Just In
- 1 hr ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 1 hr ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 1 hr ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 2 hrs ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Movies ಸ್ವಿಮ್ಮಿಂಗ್ ಪೂಲ್ನಲ್ಲಿ ಪತಿ ಜೊತೆ ನಟಿಯ ರೊಮ್ಯಾನ್ಸ್; ಟ್ರೋಲ್ ಆಗಿದ್ದು ಚಹಾಲ್ ಪತ್ನಿ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಯ್ತು ಬಹುನಿರೀಕ್ಷಿತ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್ಸೈಕಲ್ ತನ್ನ ಹೊಸ ಟೈಗರ್ 850 ಸ್ಪೋರ್ಟ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬ್ರ್ಯಾಂಡ್ನ ಎಂಟ್ರಿ ಲೆವಲ್ ಮಾದರಿಯಾಗಿದೆ.
ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಹೆಚ್ಚು ರಸ್ತೆ ಆಧಾರಿತ ಅಡ್ವೆಂಚರ್ ಟೂರರ್ ಎಂದು ಹೇಳಲಾಗುತ್ತದೆ, ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ವಿಷಯಕ್ಕೆ ಬಂದರೆ, ಇದರ ದೊದಣ್ಣ ಟೈಗರ್ 900 ಮಾದರಿಯಂತೆ ವಿನ್ಯಾಸವಿದೆ. ಇವೆರಡರ ನಡುವೆ ವ್ಯತ್ಯಾಸವನ್ನು ತೋರಿಸಲು ಹೊಸ ಟೈಗರ್ 850 ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಗ್ರ್ಯಾಫೈಟ್/ಡಯಾಬ್ಲೊ ರೆಡ್ ಮತ್ತು ಗ್ರ್ಯಾಫೈಟ್/ಕ್ಯಾಸ್ಪಿಯನ್ ಬ್ಲೂ ಎಂಬ ಎರಡು ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಹೊಂದಿವೆ.
ಟೈಗರ್ 900 ನಲ್ಲಿರುವಂತೆ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಮುಂಭಾಗ ಹೊಂದಾಣಿಕೆ ಮಾಡಬಹುದಾದ ವಿಂಡ್ಶೀಲ್ಡ್, ಫ್ಯೂಯಲ್ ಟ್ಯಾಂಕ್, ರೇಡಿಯೇಟರ್ ಮತ್ತು ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇನ್ನು ಈ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ಹಲವಾರು ಅಕ್ಸೇಸರೀಸ್ ಗಳನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಅದೇ 888 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್ಪಿ ಪವರ್ ಮತ್ತು 82 ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.
ಟೈಗರ್ 900 ಬೈಕಿಗೆ ಹೋಲಿಸಿದರೆ 10 ಬಿಹೆಚ್ಪಿ ಪವರ್ ಮತ್ತು 5 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸುತ್ತದೆ. ಇನ್ನು ಎಂಜಿನ್ ಅನ್ನು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ನೊಂದಿಗೆ ಆರು-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ರೈನ್ ಮತ್ತು ರೋಡ್ ಎಂಬ ಎರಡು ರೈಡಿಂಗ್ ಮೋಡ್ಗಳೊಂದಿಗೆ ಬರಲಿದೆ: ಆದರೆ ಕ್ವಿಕ್-ಶಿಫ್ಟರ್ ಅನ್ನು ಹೆಚ್ಚುವರಿ ಅಕ್ಸೇಸರೀಸ್ ಆಗಿ ನೀಡಲಾಗುತ್ತದೆ.
ಈ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ.ಇನ್ನು ಹಿಂಭಾಗವು 170 ಎಂಎಂ ಅನ್ನು ಮ್ಯಾನುವಲ್ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ನೀಡುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಇನ್ನು ಪ್ರಮುಖವಾಗಿ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಬಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 255 ಎಂಎಂ ಡಿಸ್ಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗುತ್ತದೆ.
ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇನ್ನು ಟೈಗರ್ 900 ಬೈಕ್ ಬೆಲೆಗೆ ಹೋಲಿಸಿದರೆ, ಟ್ರಯಂಫ್ ಟೈಗರ್ 850 ಸ್ಪೋರ್ಟ್ ಮಾದರಿಯನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.