ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ವಿನೂತನ ವಿನ್ಯಾಸದ ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಆವೃತ್ತಿಯಾದ ಇನ್‌ಟ್ರುಡರ್ 150 ಬೈಕ್ ಮಾದರಿಯನ್ನ ಹೊಸ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಬಿಎಸ್-4 ಆವೃತ್ತಿಗಿಂತಲೂ ಹೊಸ ಬೈಕ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಸುಜುಕಿ ಸಂಸ್ಥೆಯು ಈಗಾಗಲೇ ಬಹುತೇಕ ದ್ವಿಚಕ್ರ ವಾಹನಗಳನ್ನು ಹೊಸ ಎಂಜಿನ್‌ನೊಂದಿಗೆ ಉನ್ನತೀಕರಿಸಿದ್ದು, ಇದೀಗ ಇನ್‌ಟ್ರಡರ್ 150 ಮಾದರಿಯನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಮೂಲಕ ಬಹುತೇಕ ದ್ವಿಚಕ್ರ ವಾಹನಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದಂತಾಗಿದೆ. ಹೊಸ ಇನ್‌ಟ್ರುಡರ್ 150 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.20 ಲಕ್ಷ ಬೆಲೆ ಹೊಂದಿದ್ದು, ಎಂಜಿನ್ ಹೊರತಾಗಿ ಇನ್ನುಳಿದ ಬಹುತೇಕ ತಾಂತ್ರಿಕ ಅಂಶಗಳು ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಬಿಎಸ್-6 ಎಂಜಿನ್ ನಂತರ ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ.13 ಸಾವಿರದಷ್ಟು ಏರಿಕೆಯಾಗಿದ್ದು, ಹೊಸ ಎಂಜಿನ್‌ನಿಂದಾಗಿ ಮಾಲಿನ್ಯ ಪ್ರಮಾಣದ ಗಣನೀಯ ಇಳಿಕೆಯಾಗಿರುವುದಲ್ಲದೆ ಮೈಲೇಜ್ ಪ್ರಮಾಣದಲ್ಲೂ ಹೆಚ್ಚಳವಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಇದರೊಂದಿಗೆ ಗ್ರಾಹಕರ ಬೇಡಿಕೆ ಮೇರೆಗೆ ಹೆಚ್ಚುವರಿಯಾಗಿ ಮೂರು ಬಣ್ಣಗಳ ಆಯ್ಕೆಯನ್ನು ಪರಿಚಯಿಸಲಾಗಿದ್ದು, ಈ ಮೊದಲಿನ ಮೆಟಾಲಿಕ್ ಮ್ಯಾಟೆ ಬ್ಲ್ಯಾಕ್ ಜೊತೆಗೆ ಹೊಸದಾಗಿ ಕ್ಯಾಂಡಿ ಸೊನಾಮ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತ ಮೆಟಾಲಿಕ್ ಮ್ಯಾಟೆ ಟೈಟಾನಿಯಂ ಸಿಲ್ವರ್ ಬಣ್ಣಗಳಲ್ಲಿ ಪರಿಚಯಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಎಂಜಿನ್ ಸಾಮಾರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್ ವೈಶಿಷ್ಟ್ಯತೆಯ 154.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರೂಡರ್ 150 ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 13-ಬಿಎಚ್‌ಪಿ ಮತ್ತು 13.8-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಈ ಹಿಂದಿನ ಆವೃತ್ತಿಗಿಂತಲೂ ಶೇ.15 ರಷ್ಟು ಹೆಚ್ಚು ಇಂಧನ ಪಡೆದುಕೊಂಡಿದೆ. ಪರ್ಫಾಮೆನ್ಸ್ ವಿಚಾರದಲ್ಲಿ ಹೊಸ ಬೈಕ್‌ನಲ್ಲಿ ತುಸು ಇಳಿಕೆ ಮಾಡಲಾಗಿದ್ದು, ಎಂಜಿನ್ ಸಾಮಾರ್ಥ್ಯಕ್ಕೆ ತಕ್ಕಂತೆ ಹಾರ್ಸ್ ಪವರ್ ನಿಗದಿ ಮಾಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಹಾಗೆಯೇ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್ ಬೈಕ್ ಮಾದರಿಗಳಲ್ಲಿ ಸುಜುಕಿ ಇಕೋ ಪರ್ಫಾಮೆನ್ಸ್(ಎಸ್ಇಪಿ) ತಂತ್ರಜ್ಞಾನ ಬಳಕೆ ಮಾಡಿದ್ದು, ಪರ್ಫಾಮೆನ್ಸ್ ಸುಧಾರಣೆಯೊಂದಿಗೆ ಇಂಧನ ದಕ್ಷತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಇನ್ನುಳಿದಂತೆ ಹೊಸ ಬೈಕ್ ಮಾದರಿಯು ಈ ಹಿಂದಿನ ತಾಂತ್ರಿಕ ಸೌಲಭ್ಯಗಳನ್ನೇ ಪಡೆದುಕೊಂಡಿದ್ದು, ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಮಾದರಿಗಳಲ್ಲೇ ಇದು ಅತ್ಯುತ್ತಮ ಆಯ್ಕೆಯಾಗಿರಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಇನ್ನು ಸುಜುಕಿ ಇನ್‌ಟ್ರುಡರ್ ಬೈಕ್ ಮಾದರಿಯು ಜಾಗತಿಕ ಕ್ರೂಸರ್ ಬೈಕ್‌ಗಳಿಗೆ ಹೊಸ ಆಯಾಮವನ್ನು ತುಂಬಿದ್ದು, ಈಗ ತನ್ನದೇ ಆದ ವಿಶಿಷ್ಟ ವಿನ್ಯಾಸದೊಂದಿಗೆ ಭಾರತದಲ್ಲೂ ಗಮನ ಸೆಳೆಯುತ್ತಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಇದಲ್ಲದೇ ಶಕ್ತಿಯುತವಾದ ವಿನ್ಯಾಸ, ಇಂಧನ ಟ್ಯಾಂಕ್, ಕಡಿಮೆ ಎತ್ತರದ ಸೀಟು, ಹ್ಯಾಂಡಲ್‌ಬಾರ್, ಫೂಟ್ ಪೆಗ್, ಆರಾಮದಾಯಕ ಸೀಟು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಹೆಡ್‌ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಸುಜುಕಿ ಇನ್‌ಟ್ರುಡರ್ 150 ಬಿಡುಗಡೆ

ಬೈಕಿನಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದ ಚಕ್ರದಲ್ಲಿ ಮೊನೋಶಾರ್ಕ್‌ ಸಸ್ಷೆಷನ್ ಹೊಂದಿದೆ. ಹಾಗೆಯೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ಚಕ್ರದಲ್ಲಿ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಅಳವಡಿಕೆ ಮಾಡಲಾಗಿದೆ.

Most Read Articles

Kannada
English summary
Suzuki Motorcycle India has launched BS6 compliant Intruder 150 bike in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X