ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ತನ್ನ ಮೆಗುರೊ ಕೆ3 ಮಾರ್ಡನ್-ಕ್ಲಾಸಿಕ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಕವಾಸಕಿ ಕಂಪನಿಯು ಮೆಗುರೊ ಎಂಬ ಹೆಸರಿನಲ್ಲಿ ಹಲವು ದಶಕಗಳ ಬಳಿಕ ಹೊಸ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

1960ರವರೆಗೂ ಈ ಬೈಕನ್ನು ಮಾರಾಟ ಮಾಡುವುದಿದ್ದರು. ಇನ್ನು ಕವಾಸಕಿ ಕಂಪನಿಯು 1937 ರಿಂದ 1960ರವರೆಗೆ ಮೆಗುರೊ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಬೈಕನ್ನು ತಯಾರಿಸುತ್ತಿದ್ದರು. ಇನ್ನು ಸಿಂಗಲ್ ಮತ್ತು ಟ್ವಿನ್-ಸಿಲಿಂಡರ್ ಸೆಟಪ್ ಮತ್ತು ವಿಭಿನ್ನ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. 1957 ಮತ್ತು 1960ರ ನಡುವೆ ಮಾರಾಟವಾದ ಮೆಗುರೊ ಟಿ2 ಸೀನಿಯರ್ ಸ್ವತಂತ್ರ ಬ್ರ್ಯಾಂಡ್ ಆಗಿರುವಾಗ ಹೊರಬಂದ ಕೊನೆಯ ಮಾದರಿಯಾಗಿದೆ.

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

1964ರಲ್ಲಿ ಮೆಗುರೊ ಬ್ರ್ಯಾಂಡ್ ಮತ್ತು ಕವಾಸಕಿ ಹೆವಿ ಇಂಡಸ್ಟ್ರೀಸ್ ವಿಲೀನವಾದರು. ಈ ಎರಡು ಬ್ರ್ಯಾಂಡ್‌ಗಳಿಂದ ಅದ್ಭುತವಾದ ರೆಟ್ರೊ ಲುಕಿಂಗ್ ಬೈಕುಗಳನ್ನು ರಚಿಸಲು ಇದು ಆಟೋಮೋಟಿವ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವಿಲೀನಗಳಲ್ಲಿ ಒಂದಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

1955 ಮತ್ತು 1960ರ ನಡುವೆ ನಿರ್ಮಿಸಲಾದ ಮೆಗುರೊ ಟಿ1 ಸೀನಿಯರ್ ಕವಾಸಕಿಯ ವಿಶ್ವದಾದ್ಯಂತ ಬ್ರ್ಯಾಂಡ್ ಮಾರಾಟ ಮಾಡುವ ಓಲ್ಡ್-ಸ್ಕೂಲ್ ಮಾರ್ಡನ್ ರೆಟ್ರೋ ಬೈಕುಗಳ ಬದಲಾಗಿ ಡಬ್ಲ್ಯು ಸರಣಿಯನ್ನು ಕವಾಸಕಿ ಆರಂಭಿಸಿದ್ದರೂ ಎಂವ ವರದಿಗಳಿದೆ.

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಇನ್ನು ಹೊಸ ಕವಾಸಕಿ ಮೆಗುರೊ ಕೆ3 ಬೈಕಿನ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ‘ಮೆಗುರೊ' ಬ್ಯಾಡ್ಜಿಂಗ್ ಹೊಂದಿದೆ. ಮೆಗುರೊ ಕೆ3 ಬೈಕಿನಲ್ಲಿ ರೆಟ್ರೊ ಸ್ಟೈಲಿಂಗ್ ಅನ್ನು ದುಂಡಗಿನ ಆಕಾರದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್-ಸಿಗ್ನಲ್ ಇಂಡಿಕೇಟರ್ ಅನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಟ್ವಿನ್-ಪಾಡ್ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಹೊಸ ಕವಾಸಕಿ ಮೆಗುರೊ ಕೆ3 ಬೈಕಿನಲ್ಲಿ ಪ್ಯಾರಲಲ್-ಟ್ವಿನ್ ಸಿಲಿಂಡರ್, ಎಸ್‌ಒಹೆಚ್‌ಸಿ 773 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 51 ಬಿಹೆಚ್‍ಪಿ ಪವರ್ ಮತ್ತು 62 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಈ ಕವಾಸಕಿ ಮೆಗುರೊ ಕೆ3 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸೆಟಪ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಇನ್ನು ಈ ಕವಾಸಕಿ ಮೆಗುರೊ ಕೆ3 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಆದರೆ ಈ ಬೈಕಿನಲ್ಲಿ ಎಬಿಎಸ್ ಅನ್ನು ನೀಡಲಾಗಿಲ್ಲ

ಅನಾವರಣವಾಯ್ತು ಹೊಸ ಕವಾಸಕಿ ಮೆಗುರೊ ಕೆ3 ಬೈಕ್

ಕವಾಸಕಿ ಕಂಪನಿಯು ತನ್ನ ಹೊಸ ಮೆಗುರೊ ಕೆ3 ಬೈಕನ್ನು ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಬಹುದೆಂದು ನಿರೀಕ್ಷಿಸುತ್ತೇವೆ. ಆದರೆ ಭಾರತ ಸೇರಿದಂತೆ ಇತರ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಮೆಗುರೊ ಕೆ3 ಬೈಕನ್ನು ಬಿಡುಗಡೆಗೊಳಿಸುವುದರ ಬಗ್ಗೆ ಕವಾಸಕಿ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

Most Read Articles

Kannada
English summary
Kawasaki Meguro K3 Unveiled Internationally. Read In Kannada.
Story first published: Monday, December 7, 2020, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X