ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಬೈಕುಗಳನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿವೆ. ಕೆಟಿಎಂ 390 ಅಡ್ವೆಂಚರ್ ಮತ್ತು 250 ಅಡ್ವೆಂಚರ್ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಾಗಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಅಡ್ವೆಂಚರ್ ಟೂರರ್ ಬೈಕುಗಳು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದೆ. ಕೆಟಿಎಂ ಕಂಪನಿಯು ಕೈಗೆಟುಕುವ ದರದಲ್ಲಿ ತಮ್ಮ ಅಡ್ವೆಂಚರ್ ಬೈಕುಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಮಲೇಷಿಯನ್-ಸ್ಪೆಕ್ 250 ಅಡ್ವೆಂಚರ್ ಬೈಕಿನಲ್ಲಿ 248.8 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 9000 ಆರ್‌ಪಿಎಂನಲ್ಲಿ 30 ಬಿಹೆಚ್‍ಪಿ ಪವರ್ ಮತ್ತು 7500 ಆರ್‌ಪಿಎಂನಲ್ಲಿ 24 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಇನ್ನು ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್‌ಪಿಎಂನಲ್ಲಿ 43.5 ಬಿಹೆಚ್‍ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 37 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಇನ್ನು ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಜೋಡಿಸಲಾಗಿದೆ.ಬೈಕ್‌ಗಳು ಅದೇ ಅಲ್ಟ್ರಾ-ಲೈಟ್‌ವೈಟ್ ಮತ್ತು ಸ್ಟೇಬಲ್ ಟ್ರಿಲ್ಸ್ ಫ್ರೇಮ್ ಅನ್ನು ಹಂಚಿಕೊಳ್ಳುತ್ತವೆ. ಓಪನ್-ಲ್ಯಾಟಿಸ್ ಸ್ವಿಂಗಾರ್ಮ್ ಅನ್ನು ಪಡೆದುಕೊಳ್ಳುತ್ತವೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಕೆಟಿಎಂ 390 ಅಡ್ವೆಂಚರ್ ಬೈಕ್ ಆಫ್ ರೋಡ್ ಟೂರರ್ ಆಗಿದ್ದು, ಈ ಬೈಕ್ 390 ಡ್ಯೂಕ್ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ. ಈ ಬೈಕ್ ಕೆಟಿಎಂ 790 ಅಡ್ವೆಂಚರ್ ಬೈಕಿನಿಂದಲೂ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಎಂಎಂ ಮತ್ತು 855 ಸೀಟ್ ಎತ್ತರವನ್ನು ಹೊಂದಿದೆ. ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍‍ಲ್ಯಾಂಪ್‍, ಎಲ್‍ಇಡಿ ಟರ್ನ್‍ ಇಂಡಿಕೇಟರ್‍‍‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಬಣ್ಣದಿಂದ ಕೂಡಿದ ಆಕರ್ಷಕ ಟಿಎಫ್‍‍ಟಿ ಡಿಸ್‍‍ಪ್ಲೇ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಅಲ್ಯೂಮಿನಿಯಂ ಹ್ಯಾಂಡಲ್‍‍ಬಾರ್‍‍ಗಳು ಸ್ಪ್ಲಿಟ್ ಸೀಟುಗಳು ಮತ್ತು ಫ್ಯೂಯಲ್ ಟ್ಯಾಂಕ್ ಸ್ಪಾಯ್ಲರ್‍‍ಗಳನ್ನು ಕೂಡ ಅಳವಡಿಸಲಾಗಿದೆ. ಫ್ಯೂಯಲ್ ಟ್ಯಾಂಕ್‍‍ನ ಸೀಟು‍‍ಗಳು ವಿಸ್ತರಿಸಿದಾಗ ಹ್ಯಾಂ‍ಡಲ್ ಬಾರ್‍‍ಗಳನ್ನು ಹೆಚ್ಚಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಈ ಕೆಟಿಎಂ 390 ಅಡ್ವೆಂಚರ್ ಬೈಕ್ ಟ್ರಾ ಕ್ಷನ್ ಕಂಟ್ರೂಲ್ ಮತ್ತು ಎಬಿಎಸ್ ನಂತಹ ಹೊಸ ಫೀಚರ್ಸ್‍‍ಗಳನ್ನು ಹೊಂದಿದೆ. ಈ ಬೈಕ್ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಹಾಗೂ ಬಿ‍ಎಂ‍‍ಡಬ್ಲ್ಯು ಮೋಟೊರಾಡ್ ಜಿ310ಜಿ‍ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಕೆಟಿಎಂ 250 ಅಡ್ವೆಂಚರ್ ಬೈಕಿನಲ್ಲಿ ಹಿಂಭಾಗದ ಸಸ್ಪೆಷನ್ ಸೌಲಭ್ಯವನ್ನು 177ಎಂಎಂ ವರೆಗೆ ಎತ್ತರ ಹೋಂದಾಣಿಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಈ ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಅಡ್ವೆಂಚರ್ ಬೈಕುಗಳು

ಕೆಟಿಎಂ 250 ಅಡ್ವೆಂಚರ್ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 230-ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.ಇನ್ನು ಈ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಟ್ಯೂಬ್‌ಲೆಸ್ ಟೈರ್ ಜೋಡಿಸಲಾಗಿದೆ.

Most Read Articles

Kannada
Read more on ಕೆಟಿಎಂ ktm
English summary
2021 KTM 390 Adventure & 250 Adventure Launched In Malaysia. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X