Just In
- 58 min ago ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- 1 hr ago Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- 1 hr ago ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 2 hrs ago Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆ ದಿನಾಂಕ ಬಹಿರಂಗ
ಪಿಯಾಜಿಯೊ ಇಂಡಿಯಾ ಕಂಪನಿಯು ಕಂಪನಿಯು ತನ್ನ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು.
ಈ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ 150 ಸಿಸಿಯ ಸ್ಕೂಟರ್ ಆಗಿದೆ. ಈ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ 1960ರ ದಶಕದ ರೇಸಿಂಗ್ ಲೈವ್ರಿ ಮಾದರಿಯಿಂದ ಪ್ರೇರಿತವಾಗಿದೆ. ಈ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳಲ್ಲ ಬಿಡುಗಡೆಗೊಳಿಸಲು ಕಂಪನಿ ನಿರ್ಧರಿಸಲಾಗಿತ್ತು, ಆದರೆ ಕರೋನಾ ಸೋಂಕಿನ ಭೀತಿಯಿಂದಾಗಿ ಈ ಸ್ಕೂಟರ್ ಬಿಡುಗಡೆಯನ್ನು ಮುಂದೂಡಿಕೆ ಮಾಡಿದರು.
ಇದೀಗ ಪಿಯಾಜಿಯೊ ಇಂಡಿಯಾ ಕಂಪನಿಯು ಈ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ವರದಿ ಪ್ರಕಾರ 2020ರ ಸೆಪ್ಟೆಂಬರ್ 1 ರಂದು ಕಂಪನಿಯು ಈ ಹೊಸ ಸ್ಕೂಟರ್ ಅನ್ನು ಸೀಮಿತ ಸಂಖ್ಯೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್
ರೇಸಿಂಗ್ ಸಿಕ್ಸ್ಟೀಸ್ ಆಕರ್ಷಕ್ ಲುಕ್ ಅನ್ನು ಹೊಂದಿದೆ. ಈ ಸ್ಕೂಟರ್ ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿದೆ. ಎಸ್ಎಕ್ಸ್ಎಲ್ 150 ಸ್ಕೂಟರ್ ಅನ್ನು ಆಧರಿಸಿ ರೇಸಿಂಗ್ ಸಿಕ್ಸ್ಟೀಸ್ ವೈಟ್ವಾಶ್ ಬೇಸ್ ಬಣ್ಣವನ್ನು ಹೊಂದಿದೆ. ಇದರೊಂದಿಗೆ ರೇಸಿಂಗ್ ಸ್ಟ್ರಿಪ್ಸ್ ಅನ್ನು ಹೊಂದಿದೆ. ಸೈಡ್ ಪ್ಯಾನೆಲ್ಗಳು ರೇಸ್ ಸ್ಟ್ರಿಪ್ಗಳನ್ನು ಒಳಗೊಂಡಿರುತ್ತವೆ.
ಈ ಸ್ಕೂಟರ್ನ ಟಯರ್ಗಳಲ್ಲಿ ಗೋಲ್ಡನ್ ಬಣ್ಣಗಳ ಅಂಶವಿದೆ. ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಸ್ಕೂಟರಿನ ಮಿರರ್ ಫ್ಲೋರ್ಬೋರ್ಡ್ನಲ್ಲಿ ರಬ್ಬರ್ ಮತ್ತು ಎಲ್ಇಡಿ ಲೈಟ್ ಸುತ್ತಲೂ ಕಪ್ಪು ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಕಡಿಮೆ ಬೆಲೆಯ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್
ಈ ಸ್ಕೂಟರಿನಲ್ಲಿ 150 ಸಿಸಿ, ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7600 ಆರ್ಪಿಎಂನಲ್ಲಿ 10.4 ಬಿಹೆಚ್ಪಿ ಪವರ್ ಮತ್ತು 10.60 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ನಲ್ಲಿ ಹಲವಾರು ನೂತನ ಫೀಚರ್ಸ್ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಹೊಂದಿರುವ ಬೂಟ್ ಲೈಟ್ ಮತ್ತು ಫುಲ್ ಎಲ್ಇಡಿ ಹೆಡ್ಲೈಟ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು
ಈ ಸ್ಕೂಟರ್ ಮುಂಭಾಗದಲ್ಲಿ ಟ್ರೈಲಿಂಗ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೂಂದಿದೆ. ಈ ಸ್ಕೂಟರ್ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಇನ್ನೂ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ಗಳನ್ನು ನೀಡಲಾಗಿದೆ.
ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ನ ಬೆಲೆಯನ್ನು ಇನ್ನೂ ಕೂಡ ಕಂಪನಿಯು ಬಹಿರಂಗಪಡಿಸಿಲ್ಲ. ಈ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.3 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.