Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಬಹುನಿರೀಕ್ಷಿತ 2021ರ ಹೋಂಡಾ ಎನ್ಸಿ750ಎಕ್ಸ್ ಬೈಕ್
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ಸೈಕಲ್ ತನ್ನ ಎನ್ಸಿ750ಎಕ್ಸ್ ಬೈಕನ್ನು ಮೊದಲ ಬಾರಿಗೆ ಜಾಗತಿಕವಾಗಿ 2014 ರಲ್ಲಿ ಪರಿಚಯಿಸಲಾಯಿತು. ಇದು ಅಮೆರಿಕಾ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಜ್ಯಾಕ್-ಆಫ್-ಆಲ್-ಟ್ರೇಡ್ಸ್ ಬೈಕ್ ಆಗಿ ಪ್ರಸಿದ್ಧವಾಗಿದೆ.

ಇದೀಗ ಹೋಂಡಾ ತನ್ನ ಎನ್ಸಿ750ಎಕ್ಸ್ 2021ರ ಮಾದರಿಯನ್ನು ಅಪ್ದೇಟ್ ಮಾಡಲಾಗಿದೆ. ಈ ಹೊಸ ಹೋಂಡಾ ಎನ್ಸಿ750ಎಕ್ಸ್ ಬೈಕಿನಲ್ಲಿ 745ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 58.5 ಬಿಹೆಚ್ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೋಂಡಾ ಗೇರ್ಬಾಕ್ಸ್ ಅನ್ನು ಸಹ ಪರಿಷ್ಕರಿಸಿದೆ. ನಗರ ಸಂಚಾರದಲ್ಲಿ ಸುಧಾರಿತ ಟ್ರಾಕ್ಟಬಿಲಿಟಿಗಾಗಿ ಮೊದಲ ಮೂರು ಗೇರ್ಗಳು ಮೊದಲಿಗಿಂತ ಚಿಕ್ಕದಾಗಿದೆ. ಆದರೆ ಕೊನೆಯ ಮೂರು ಗೇರ್ಗಳನ್ನು ಉತ್ತಮ ಪ್ರಯಾಣ ಸಾಮರ್ಥ್ಯವಿದೆ.

ಖರೀದಿದಾರರು 6-ಸ್ಪೀಡ್ ಡಿಸಿಟಿ ರೂಪಾಂತರವನ್ನು ಆರಿಸಿಕೊಳ್ಳಬಹುದು. 2021ರ ಹೋಂಡಾ ಎನ್ಸಿ750ಎಕ್ಸ್ ಬೈಕ್ ರೈಡ್-ಬೈ-ವೈರ್ ಥ್ರೊಟಲ್ ಅನ್ನು ಸಹ ಪಡೆಯುತ್ತದೆ, ಇನ್ನು ಸ್ಪೋರ್ಟ್, ರೈನ್, ಸ್ಟ್ಯಾಂಡರ್ಡ್ ಮತ್ತು ಕಸ್ಟಮ್ ಎಂಬ ರೈಡಿಂಗ್ ಮೋಡ್ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಹೊಸ ಹೋಂಡಾ ಎನ್ಸಿ750ಎಕ್ಸ್ ಬೈಕಿನಲ್ಲಿ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಮೂರು ಸೆಟ್ಟಿಂಗ್ ಗಳೊಂದಿಗೆ ಹೆಚ್ಚು ಅತ್ಯಾಧುನಿಕ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆಯುತ್ತದೆ.

ಹೊಸ ಹೋಂಡಾ ಎನ್ಸಿ750ಎಕ್ಸ್ ಮಾದರಿಯು ತನ್ನ ಹಿಂದಿನ ಮಾದರಿಯ ರೀತಿ ಕೆಲವು ವಿನ್ಯಾಸಗಳನ್ನು ಉಳಿಸಿಕೊಂಡಿದೆ. ಇನ್ನು ಈ ಹೊಸ ಹೋಂಡಾ ಎನ್ಸಿ750ಎಕ್ಸ್ ಬೈಕಿನ ಸಸ್ಪೆಂಕ್ಷನ್ ಟ್ರ್ಯಾವೆಲ್ ಬಗ್ಗೆ ಹೇಳುವುದಾದರೆ, ಮುಂಭಾಗ 18 ಎಂಎಂ ಮತ್ತು ಹಿಂಭಾಗದಲ್ಲಿ 30 ಎಂಎಂ ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

2021ರ ಹೋಂಡಾ ಎನ್ಸಿ750ಎಕ್ಸ್ ಬೈಕ್ ದೊಡ್ಡದಾದ 23-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ. ಇನ್ನು ಈ ಹೊಸ ಬೈಕಿನಲ್ಲಿ ಯುಎಸ್ಬಿ ಸ್ಮಾರ್ಟ್ಫೋನ್ ಚಾರ್ಜಿಂಗ್ ಪೋರ್ಟ್ ಇದೆ.

ಇನ್ನು ಈ ಹೊಸ ಹೋಂಡಾ ಎನ್ಸಿ750ಎಕ್ಸ್ ಬೈಕಿನಲ್ಲಿ ವಿಂಡ್ ಷೀಲ್ಡ್ ಸಹ ದೊಡ್ಡದಾಗಿದೆ, ಇನ್ನು ಹೊಸ ಹೋಂಡಾ ಎನ್ಸಿ750ಎಕ್ಸ್ ಬೈಕ್ 214 ಕೆಜೆ ತೂಕವನ್ನು ಹೊಂದಿದೆ. ಈ ಹಿಂದಿನ ಮಾದರಿಗೆ ಹೋಲಿಸಿದರೆ 6 ಕೆಜಿ ಯಷ್ಟು ತೂಕ ಕಡಿಮೆಯಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಭಾರತೀಯ ಮಾರುಕಟ್ಟೆಗೆ ಸಂಬಂಧಿಸದಂತೆ, ಹೋಂಡಾ ಮೋಟಾರ್ಸೈಕಲ್ ತನ್ನ ಪ್ರೀಮಿಯಂ ಸಿಬಿ300ಆರ್ ಬೈಕಿನ ಹೆಸರನ್ನು ತನ್ನ ವೆಬ್ಸೈಟ್ನಿಂದ ತೆಗೆದುಹಾಕಲಾಗಿತ್ತು. ಇದೀಗ ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಇನ್ನು ಹೋಂಡಾ ಇಂಡಿಯಾ ಕಂಪನಿಯ ಪ್ರೀಮಿಯಂ ಬೈಕುಗಳ ಮಾರಟ ಮಾಡುವ ಬಿಗ್ವಿಂಗ್ ಡೀಲರುಗಳ ಮೇಲೆ ಹೆಚ್ಚಿನ ಗಮನಹಸುತ್ತಿರುವುದರಿಂದ 2021ರ ಹೋಂಡಾ ಎನ್ಸಿ750ಎಕ್ಸ್ ಬೈಕ್ ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.