ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಆರ್‍‍ಸಿ 125, ಆರ್‍‍ಸಿ 200 ಮತ್ತು ಟಾಪ್-ಸ್ಪೆಕ್ ಆರ್‍‍ಸಿ 390 ಬೈಕುಗಳನ್ನು ಬಿಡುಗಡೆಗೊಳಿಸಿವೆ. ಈ ಬೈಕುಗಳನ್ನು ಕೆಟಿಎಂ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿವೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಕೆಟಿಎಂ ಕಂಪನಿಯು ಆರ್‍‍ಸಿ ಸರಣಿಯಲ್ಲಿರುವ ತನ್ನ ಎಲ್ಲಾ ಬೈಕುಗಳನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿವೆ. ಆರ್‍‍ಸಿ 125 ಬೈಕ್ ಹೊಸ ಡಾರ್ಕ್ ಗಾಲ್ವಾನೋ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಕೆಟಿಎಂ ಆರ್‍‍ಸಿ 200 ಬೈಕ್ ಹೊಸ ಎಲೆಕ್ಟ್ರಾನಿಕ್ ಆರೆಂಜ್ ಅನ್ನು ಬಣ್ಣದ ಆಯ್ಕೆಯನ್ನು ಪಡೆದುಕೊಂಡ್ಡರೆ, ಆರ್‍‍ಸಿ 390 ಬೈಕ್ ಹೊಸ ಮೆಟಾಲಿಕ್ ಸಿಲ್ವರ್ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಹೊಸ ಬಣ್ಣಗಳ ಆಯ್ಕೆಯಲ್ಲಿ ಪರಿಚಯಿಸಲಾಗಿದ್ದು, ಆದರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಕಂಪನಿಯ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಬಣ್ಣಗಳ ಆಯ್ಕೆ ಜೊತೆ ಹೊಸ ಬಣ್ಣವನ್ನು ಪರಿಚಯಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ಹೊಸ ಮೆಟಾಲಿಕ್ ಸಿಲ್ವರ್ ಬಣ್ಣದ ಆಯ್ಕೆಯೊಂದಿಗೆ ಬೋಲ್ಡ್ ಆರ್‍‍ಸಿ ಸಿಗ್ನೇಚರ್ ಆಕರ್ಷಕವಾಗಿ ಕಾಣುತ್ತದೆ. ಕೆಟಿಎಂನ ಸೂಪರ್‌ಸ್ಪೋರ್ಟ್ ಸರಣಿಯಲ್ಲಿರುವ ಮಾದರಿಯ ಅಂಶವನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಈ ಹೊಸ ಬೈಕ್ ಬಿಡುಗಡೆಗೊಳಿಸಿ ಮಾತನಾಡಿದ ಸುಮೀತ್ ನಾರಂಗ್ ಅವರು ಮಾತನಾಡಿ, ಕೆಟಿಎಂ ಆರ್‍‍ಸಿ ಬೈಕುಗಳು ಅದರ ತಂತ್ರಜ್ಞಾನ ಮತ್ತು ಮೋಟೋ ಜಿಪಿ ರೇಸರ್ ನಿಂದ ಸ್ಫೂರ್ತಿ ಪಡೆದ ರೇಸ್-ಬ್ರೀಡ್ ಯಂತ್ರಗಳನ್ನು ಒಳಗೊಂಡಿದೆ ಎಂದರು.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಭಾರತದ ಸೂಪರ್‌ಸ್ಪೋರ್ಟ್ ಬೈಕುಗಳು ಅಗ್ರೇಸಿವ್ ಲುಕ್ ಮತ್ತು ಅತ್ಯಾಕರ್ಷಕ ಬಣ್ಣ ಆಯ್ಕೆಯನ್ನು ಹೊಂದಿದೆ. ಹೊಸ ಬಣ್ಣದ ಆಯ್ಕೆಯು ಬೈಕುಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು 320 ಎಂಎಂ ದೊಡ್ಡ ಫ್ರಂಟ್ ಬ್ರೇಕ್ ಡಿಸ್ಕ್ ಅನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಕೆಟಿಎಂ ಆರ್‍‍ಸಿ 200 ಬೈಕ್ ಎಲೆಕ್ಟ್ರಾನಿಕ್ ಆರೆಂಜ್ ಬಣ್ಣ ಮತ್ತು ಆರ್‍‍ಸಿ 125 ಬೈಕ್ ಡಾರ್ಕ್ ಗಾಲ್ವಾನೋ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕುಗಳು ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕುಗಳಲ್ಲಿ ಗ್ರಾಫಿಕ್ಸ್ ವಿಭಿನ್ನವಾಗಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಹೊಸ ಕೆಟಿಎಂ ಆರ್‍‍ಸಿ 125 ಬೈಕಿನ ಬೆಲೆಯು ರೂ.1.59 ಲಕ್ಷಗಳಾದರೆ ಕೆಟಿಎಂ ಆರ್‍‍ಸಿ 200 ಬೈಕಿನ ಬೆಲೆಯು ರೂ.2.0 ಲಕ್ಷಗಳಾಗಿದೆ. ಇನ್ನು ಕೆಟಿಎಂ ಆರ್‍‍ಸಿ 390 ಬೈಕಿನ ಬೆಲೆಯು ರೂ.2.53 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಡುಗಡೆಯಾಯ್ತು ಹೊಸ ಕೆಟಿಎಂ ಆರ್‍‍ಸಿ ಬೈಕುಗಳು

ಕೆಟಿಎಂ ಆರ್‍‍ಸಿ 125, ಆರ್‍‍ಸಿ 200 ಮತ್ತು ಟಾಪ್-ಸ್ಪೆಕ್ ಆರ್‍‍ಸಿ 390 ಬೈಕುಗಳು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಿವೆ. ಈ ಹೊಸ ಬೈಕುಗಳು ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM RC 125, RC 200 & RC 390 Launched In New Colours. Read In Kannada.
Story first published: Tuesday, September 29, 2020, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X