ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಹಸ್ಕ್​ವರ್ನಾ ಕಂಪನಿಯು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್ ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತಕ್ಕೆ ಕಾಲಿಟ್ಟಿತ್ತು. ಇದೀಗ ಹಸ್ಕ್​ವರ್ನಾ ಕಂಪನಿಯು ತನ್ನ ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಹಸ್ಕ್​ವರ್ನಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇತ್ತೀಚೆಗೆ ಹಸ್ಕ್​ವರ್ನಾ ಕಂಪನಿಯು ತನ್ನ 401 ಟ್ವಿನ್ ಬೈಕುಗಳಲ್ಲಿ ಒಂದನ್ನು ಸ್ಪಾಟ್ ಟೆಸ್ಟ್ ನಡೆಸಿತ್ತು. ಈ ಹಸ್ಕ್​ವರ್ನಾ 401 ಬೈಕಿನ ಎಂಜಿನ್ ನಲ್ಲಿ ಕೆಟಿಎಂ 390 ಡ್ಯೂಕ್ ಬ್ಯಾಡ್ಜ್ ಅನ್ನು ಹೊಂದಿದೆ. ಹಸ್ಕ್​ವರ್ನಾ ಬ್ರ್ಯಾಂಡ್ ಕೆಟಿಎಂನ ಅಂಗಸಂಸ್ಥೆಯಾಗಿದ್ದು, ಎರಡನ್ನೂ ಮಹಾರಾಷ್ಟ್ರದ ಪುಣೆಯ ಬಳಿಯ ಚಕನ್‌ನಲ್ಲಿರುವ ಬಜಾಜ್ ಆಟೋ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ಗಮನಿಸಬೇಕು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಸ್ವಾರ್ಟ್‍‍ಪಿಲೆನ್ 250 ಮತ್ತು ವಿಟ್‌ಪಿಲೆನ್ 250 ಬೈಕುಗಳು ಕೆಟಿಎಂ 250 ಡ್ಯೂಕ್ ಅನ್ನು ಆಧರಿಸಿದಂತೆಯೇ, ಮುಂಬರುವ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು 390 ಡ್ಯೂಕ್ ಮಾದರಿಯನ್ನು ಆಧರಿಸಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಕೆಟಿಎಂ 390 ಮಾದರಿಯ ಎಂಜಿನ್ ಅನ್ನು ಮುಂಬರುವ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು ಹೊಂದಿರಲಿದೆ. ಹಸ್ಕ್​ವರ್ನಾ 401 ಬೈಕ್ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೂಂದಿರಲಿದೆ. ಈ ಎಂಜಿನ್ 44 ಬಿ‍‍ಹೆಚ್‍‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು ಡಬ್ಲ್ಯೂಪಿ ಯುಎಸ್ಡಿ ಫ್ರಂಟ್ ಫೋರ್ಕ್ಸ್, ರಿಯರ್ ಮೊನೊಶಾಕ್, ಬ್ರೇಕಿಂಗ್ ಸಿಸ್ಟಮ್, ಟ್ರೆಲ್ಲಿಸ್ ಫ್ರೇಮ್ ಮತ್ತು ಹಲವಾರು ಭಾಗಗಳು ಕೆಟಿಎಂ ಬೈಕಿನಿಂದ ಎರವಲು ಪಡೆಯಲಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಬೈಕ್ ನಿಯೋ-ರೆಟ್ರೊ ಸ್ಕ್ರ್ಯಾಂಬ್ಲರ್ ವಿನ್ಯಾಸವನ್ನು ಹೊಂದಿದೆ. ವಿಟ್‌ಪಿಲೆನ್ 250 ಬೈಕ್ ಕೆಫೆ ರೇಸರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ವಿಶೇಷವೆಂದರೆ ಹಸ್ಕ್​ವರ್ನಾದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಇದರ ಜೊತೆಗೆ ಎರಡು ಬೈಕ್‍‍ಗಳು ಕೆಟಿಎಂ ಬೈಕ್‍‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍‍ಗಳನ್ನು ಹೊಂದಿವೆ. ಸ್ವಾರ್ಟ್‍‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍‍ನಂತಿದ್ದರೆ, ವಿಟ್‍‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಹಸ್ಕ್​ವರ್ನಾ 401 ಬೈಕ್

ಹಸ್ಕ್​ವರ್ನಾ ಕಂಪನಿಯು ಸ್ವಾರ್ಟ್‌ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕುಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಜಾಜ ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Husqvarna 401 Spied With KTM Badge On Engine. Read In Kananda.
Story first published: Saturday, November 28, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X