Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಎಡಿಷನ್
ಜನಪ್ರಿಯ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಕಂಪನಿಯು ಮೋಟೋ ಜಿಬಿಯೊಂದಿಗೆ ಕೈಜೋಡಿಸಿ ಹೊಸ ಹಿಮಾಲಯನ್ ಅಡ್ವೆಂಚರ್ ಎಡಿಷನ್ ಅನ್ನು ಬ್ರಿಟನ್ ನಲ್ಲಿ ಬಿಡುಗಡೆಗೊಳಿಸಿದೆ. ಈ ಡ್ಯುಯಲ್-ಸ್ಪೋರ್ಟ್ ಸ್ಪೆಷಲ್ ಎಡಿಷನ್ ಹಲವಾರು ಅಕ್ಸೆಸರೀಸ್ ಅನ್ನು ಹೊಂದಿದೆ.

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಎಡಿಷನ್ನಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 23.9 ಬಿಹೆಚ್ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5 ಸ್ಪೀಡ್ ಗೇರ್ಬಾಕ್ಸ್ ನೀಡಲಾಗಿದೆ. ಹೊಸ ಹಿಮಾಲಯನ್ ಅಡ್ವೆಂಚರ್ ಎಡಿಷನ್ನಲ್ಲಿ ನಕಲ್ ಗಾರ್ಡ್ ಗಳನ್ನು ಸಹ ಒಳಗೊಂಡಿದೆ.

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಎಡಿಷನ್ನಲ್ಲಿ ಪ್ರಮುಖವಾಗಿ ಅಲ್ಯೂಮಿನಿಯಂ ಪ್ಯಾನಿಯರ್ಗಳ ಸೆಟ್. ನಿಮ್ಮ ಅಗತ್ಯವಾದ ವಸ್ತುಗಳನ್ನು ಇಟ್ಟುಕೊಳ್ಳಲು ಮತ್ತು ಇತರ ಪ್ರಮುಖ ಲಗೇಜ್ ಗಳನ್ನು ಇಡಲು ಪ್ರತ್ಯೇಕವಾಗಿ ಬ್ರಾಕೆಟ್ ಗಳನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಎಡಿಷನ್ ಲಿಮಿಟಡ್ ಮಾದರಿಗಳಾಗಿದೆ. ಸೇರಿಸಿದ ಬೋಲ್ಟ್-ಆನ್ ಅಕ್ಸೆಸರೀಸ್ ಹೊರತಾಗಿ, ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಎಡಿಷನ್ನಲ್ಲಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹಿಮಾಲಯನ್ ಬೈಕಿನಲ್ಲಿ ಸ್ಪೋಕ್ ವ್ಹೀಲ್, ಎಂಆರ್ಎಫ್ ಡ್ಯುಯಲ್ ಪರ್ಪಸ್ ಟಯರ್ಗಳನ್ನು ಹೊಂದಿದೆ. ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈಟ್ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಫೀಚರ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಆಫ್ ರೋಡ್ ಪ್ರಿಯರನ್ನು ಸೆಳೆಯುತ್ತದೆ. ಈ ಸ್ವಿಚ್ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಮೇಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಬಹುದು

ಇದರೊಂದಿಗೆ ಸವಾರ ಸುಲಭವಾಗಿ ಎಬಿಎಸ್ ಅನ್ನು ಆಫ್ ಮಾಡಬಹುದು ಮತ್ತು ಸಂಕಷ್ಠದ ಸನ್ನಿವೇಷದಲ್ಲಿ ಬೈಕ್ ನಿಲ್ಲಿಸಲು ಹಿಂದಿನ ಟಯರ್ಗಳನ್ನು ಲಾಕ್ ಮಾಡಬಹುದು. ಹಜಾರ್ಡ್ ಲೈಟ್ಗಳು ಕಠಿಣವಾದ ಹವಮಾನ ಪರಿಸ್ಥಿತಿಯಲ್ಲೂ ಸವಾರಿ ಮಾಡಲು ಹೆಚ್ಚು ಸಹಕಾರಿಯಾಗಿವೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಬೈಕಿನ ಮುಂಭಾಗದಲ್ಲಿ 21 ಇಂಚಿನ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್ಗಳನ್ನು ಹೊಂದಿವೆ. ಬ್ರೇಕಿಂಗ್ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್ಗಳಿವೆ.

ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ರಾಯಲ್ ಎನ್ಫೀಲ್ಡ್ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮಿಟಿಯೊರ್ 350 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.