ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೊಚ್ಚ ಹೊಸ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇದೇ ತಿಂಗಳ 30ರಂದು ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ. ಈ ಮಾಹಿತಿಯನ್ನು ಹೋಂಡಾ ಕಂಪನಿಯು ಹೊಸ ಟೀಸರ್ ಬಿಡುಗಡೆಗೊಳಿಸುವ ಮೂಲಕ ಬಹಿರಂಗಪಡಿಸಿದೆ. ಹೊಸ ಬೈಕ್ ಪ್ರೀಮಿಯಂ ಮಾದರಿಯಾಗಲಿದ್ದು, 300ಸಿಸಿಯ ಸರಣಿ ಮೇಲಿನ ಸ್ಥಾನವನ್ನು ಪಡೆಯಬಹುದು. ಹೊಸ ಬೈಕ್ ಬಿಡುಗಡೆಯಾದ ಬಳಿಕ ಹೋಂಡಾ ಕಂಪನಿಯ ಪ್ರೀಮಿಯಂ ಬಿಗ್‌ವಿಂಗ್ ಡೀಲರುಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೊಸ ಬೈಕ್ 300-500 ಸಿಸಿ ವಿಭಾಗದ ಕ್ರೂಸರ್ ಭಾಗವಾಗಲಿದೆ. ಈ ಹೊಸ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕುಗಳಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೊಸ ಬೈಕ್ ಬ್ರ್ಯಾಂಡ್ನ ಅಂತರರಾಷ್ಟ್ರೀಯ ರೆಬೆಲ್ 300 ಮಾದರಿಯನ್ನು ಆಧರಿಸಿರಬಹುದು. ಆದರೆ ಹೊಸ ಬೈಕ್ ಭಾರತೀಯ ಮಾರುಕಟ್ಟೆಗೆ ತಕ್ಕಂತೆ ಹಲವಾರು ಗಮನಾರ್ಹವಾದ ನವೀಕರಣಗಳು ಮತ್ತು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಬಹುದು.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಇದೇ ರೀತಿ ಇತ್ತೀಚೆಗೆ ಹೋಂಡಾ ಕಂಪನಿಯು ಹಾರ್ನೆಟ್ 2.0 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಂಪನಿಯ ಸಿಬಿ190ಆರ್ ಅನ್ನು ಆಧರಿಸಿದೆ. ಆದರೆ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದ್ದರು.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೋಂಡಾ ಹಾರ್ನೆಟ್ 2.0 ಬೈಕ್ ಪಿಜಿಎಂ-ಫೈ ತಂತ್ರಜ್ಞಾನದೊಂದಿಗೆ ಬ್ರಾಂಡ್‌ನ ಹೊಸ ಬಿಎಸ್-6 ಪ್ರೇರಿತ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 17 ಬಿಹೆಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಗೋಲ್ಡನ್ ಯುಎಸ್ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೊಸ ಹೋಂಡಾ ಹಾರ್ನೆಟ್ 2.0 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೊಸ ಪ್ರೀಮಿಯಂ ಬೈಕ್ ಅನ್ನು ಇದೇ ರೀತಿ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಬಹುದು. ಆದರೆ ಕೆಲವು ವರದಿಗಳ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬೈಕ್ 500ಸಿಸಿ ಆಗಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೋಂಡಾ ಕಂಪನಿಯು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 500ಸಿಸಿ ಬೈಕುಗಳನ್ನು ಬಿಡುಗಡೆಗೊಳಿಸಿತ್ತು. ಇವುಗಳು ಸಿಬಿ500ಎಕ್ಸ್, ಸಿಬಿಆರ್500ಆರ್ ಮತ್ತು ಸಿಬಿಆರ್500ಎಫ್ ಎಂಬ ಬೈಕುಗಳಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೋಂಡಾ ಕಂಪನಿಯು ಹೊಸ ಬೈಕಿನ ಬಿಡುಗಡೆಯ ದಿನಾಂಕವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಇತರ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ. ಇದೇ ತಿಂಗಳ 30ರಂದು ಹೊಸ ಹೋಂಡಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
New Honda Motorcycle Launch In India Slated For 30th September. Read In Kannada.
Story first published: Wednesday, September 16, 2020, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X