ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಅಮೇರಿಕಾ ಮೂಲದ ಇಂಡಿಯನ್ ಮೋಟಾರ್‍‍ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಬೈಕ್ ಸೆಗ್‍‍ಮೆಂಟಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಹೊಸ ಇಂಡಿಯನ್ ಚಾಲೆಂಜರ್ ಬೈಕನ್ನು ಮೊದಲ ಬಾರಿಗೆ 2019 ರಲ್ಲಿ ಅನಾವರಣಗೊಳಿಸಲಾಯಿತು. ಈ ಇಂಡಿಯನ್ ಚಾಲೆಂಜರ್ ಬೈಕ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಈ ಬೈಕಿನ ಬುಕ್ಕಿಂಗ್ ಅನ್ನು ಆರಂಭಿಸಿದ್ದರು. ಈ ಹೊಸ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಇಂಡಿಯನ್ ಕಂಪನಿಯ ಚಾಲೆಂಜರ್ ಬೈಕ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬೈಕ್ ದೊಡ್ಡ ಗಾತ್ರದ ಹೆಡ್‍‍ಲೈಟ್ ಹಾಗೂ ವಿಂಡ್‍‍ಸ್ಕ್ರೀನ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್ ಎಲ್‍ಇ‍‍ಡಿ ಹೆಡ್‍‍ಲೈಟ್ ಹಾಗೂ 7.0 ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದ್ದು, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಲಾಗುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಈ ಬೈಕ್ ಮೂರು ರೀತಿಯ ಡ್ರೈವಿಂಗ್ ಮೋಡ್‍, ಕ್ರೂಸ್ ಕಂಟ್ರೋಲ್ ಸಿಸ್ಟಂ, ಕೀಲೆಸ್ ಇಗ್ನಿಷನ್ ಸಿಸ್ಟಂ, ಅಡ್ಜಸ್ಟಬಲ್ ಫೀಚರ್ಸ್ ಹೊಂದಿರುವ ವಿಂಡ್‍‍ಸ್ಕ್ರೀನ್‍‍ಗಳನ್ನು ಹೊಂದಿದೆ. ಈ ಬೈಕ್ ಎರಡು ಸ್ಯಾಡಲ್ ಬಾಕ್ಸ್ ಗಳನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಇಂಡಿಯನ್ ಚಾಲೆಂಜರ್ ಬೈಕಿನಲ್ಲಿ 1,769 ಸಿಸಿಯ ಲಿಕ್ವಿಡ್ ಕೂಲ್ ವಿ-ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 122 ಬಿ‍‍ಹೆಚ್‍‍ಪಿ ಪವರ್ ಹಾಗೂ 178 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನ ಮುಂಭಾಗದಲ್ಲಿ 43 ಎಂಎಂನ ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಅಬ್ಸರ್ವರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಈ ಬೈಕಿನ ಮುಂಭಾಗದಲ್ಲಿ 19 ಇಂಚಿನ ಅಲಾಯ್ ವ್ಹೀಲ್ ಹಾಗೂ ಹಿಂಭಾಗದಲ್ಲಿ 16 ಇಂಚಿನ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಇಂಡಿಯನ್ ಚಾಲೆಂಜರ್ ಬೈಕ್ ಮುಂಭಾಗದಲ್ಲಿ 320 ಎಂಎಂನ ಎರಡು ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 298 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಚಾಲೆಂಜರ್ ಬೈಕ್ ಅನ್ನು ಸ್ಟಾಂಡರ್ಡ್, ಡಾರ್ಕ್ ಹಾರ್ಸ್ ಹಾಗೂ ಲಿಮಿಟೆಡ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಡಾರ್ಕ್ ಹಾರ್ಸ್ ಹಾಗೂ ಲಿಮಿಟೆಡ್ ಮಾದರಿಗಳು ಇಂಡಿಯನ್ ಮೋಟಾರ್‍‍ಸೈಕಲ್ ಕಂಪನಿಯ ಸ್ಮಾರ್ಟ್ ಲೀನ್ ಟೆಕ್ನಾಲಜಿಯನ್ನು ಹೊಂದಿರಲಿವೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಈ ಟೆಕ್ನಾಲಜಿಯು ಬಾಷ್‍‍ನ ಇನ್‍‍ಹರ್ಶಿಯಲ್ ಮೇಷರ್‍‍ಮೆಂಟ್ ಯುನಿಟ್ ಬಳಸಿ, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್‍‍ಗೆ ಕಾರ್ನರಿಂಗ್ ಕಂಟ್ರೋಲ್ ಅನ್ನು ಸೇರಿಸುತ್ತದೆ. ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಇಂಡಿಯನ್ ಚಾಲೆಂಜರ್ ಬೈಕಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ.

ಬಿಡುಗಡೆಯಾಗಲಿದೆ ಜನಪ್ರಿಯ ಇಂಡಿಯನ್ ಚಾಲೆಂಜರ್ ಬೈಕ್

ಹೊಸ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ಇಂಡಿಯನ್ ಚಾಲೆಂಜರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹಾರ್ಲೆ ಡೇವಿಡ್‍‍ಸನ್ ಕಂಪನಿಯ ಸಿ‍‍ವಿ‍ಒ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Indian Challenger Slated For Launch In India By The End Of 2020. Read In Kannada.
Story first published: Wednesday, July 8, 2020, 20:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X