ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಎಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೋಂಡಾ ಸಂಸ್ಥೆಯು ಈಗಾಗಲೇ ಬಹುತೇಕ ಬೈಕ್ ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿದೆ. ಇದೀಗ ಯೂನಿಕಾರ್ನ್ ಮಾದರಿಯನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 6ಜಿ, ಆಕ್ಟಿವಾ 125, ಡಿಯೋ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಇದೀಗ ಯೂನಿಕಾರ್ನ್ ಕೂಡಾ ಹೊಸ ಎಮಿಷನ್ ನಿಯಮ ಅನುಗುಣವಾಗಿ ಮಾರುಕಟ್ಟೆ ಪ್ರವೇಶಿಸಿದೆ. ಹೋಂಡಾ ಸಂಸ್ಥೆಯು ಬಿಎಸ್-6 ಜಾರಿಗೆ ಮುನ್ನವೇ ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಇದುವರೆಗೆ 3 ಲಕ್ಷ ಯುನಿಟ್ ಬಿಎಸ್-6 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 6ಜಿ, ಡಿಯೋ, ಆಕ್ಟಿವಾ 125, ಎಸ್‌ಪಿ 125, ಶೈನ್ ಮತ್ತು ಯೂನಿಕಾರ್ನ್ ಬೈಕ್ ಮಾದರಿಗಳು ದುಬಾರಿ ಬೆಲೆ ಹೊಂದಿದ್ದರೂ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಮೈಲೇಜ್ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಇದೀಗ ಬಿಡುಗಡೆಯಾಗಿರುವ ಯೂನಿಕಾರ್ನ್ ಕೂಡಾ ಹಳೆಯ ಆವೃತ್ತಿಗಿಂತಲೂ ಶೇ.12 ರಷ್ಟು ಹೆಚ್ಚುವರಿ ಮೈಲೇಜ್ ಪಡೆದುಕೊಂಡಿರುವುದಲ್ಲದೆ ಶೇ.20ರಷ್ಟು ಮಾಲಿನ್ಯ ಹೊರಸೊಸುವಿಕೆಯಲ್ಲೂ ಸುಧಾರಣೆ ಕಂಡಿವೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಯೂನಿಕಾರ್ನ್ ಮಾದರಿಯು ಹೋಂಡಾ ಸಂಸ್ಥೆಯು ಭಾರತದಲ್ಲಿ ಪರಿಚಯಿಸಿದ ಮೊದಲ ಬೈಕ್ ಮಾದರಿಯಾಗಿದ್ದು, ಹಲವಾರು ಭಾರೀ ಮಾರಾಟದಿಂದ ಸ್ಥಗಿತಗೊಂಡರು ಗ್ರಾಹಕರ ಬೇಡಿಕೆ ಮೇರೆಗೆ ಹೊಸ ಬದಲಾವಣೆಯೊಂದಿಗೆ ಮರುಬಿಡುಗಡೆಯಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಹೊಸ ಯೂನಿಕಾರ್ನ್ ಮಾದರಿಯು ಈ ಹಿಂದಿನ ಸಿಬಿ ಯೂನಿಕಾರ್ನ್ ಮತ್ತು ಸಿಬಿ ಯೂನಿಕಾರ್ನ್ 160 ಮಾದರಿಗಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಸದ್ಯ ಸಿಬಿ ಯೂನಿಕಾರ್ನ್ ಮತ್ತು ಸಿಬಿ ಯೂನಿಕಾರ್ನ್ 160 ಬೈಕ್ ಮಾದರಿಗಳನ್ನು ಸ್ಥಗಿತಗೊಳಿಸಿರುವ ಹೋಂಡಾ ಸಂಸ್ಥೆಯು ಕೇವಲ ಯೂನಿಕಾರ್ನ್ ಹೆಸರಿನೊಂದಿಗೆ ಹೊಸ ಬೈಕ್ ಮಾದರಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 93,593 ಬೆಲೆ ಪಡೆದುಕೊಂಡಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಎಂಜಿನ್ ಸಾಮರ್ಥ್ಯ

ಹೊಸ ಯೂನಿಕಾರ್ನ್ ಬೈಕ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 162.7 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಸಾಮರ್ಥ್ಯದೊಂದಿಗೆ 12.73-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಹೋಂಡಾ ಇಕೋ ಟೆಕ್ನಾಲಜಿ(ಹೆಚ್ಇಟಿ) ಮೂಲಕ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಹೊಸ ಎಂಜಿನ್ ಸಾಮರ್ಥ್ಯವು ಈ ಹಿಂದಿನ 150 ಸಿಸಿ ಎಂಜಿನ್‌ಗೆ ಸಮವಾಗಿದ್ದರೂ ಕೂಡಾ ಇಂಧನ ದಕ್ಷತೆ ಹೆಚ್ಚಿಸಲು ಮತ್ತು ಮಾಲಿನ್ಯ ತಡೆಯುವುದಕ್ಕಾಗಿ ಬಿಎಚ್‌ಪಿ ಉತ್ಪಾದನಾ ಪ್ರಮಾಣವನ್ನು ತಗ್ಗಿಸಿರುವುದು ಪ್ರಮುಖ ಬದಲಾವಣೆಯಾಗಿದೆ.

ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡ ಹೋಂಡಾ ಯೂನಿಕಾರ್ನ್

ಇನ್ನು ಹೊಸ ಯೂನಿಕಾರ್ನ್ ಬೈಕ್ ಮಾದರಿಯು ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೆ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರು ವರ್ಷಗಳ ವಾರಂಟಿ ಪ್ಯಾಕೇಜ್(3 ವರ್ಷ ಸ್ಟ್ಯಾಂಡರ್ಡ್ ಪ್ಲಸ್ ಮೂರು ವರ್ಷ ಆಪ್ಷನ್ ವಾರಂಟಿ), ಟ್ಯೂಬ್ ಲೆಸ್ ಟೈರ್, ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಪಡೆದುಕೊಂಡಿದೆ.

Most Read Articles

Kannada
English summary
New Honda Unicorn BS6 engine features design details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X