ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ಕಂಪನಿಯು ತನ್ನ ನಿಂಜಾ ಝಡ್‍ ಎಕ್ಸ್ 25ಆರ್ ಬೈಕನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿರುವ ಪವರ್ ಫುಲ್ ಬೈಕ್ ಆಗಿದೆ.

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ಕಂಪನಿಯು ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ವಿತರಣೆಯನ್ನು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ನಾಲ್ಕು ಸಿಲಿಂಡರ್, ಕ್ವಾರ್ಟರ್-ಲೀಟರ್ ಸ್ಪೋರ್ಟ್‌ಬೈಕ್ ಅನ್ನು ಇಂಡೋನೇಷ್ಯಾದ ಮಾರುಕಟ್ಟೆಗಾಗಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಝಡ್‍ಎಕ್ಸ್ 25ಆರ್ ಬೈಕನ್ನು ನ್ಯೂಜಿಲೆಂಡ್‌ನಲ್ಲಿ ಕವಾಸಕಿ ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದಾಗಿ ಝಡ್‍ಎಕ್ಸ್ 25ಆರ್ ಬೈಕನ್ನು ಇಂಡೋನೇಷ್ಯಾದಲ್ಲಿ ತಡವಾಗಿ ಬಿಡುಗಡೆಗೊಳಿಸಿದೆ

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಈ ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಆರಂಭಿಕ ಬೆಲೆಯು ರೂ.5.08 ಲಕ್ಷಗಳಾಗಿದೆ. ಇನ್ನು ಈ ಬೈಕಿನ ಎಬಿಎಸ್ ರೂಪಾಂತರದ ಬೆಲೆಯು ರೂ.5.87 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ಕಂಪನಿಯು 2019ರ ಟೋಕಿಯೊ ಮೋಟಾರ್ ಶೋನಲ್ಲಿ ಸಂಪೂರ್ಣ ಫೇರ್ಡ್ ಕವಾಸಕಿ ಝಡ್‍ಎಕ್ಸ್ 25ಆರ್ ಬೈಕನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು. ಈ ಬೈಕ್ ತನ್ನ ಆಗ್ರೆಸಿವ್ ಸ್ಟೈಲಿಂಗ್ ಮತ್ತು ಇನ್-ಲೈನ್ ನಾಲ್ಕು ಎಂಜಿನ್ ನಿಂದ ಗ್ರಾಹಕರ ಗಮನಸೆಳೆಯಿತು.

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ 249 ಸಿಸಿ, ಲಿಕ್ವಿಡ್-ಕೂಲ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸುಮಾರು 41.4 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಟ್ವಿನ್ ಪಾಡ್ ಹೆಡ್‍ ಲ್ಯಾಂಪ್, ಫುಲ್ ಫೇರಿಂಗ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಮಸ್ಕ್ಯುಲರ್ ಟ್ಯಾಂಕ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಮತ್ತು ಕಡಿಮೆ ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಈ ಬೈಕಿನ ಮುಂಭಾಗದಲ್ಲಿ 37 ಎಂಎಂ ಅಪ್‌ಸೈಡ್-ಡೌನ್ ಶೋವಾ ಪ್ರತ್ಯೇಕ ಫಂಕ್ಷನ್ ಫೋರ್ಕ್‌ ಅನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ಬ್ಯಾಕ್-ಲಿಂಕ್ ಸಂಸೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಟಯರುಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಕವಾಸಕಿ ಝಡ್‍ಎಕ್ಸ್ 25ಆರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಅನಲಾಗ್ ಟ್ಯಾಕೋಮೀಟರ್ ಮತ್ತು ಸೆಮಿ ಡಿಜೆಟಲ್ ಯುನಿಟ್ ಸಿಸ್ಟಂ ಅನ್ನು ಹೊಂದಿರಲಿದೆ. ಕವಾಸಕಿ ಝಡ್‍ಎಕ್ಸ್ 25ಆರ್ ಎಲೆಕ್ತ್ರಾನಿಕ್ ರೈಡರ್ ಅನ್ನು ಕೂಡ ಒಳಗೊಂಡಿದೆ. ಇವುಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಕವಸಾಕಿ ನಿಂಜಾ ಝಡ್‍ ಎಕ್ಸ್ 25ಆರ್ ಬೈಕ್

ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿಆರ್ 250 ಆರ್‌ಆರ್‌ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಈ ಎರಡು ಬೈಕುಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಪ್ರಬಲ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Kawasaki Ninja ZX-25R launched in Indonesia. Read In Kannada.
Story first published: Saturday, July 11, 2020, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X