ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಎಂವಿ ಅಗಸ್ಟಾ ತನ್ನ ಬ್ರೂಟೇಲ್ 800 ಎಸ್‌ಸಿಎಸ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಬ್ರೂಟೇಲ್ 800 ಎಸ್‌ಸಿಎಸ್ ಬೈಕನ್ನು ಮೊದಲ ಬಾರಿಗೆ ಟೂರಿಸ್ಮೊ ವೆಲೊಚೆ 800 ಮಾದರಿಯೊಂದಿಗೆ ಪರಿಚಯಿಸಲಾಗಿತ್ತು.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಈ ಹೊಸ ಸ್ಟ್ರೀಟ್‌ಫೈಟರ್ ಮಾದರಿಯು ಸ್ಮಾರ್ಟ್ ಕ್ಲಚ್ ಸಿಸ್ಟಂನೊಂದಿಗೆ ಬಿಡುಗಡೆಯಾಗಲಿದೆ. ಇನ್ನು ಈ ಮಾದರಿಯಲ್ಲಿ ಸ್ಮಾರ್ಟ್ ಕ್ಲಚ್ ಸಿಸ್ಟಂನೊಂದಿಗೆ ಸವಾರರು ಗೇರ್‌ಗಳನ್ನು ಆರಿಸಿದರೆ ಸಾಮಾನ್ಯ ಬೈಕುಗಳಂತೆ ಬದಲಾಯಿಸಬಹುದು. ಇನ್ನು ಬ್ರೂಟೇಲ್ 800 ಎಸ್‌ಸಿಎಸ್ ಮಾದರಿಯು ಟೂ-ವೇ ಕ್ವಿಕ್‌ಶಿಫ್ಟರ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿರುತ್ತದೆ. ಈ ಹೊಸ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್ ಏವಿಯೋ ಗ್ರೇ ಜೊತೆ ಶಾಕ್ ಪರ್ಲ್ ರೆಡ್ ಮತ್ತು ಡಾರ್ಕ್ ಮೆಟಾಲಿಕ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಈ ಹೊಸ ಸ್ಟ್ರೀಟ್‌ಫೈಟರ್ ಮಾದರಿಯನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಆದರೆ ಎಂವಿ ಅಗಸ್ಟಾ ಕಂಪನಿಯು ಈ ಬೈಕಿನ ಬಿಡುಗಡೆಯ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಈ ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕನ್ನು ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಸ್ವಲ್ಪ ಪ್ರೀಮಿಯಂ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಇನ್ನು ಎಂವಿ ಅಗಸ್ಟಾ ಕಂಪನಿಯು ಹೊಸ ಎಫ್3 800 ಬೈಕನ್ನು ಹಲವು ನವೀಕರಣಗಳನ್ನು ನಡೆಸಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಎಂವಿ ಅಗಸ್ಟಾ ಎಫ್3 800 ಬೈಕನ್ನು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಈ ಸೂಪರ್‌ಸ್ಪೋರ್ಟ್ ಬೈಕ್ ದೇಶದ ಅತ್ಯುತ್ತಮ ಮಾದರಿಗಳಲ್ಲಿ ಒಂದಾಗಿದೆ. ಎಂವಿ ಅಗಸ್ಟಾ ಎಫ್3 800 ಬೈಕಿಗೆ ನೇರ ಪ್ರತಿಸ್ಪರ್ಥಿಯಾಗಿ ಸಧ್ಯಕ್ಕೆ ಯಾವುದೇ ಮಾದರಿಗಳಿಲ್ಲ. ಎಂವಿ ಅಗಸ್ಟಾ ಎಫ್3 800 ಮಾದರಿಯಲ್ಲಿ ಹಲವು ನವೀಕರಣಗಳನ್ನು ಮಾಡಲಾಗುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಆದರೆ ಬೈಕಿನ ಸಿಲೂಯೆಟ್ ಹೆಚ್ಚಾಗಿ ಬದಲಾಗದೆ ಉಳಿಯುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಬೈಕಿನಲ್ಲಿ ರೈಡ್ ಬೈ ವೈರ್, ಫೋರ್ ರೈಡರ್ ಮೋಡ್, 8 ಲೆವೆಲ್‍‍ನ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ರೇಸ್ ಮೋಡ್ ಸೆಟ್ಟಿಂಗ್ ಹೊಂದಿರುವ ಬಾಷ್ ಎ‍‍ಬಿ‍ಎಸ್ ಹಾಗೂ ರೇರ್ ವ್ಹೀಲ್ ಲಿಫ್ಟ್ ಅಪ್ ಮಿಟಿಗೇಷನ್‍‍ಗಳನ್ನು ಹೊಂದಿರುತ್ತದೆ.

ಅನಾವರಣವಾಯ್ತು ಹೊಸ ಎಂವಿ ಅಗಸ್ಟಾ ಬ್ರೂಟೇಲ್ 800 ಎಸ್‌ಸಿಎಸ್ ಬೈಕ್

ಎಂವಿ ಅಗಸ್ಟಾ ಕಂಪನಿಯು ಎಫ್3 800 ಬೈಕನ್ನು ಹಲವಾರು ನವೀಕರಣಗಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.ಇನ್ನು ಹೊಸ ಬ್ರೂಟೇಲ್ 800 ಎಸ್‌ಸಿಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಮುಂಬರುವ ವರ್ಷಗಳಲ್ಲಿ ಈ ಹೊಸ ಸ್ಟ್ರೀಟ್‌ಫೈಟರ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2020 MV Agusta Brutale 800 SCS Revealed. Read In Kannada.
Story first published: Sunday, August 2, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X