ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿತ್ತು. ಆದರೆ ಅಂತಿಮವಾಗಿ ಈ ಬೈಕಿನ ಡೈನೋ ಟೆಸ್ಟ್ ನಲ್ಲಿ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳ ಬಗ್ಗೆ ಮಾಹಿತಿ ಬಹಿರಂಗವಾಗಿರುವುದರಿಂದ ಹಲವು ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ 50 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ ಎಂಬ ವದಂತಿಗಳಿತ್ತು. ಆದರೆ ಈ ಡೈನೊ ಟೆಸ್ಟ್ ನಲ್ಲಿ ಈ ಬೈಕಿನ ಬಿಹೆಚ್‍ಪಿ ಪವರ್ ಮಾಹಿತಿ ಬಹಿರಂಗವಾಗಿದೆ. ಈ ಕವಾಸಕಿ ಝಡ್‍ಎಕ್ಸ್ 25ಆರ್ ಬೈಕ್ 41.4 ರಿಂದ 42.7 ಬಿಹೆಚ್‍ಪಿ ಪವರ್ ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇನ್ನು 20.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ನಾಲ್ಕು ಸಿಲಿಂಡರ್, ಕ್ವಾರ್ಟರ್-ಲೀಟರ್ ಸ್ಪೋರ್ಟ್‌ಬೈಕ್ ಅನ್ನು ಜಪಾನ್ ಮತ್ತು ಇಂಡೋನೇಷ್ಯಾದ ಮಾರುಕಟ್ಟೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಆದರೆ ಕರೋನಾ ವೈರಸ್ ಬೀತಿಯಿಂದ ಕ್ವಾರ್ಟರ್ ಲೀಟರ್ ಸ್ಪೋರ್ಟ್ಸ್ ಬೈಕಿನ ಬಿಡುಗಡೆಯನ್ನು ರದ್ದುಗೊಳಿಸಿದ್ದರು. ನಂತರ ಈ ಝಡ್‍ಎಕ್ಸ್ 25ಆರ್ ಬೈಕನ್ನು ನ್ಯೂಜಿಲೆಂಡ್‌ನಲ್ಲಿ ಕವಾಸಕಿ ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕಂಪನಿಯು 2019ರ ಟೋಕಿಯೊ ಮೋಟಾರ್ ಶೋನಲ್ಲಿ ಸಂಪೂರ್ಣ ಫೇರ್ಡ್ ಕವಾಸಕಿ ಝಡ್‍ಎಕ್ಸ್ 25 ಆರ್ ಬೈಕನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು. ಈ ಬೈಕ್ ತನ್ನ ಆಗ್ರೆಸಿವ್ ಸ್ಟೈಲಿಂಗ್ ಮತ್ತು ಇನ್-ಲೈನ್ ನಾಲ್ಕು ಎಂಜಿನ್ ನಿಂದ ಗ್ರಾಹಕರ ಗಮನಸೆಳೆಯಿತು.

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ಝಡ್‍ಎಕ್ಸ್ 25ಆರ್ ಬೈಕ್ 249 ಸಿಸಿ, ಲಿಕ್ವಿಡ್-ಕೂಲ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ಝಡ್‍ಎಕ್ಸ್ 25ಆರ್ ಟ್ವಿನ್ ಪಾಡ್ ಹೆಡ್‍ ಲ್ಯಾಂಪ್, ಫುಲ್ ಫೇರಿಂಗ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಮಸ್ಕ್ಯುಲರ್ ಟ್ಯಾಂಕ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಮತ್ತು ಕಡಿಮೆ ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ ಅನ್ನು ಹೊಂದಿದೆ.

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಈ ಬೈಕಿನ ಮುಂಭಾಗದಲ್ಲಿ 37 ಎಂಎಂ ಅಪ್‌ಸೈಡ್-ಡೌನ್ ಶೋವಾ ಪ್ರತ್ಯೇಕ ಫಂಕ್ಷನ್ ಫೋರ್ಕ್‌ ಅನ್ನು ಹೊಂದಿದೆ. ಈ ಹೊಸ ಬೈಕಿನ ಹಿಂಭಾಗದಲ್ಲಿ ಬ್ಯಾಕ್-ಲಿಂಕ್ ಸಂಸೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ಝಡ್‍ಎಕ್ಸ್ 25ಆರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಅನಲಾಗ್ ಟ್ಯಾಕೋಮೀಟರ್ ಮತ್ತು ಸೆಮಿ ಡಿಜೆಟಲ್ ಯುನಿಟ್ ಸಿಸ್ಟಂ ಅನ್ನು ಹೊಂದಿರಲಿದೆ. ಕವಾಸಕಿ ಝಡ್‍ಎಕ್ಸ್ 25ಆರ್ ಎಲೆಕ್ತ್ರಾನಿಕ್ ರೈಡರ್ ಅನ್ನು ಒಳಗೊಂಡಿದೆ.

ಬಹಿರಂಗವಾಯ್ತು ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕಿನ ಮಾಹಿತಿ

ಕವಾಸಕಿ ಝಡ್‍ಎಕ್ಸ್ 25ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿಆರ್ 250 ಆರ್ಆರ್ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಈ ಎರಡು ಬೈಕುಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಪ್ರಬಲ ಪೈಪೋಟಿಯನ್ನು ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Ninja ZX-25R Power And Torque Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X