Just In
- 2 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 2 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 4 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 4 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕ್
ಟ್ರಯಂಫ್ ಕಂಪನಿಯು ತನ್ನ ದುಬಾರಿ 2020ರ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಇದೇ ತಿಂಗಳ 25ರಂದು ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.
ಹೊಸ ಮಿಡ್ ಸರಣಿಯ ಈ ಸ್ಪೋರ್ಟ್ಸ್ ಬೈಕ್ ರಿವೈಸ್ ಮಾಡಲಾದ ಡಿಸೈನ್ ಆಕ್ಸೆಸರೀಸ್, ಆಫ್ ರ್ಯಾಕ್ ಟೆಕ್ನಾಲಜಿ ಹಾಗೂ ಮಿಡ್ ಸರಣಿಯ ಬಿಎಸ್ 6 ಎಂಜಿನ್ ಅನ್ನು ಹೊಂದಿದೆ. ಟ್ರಯಂಫ್ ಆರ್ಎಸ್ ಬೈಕ್, ರಾಕೆಟ್ 3 ಬೈಕಿನ ನಂತರ ಟ್ರಯಂಫ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಎರಡನೇ ಬೈಕ್ ಆಗಿದೆ. ಟ್ರಯಂಫ್ ಕಂಪನಿಯ ಐಷಾರಾಮಿ ಬೈಕುಗಳಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಕೂಡ ಒಂದಾಗಿದೆ.
ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕಿನ ಬೆಲೆಯು ರೂ.11.13 ಲಕ್ಷಗಳಾಗಿದೆ. ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕ್, ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕಿಗಿಂತ ಹೆಚ್ಚು ರಗಡ್ ಲುಕ್ ಅನ್ನು ಹೊಂದಿದೆ.
2020ರ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್ಇಡಿ ಹೆಡ್ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿಆರ್ಎಲ್ಗಳನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಬಾಡಿ ಪ್ಯಾನೆಲ್, ರೇರ್ ಸೀಟ್ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.
ಈ ಬದಲಾವಣೆಗಳಿಂದ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ನಲ್ಲಿ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಸಲಿದೆ.
ಈ ಹೊಸ ಬೈಕಿನಲ್ಲಿ ಬ್ಲೂಟೂಥ್ ಸೇರಿದಂತೆ ಹಲವಾರು ಫೀಚರ್ಗಳಿರಲಿವೆ. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕಿನಲ್ಲಿ 765 ಸಿಸಿಯ ಇನ್ಲೈನ್ ಎಂಜಿನ್ ಅಳವಡಿಸಲಾಗಿದೆ.
ಈ ಎಂಜಿನ್ ಅನ್ನು ಟ್ರಯಂಫ್ ಕಂಪನಿಯ ಮೋಟೊ 2 ಎಂಜಿನ್ ಅಪ್ಗ್ರೇಡ್ ಮಾಡುತ್ತಿರುವ ತಂಡವು ತಯಾರಿಸಿದೆ. ಈ ಬೈಕ್ ಹೊಸದಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.
ಈ ಬೈಕಿನಲ್ಲಿರುವ ಎಂಜಿನ್ 123 ಬಿಹೆಚ್ಪಿ ಪವರ್ ಹಾಗೂ 79 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ
ಇದರಿಂದಾಗಿ ಬೈಕ್ ಸವಾರನು ಲೊ ಹಾಗೂ ಮಿಡ್ ಎಂಬ ಎರಡು ವಿಧದ ಸೈಲೆನ್ಸರ್ ಸೌಂಡ್ ಅನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿರುವ ಬಿಎಸ್ 4 ಬೈಕಿನಲ್ಲಿ ಅಪ್ಶಿಫ್ಟ್ ಇದ್ದರೆ, ಹೊಸ ಬೈಕಿನಲ್ಲಿ ಅಪ್ ಅಂಡ್ ಡೌನ್ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕ್ಗಳಲ್ಲಿ ಒಂದಾಗಿದೆ.