ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಮೋಟಾರ್‌ಸೈಕಲ್ ತನ್ನ ರಾಕೆಟ್ 3 ಜಿಟಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಕೊನೆಗೂ ತನ್ನ ಬಹುನಿರೀಕ್ಷಿತ ರಾಕೆಟ್ 3 ಜಿಟಿ ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ಹೊಸ ರಾಕೆಟ್ 3 ಜಿಟಿ ಬೈಕನ್ನು ಇದೇ ತಿಂಗಳ 10ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತದೆ. ಇದೀಗ ಟ್ರಯಂಫ್ ಕಂಫನಿಯು ಹೊಸ ರಾಕೆಟ್ 3 ಜಿಟಿ ಬೈಕಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟ್ರಯಂಫ್ ಮೋಟಾರ್‌ಸೈಕಲ್ ತನ್ನ ರಾಕೆಟ್ 3 ಜಿಟಿ ಬೈಕನ್ನು ಕಳೆದ ವರ್ಷ ನಡೆದ 2019 ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದ್ದರು. ರಾಕೆಟ್ 3 ಜಿಟಿ ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ.

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ಹೊಸ ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿ ಮಾಸ್ ಬೈಕುಗಳಲ್ಲಿಯೇ ಅತಿ ದೊಡ್ಡದು ಎನ್ನಲಾದ 2,458 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 165 ಬಿ‍‍ಹೆಚ್‍‍ಪಿ ಪವರ್ ಹಾಗೂ 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಹೊಸದಾದ ಕ್ರಾಂಕ್‍‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ.

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಹಲವಾರು ಫೀಚರ್ ಹಾಗೂ ಎಲೆಕ್ಟ್ರಾನಿಕ್ ಎಕ್ವಿಪ್‍‍ಮೆಂಟ್‍‍ಗಳಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2020ರ ರಾಕೆಟ್ 3 ಜಿಟಿ ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಹಗುರ ತೂಕದ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳಿವೆ.

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ಇದು ಬೃಹತ್ ಎಂಜಿನ್‍‍ನ ಒತ್ತಡ ನಿವಾರಿಸುವಂತೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ರಾಕೆಟ್ 3 ಜಿಟಿ ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಯುಎಸ್‍‍ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ. ಮುಂಭಾಗದ ಸಸ್ಪೆಂಷನ್ 120 ಎಂಎಂ ಟ್ರಾವೆಲ್‍‍ನೊಂದಿಗೆ ಬಂದರೆ, ಹಿಂಭಾಗವು 107 ಎಂಎಂ ಟ್ರಾವೆಲ್‍‍ನೊಂದಿಗೆ ಬರುತ್ತದೆ. ಈ ಎರಡೂ ಸಸ್ಪೆಂಷನ್‍‍ಗಳು ಶೋವಾ ಕಂಪನಿಯಾದಾಗಿವೆ

ಟ್ರಯಂಫ್ ರಾಕೆಟ್ 3 ಜಿಟಿ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಮುಂಭಾಗದ ಸಸ್ಪೆಂಷನ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಯೊಂದಿಗೆ ಬರುತ್ತದೆ. ಹಿಂಭಾಗದ ಸಸ್ಪೆಂಷನ್ ರಿಮೋಟ್ ಅಡ್ಜಸ್ಟರ್ ಹೊಂದಿದೆ. ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಬ್ರೇಕ್ ಗಳಿವೆ.

Most Read Articles

Kannada
English summary
Triumph Rocket 3 GT India Launch Timeline Revealed. Read In Kannada.
Story first published: Friday, September 4, 2020, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X