ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಡಿಲೈಟ್ ಸ್ಕೂಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಡಿಲೈಟ್ ಸ್ಕೂಟರ್ ಅನ್ನು ಸಾಕಷ್ಟು ಅಪ್ದೇಟ್ ಗಳನ್ನು ನಡೆಸಿ ಯಮಹಾ ಕಂಪನಿಯು ಪರಿಚಯಿಸಿದೆ.

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಹೊಸ ಯಮಹಾ ಡಿಲೈಟ್ ಸ್ಕೂಟರ್ ಒಟ್ಟಾರೆ ಸ್ಟೈಲಿಂಗ್ ಅನ್ನು ಹೆಚ್ಚು ಆಧುನಿಕ ಮತ್ತು ರೆಟ್ರೊ ಆಗಿ ಕಾಣುವಂತೆ ಪರಿಷ್ಕರಿಸಲಾಗಿದೆ. ಮುಂಭಾಗದ ಫಾಸಿಕ ಮೇಲಿನ ಕ್ರೋಮ್ ನೊಂದಿಗೆ ಹೆಡ್‌ಲೈಟ್ ಮತ್ತು ಇಂಡಿಕೇಟರ್ ಗಳು ಹೊಸದಾಗಿವೆ. ಯಮಹಾ ಡಿಲೈಟ್ ಸ್ಕೂಟರ್ ಹೊಸ ವಿನ್ಯಾಸ ಭಾಷೆಯನ್ನು 'ಯುನಿಸೆಕ್ಸ್ ಇನ್ ನೇಚರ್' ಎಂದು ಯಮಹಾ ಕಂಪನಿ ಹೇಳಿಕೊಂಡಿದೆ.

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

2021ರ ಯಮಹಾ ಡಿಲೈಟ್ ಸ್ಕೂಟರ್ ಅನ್ನು ಅಂಡರ್ಬೋನ್ ಫ್ರೇಮ್ ನಲ್ಲಿ ನಿರ್ಮಿಸಲಾಗಿದೆ. ಇನ್ನು ಈ ಸ್ಕೂಟರಿನಲ್ಲಿ ಫ್ಲಾಟ್ ಮಾದರಿಯ ಸೀಟುಗಳು ಮತ್ತು ಅಂಡಾಕಾರದ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

2021ರ ಯಮಹಾ ಡಿಲೈಟ್ ಸ್ಕೂಟರ್ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅದೇ 125 ಸಿಸಿ ಎಂಜಿನ್ ಅನ್ನು ಹೊಂದಿದ್ದು, ಆದರೆ ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಇನ್ನು ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಮತ್ತೊಂದು ವಿಶೇಷವೆಂದರೆ ಈ ಹೊಸ ಮಾದರಿಯು ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು ಟ್ರಾಫಿಕ್ ನಲ್ಲಿ ಸ್ಕೂಟರ್ ಅನ್ನು ನಿಲ್ಲಿಸಿದಾಗ ಎಂಜಿನ್ ಅನ್ನು ಆಫ್ ಮಾಡುತ್ತದೆ. ಸ್ಕೂಟರ್ ಅನ್ನು ಮತ್ತೆ ಸ್ಟ್ರಾಟ್ ಮಾಡಲು ಥ್ರೊಟಲ್ ಅನ್ನು ತಿರುಗಿಸಬೇಕು.

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಹೊಸ ಯಮಹಾ ಡಿಲೈಟ್ ಸ್ಕೂಟರ್ ನಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಆಕರ್ಷಕ ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

ಈ ಹೊಸ ಯಮಹಾ ಡಿಲೈಟ್ ಸ್ಕೂಟರ್ 99 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಸ್ಕೂಟರ್ 5.5 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸ್ಕೂಟರ್ ಮೈಲೇಜ್ ಅಂಕಿ ಅಂಶವನ್ನು ಕಂಪನಿಯು ಬಹಿರಂಗಪಡಿಸಲಾಗಿಲ್ಲ.

ಹೊಸ ಫೀಚರ್‌ಗಳೊಂದಿಗೆ ಅನಾವರಣವಾಯ್ತು ಯಮಹಾ ಡಿಲೈಟ್ ಸ್ಕೂಟರ್

2021ರ ಯಮಹಾ ಡಿಲೈಟ್ ಸ್ಕೂಟರ್ ವೈಟ್, ಬ್ಲ್ಯಾಕ್ ಮತ್ತು ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ ರೇ ಮತ್ತು ಫ್ಯಾಸಿನೋ ಸ್ಕೂಟರ್ ಗಳು ಮಾರಾಟವಾಗುವುದರಿಂದ ಅದೇ ಸರಣಿಯ ಡಿಲೈಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ

Most Read Articles

Kannada
Read more on ಯಮಹಾ yamaha
English summary
Yamaha Delight Scooter With Start-Stop System Unveiled. Read In Kannada.
Story first published: Thursday, November 26, 2020, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X