ನು ಹೊಂದಿದ್ದು, ತನ್ನ ಶ್ರೇಷ್ಠ ಟ್ರ್ಯಾಕ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಆರ್ಸಿ213ವಿ ಮೊಟೊಜಿಪಿ ಬೈಕ್ ಪ್ರೇರಣೆಯ ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್, ಫೈರ್ಬ್ಲೇಡ್ ಎಸ್ಪಿ ಬೈಕ್ಗಳನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸುವ ಸಿದ್ದತೆ ನಡೆಸಿದೆ. ಇದಕ್ಕಾಗಿ ಅಧಿಕೃತ ಬುಕ್ಕಿಂಗ್ ಆರಂಭಿಸಲಾಗಿದ್ದು, ಹೊಸ ಬೈಕ್ಗಳು ಅಗಸ್ಟ್ ಕೊನೆಯಲ್ಲಿ ಗ್ರಾಹಕರ ಕೈಸೇರಲಿವೆ.
ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್, ಫೈರ್ಬ್ಲೇಡ್ ಎಸ್ಪಿ ಬೈಕ್ಗಳು ಹೋಂಡಾ ನಿರ್ಮಾಣದ ವಿಶೇಷ ಸೂಪರ್ ಬೈಕ್ ಮಾದರಿಗಳಾಗಿದ್ದು, ಈ ಬೈಕ್ಗಳನ್ನು ವಿಶೇಷವಾಗಿ ಟ್ರ್ಯಾಕ್ ಪರ್ಫಾಮೆನ್ಸ್ಗಾಗಿ ಅಭಿವೃದ್ದಿಗೊಳಿಸಲಾಗಿದೆ.
ಟ್ರ್ಯಾಕ್ ಪರ್ಫಾಮೆನ್ಸ್ ಕಳೆದ 28 ವರ್ಷಗಳಿಂದ ಮುಂಚೂಣಿಯಲ್ಲಿರುವ ಆರ್ಸಿ213ವಿ ಮೊಟೊಜಿಪಿ ಎಂಜಿನ್ ಆಧಾರದ ಮೇಲೆಯೇ ಹೊಸ ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್, ಫೈರ್ಬ್ಲೇಡ್ ಎಸ್ಪಿ ಬೈಕ್ಗಳನ್ನು ಅಭಿವೃದ್ದಿಗೊಳಿಸಿದ್ದು, ಭಾರತದಲ್ಲಿ ಬಿಗ್ವಿಂಗ್ ಮಾರಾಟ ಮಳಿಗೆಗಳ ಮೂಲಕ ಮಾರಾಟವಾಗಲಿದೆ.
ಭಾರತದಲ್ಲಿ ಎರಡು ಮಾದರಿಯ ಬೈಕ್ ಮಾರಾಟ ಕೇಂದ್ರಗಳನ್ನು ಹೊಂದಿರುವ ಹೋಂಡಾ ಕಂಪನಿಯು ಸಾಮಾನ್ಯ ಬೈಕ್ಗಳನ್ನು ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ ಮತ್ತು ಸೂಪರ್ ಬೈಕ್ ಮಾದರಿಗಳನ್ನು ಬಿಗ್ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ.
ಸದ್ಯ ಖರೀದಿಗೆ ಲಭ್ಯವಿರುವ ಹೋಂಡಾ ಸೂಪರ್ ಬೈಕ್ ಬಿಗ್ವಿಂಗ್ ಮೂಲಕ ಮಾರಾಟವಾಗುತ್ತಿದ್ದು, ಹೊಸ ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್, ಫೈರ್ಬ್ಲೇಡ್ ಎಸ್ಪಿ ಬೈಕ್ಗಳು ಇದೆ ಮಾರಾಟ ಸೌಲಭ್ಯದಲ್ಲಿ ಖರೀದಿಗೆ ಲಭ್ಯವಿರಲಿವೆ.
MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ
ಸಿಬಿಆರ್1000ಆರ್ಆರ್-ಆರ್ ಫೈರ್ಬ್ಲೇಡ್ ಮತ್ತು ಫೈರ್ಬ್ಲೇಡ್ ಎಸ್ಪಿ ಬೈಕ್ ಮಾದರಿಯು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಬೆಲೆಯಲ್ಲಿ ತುಸು ದುಬಾರಿಯಾಗಿರುವ ಫೈರ್ಬ್ಲೇಡ್ ಎಸ್ಪಿ ಹೆಚ್ಚುವರಿ ಬಣ್ಣಗಳ ಆಯ್ಕೆಯೊಂದಿಗೆ ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.
ಹೊಸ ಬೈಕ್ಗಳಲ್ಲಿ ಆರ್ಸಿ213ವಿ ಮೊಟೊಜಿಪಿ ಬೈಕ್ ಆಧಾರದ ಮೇಲೆ ಎಂಜಿನ್, ಏರೋ ಡೈನಾಮಿಕ್ ಡಿಸೈನ್ ಮತ್ತು ಚಾರ್ಸಿ ತಂತ್ರಜ್ಞಾನವನ್ನು ಎರವಲು ಪಡೆದುಕೊಳ್ಳಲಾಗಿದ್ದು, 1,000-ಸಿಸಿ ಇನ್-ಲೈನ್ ಫೋರ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದೆ.
MOST READ: ಬಜಾಜ್ ಅವೆಂಜರ್ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ
ಈ ಮೂಲಕ 214.5-ಬಿಎಚ್ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಹೊಸ ಎಂಜಿನ್ ಮಾದರಿಯು ಗೋಲ್ಡ್ ವಿಂಗ್ ಬೈಕ್ ಮಾದರಿಗಿಂತ ಕೆಳ ದರ್ಜೆಯಲ್ಲಿ ಮಾರಾಟಗೊಳ್ಳಲಿದ್ದು, ಸಿಕೆಡಿ ಆಮದು ನೀಡಿಯಲ್ಲಿ ಭಾರತದಲ್ಲಿ ಮಾರಾಟವಾಗುವ ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.30 ಲಕ್ಷ ಮತ್ತು ಟಾಪ್ ಎಂಡ್ ವೆರಿಯೆಂಟ್ ರೂ. 34 ಲಕ್ಷ ಬೆಲೆ ಹೊಂದಿರಲಿವೆ ಎನ್ನಲಾಗಿದೆ.