ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್-ಎಡಿಷನ್ ಎಂಬ ಎರಡು ಮಾದರಿಗಳನ್ನು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಟ್ರಯಂಫ್ ಬೊನೆವೆಲ್ಲಿ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಡಿಷನ್ ಬೈಕುಗಳ ಬೆಲೆಯು ಕ್ರಮವಾಗಿ ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ. 8.87 ಲಕ್ಷ ಮತ್ತು ರೂ.9.97 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಎರಡು ಬೈಕುಗಳಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಎರಡು ಬೈಕುಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ತನ್ನ ಬೊನೆವಿಲ್ಲೆ ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸುತ್ತಿವೆ. ಟ್ರಯಂಫ್ ಬೊನೆವೆಲ್ಲಿ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಬೈಕುಗಳಲ್ಲಿ ಕ್ರೋಮ್ ಅಂಶಗಳನ್ನು ಕಡಿಮೆಗೊಳಿಸಿ ಹಲವಾರು ಕಪ್ಪು ಎಲಿಮೆಂಟ್ ಅಂಶಗಳನ್ನು ಹೊಂದಿದೆ. ಈ ಎರಡು ಬೈಕುಗಳಲ್ಲಿ ಬ್ಲ್ಯಾಕ್ ಔಟ್ ವ್ಹೀಲ್, ಎಂಜಿನ್ ಕವರ್, ಮಿರರ್ ಮತ್ತು ಎಕ್ಸಾಸ್ಟ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಗಳು ಕೇವಲ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬ್ಲ್ಯಾಕ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಹಿಂದಿನ ಮಾದರಿ ಟ್ರಯಂಫ್ ಬೊನೆವಿಲೆ ಟಿ100 ಬ್ಲ್ಯಾಕ್ ಎಡಿಷನ್ ಮಾದರಿಯು 900 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5400 ಆರ್‌ಪಿಎಂನಲ್ಲಿ 54 ಬಿಹೆಚ್‌ಪಿ ಪವರ್ ಮತ್ತು 3230 ಆರ್‌ಪಿಎಂನಲ್ಲಿ 84 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಇನ್ನು ಟ್ರಯಂಫ್ ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ 1,200 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6550 ಆರ್‌ಪಿಎಂನಲ್ಲಿ 79 ಬಿಹೆಚ್‌ಪಿ ಪವರ್ ಮತ್ತು 3100 ಆರ್‌ಪಿಎಂನಲ್ಲಿ 105 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಈ ಎರಡು ಹೊಸ ಬೈಕುಗಳಲ್ಲಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ರೈಡ್-ಬೈ-ವೈರ್, ಡ್ಯುಯಲ್-ಚಾನೆಲ್ ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳು, ಕ್ಲಾಸಿಕ್ ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಂಜಿನ್ ಇಮೊಬೈಲೈಸರ್ ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಟ್ರಯಂಫ್ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸುತ್ತಿದೆ. ಟ್ರಯಂಫ್ ಕಂಪನಿಯು ತನ್ನ ಸರಣಿಯಲ್ಲಿದ್ದ ಎಲ್ಲಾ ಬಿಎಸ್-4 ಮಾದರಿಗಳನ್ನು ಮಾರಾಟ ಮಾಡಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಇದರೊಂದಿಗೆ ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಬೈಕನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಈ ಹೊಸ ಟೈಗರ್ 900 ಬೈಕನ್ನು ಭಾರತದಲ್ಲಿ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟ್ರಯಂಫ್ ಬೊನೆವೆಲ್ಲಿ ಬೈಕುಗಳು

ಟ್ರಯಂಫ್ ಕಂಪನಿಯು ತನ್ನ ಹಲವು ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ. ಇದರ ಭಾಗವಾಗಿ ಹೊಸ ಬೊನೆವಿಲ್ಲೆ ಟಿ100 ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
Triumph Bonneville T100 & T120 Black Edition Launched In India. Read In Kannada.
Story first published: Friday, June 12, 2020, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X