ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಯಮಹಾ ಕಂಪನಿಯು ಎಕ್ಸ್‌ಎಸ್‌ಆರ್ 155 ರೆಟ್ರೊ-ಲುಕಿಂಗ್ ಬೈಕ್ ಅನ್ನು ಫಿಲಿಪೈನ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಇನ್ನು ಯಮಹಾ ಕಂಪನಿಯು ರೆಟ್ರೊ ಲುಕ್ ಅನ್ನು ಹೊಂದಿರುವ ಈ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಕರೋನಾ ಸೋಂಕಿನ ಭೀತಿಯಿಂದ ಈ ಬೈಕನ್ನು ಬಿಡುಗಡೆಗೊಳಿಸುವುದು ವಿಳಂಬವಾಗುತ್ತಿದೆ. ಎಕ್ಸ್‌ಎಸ್‌ಆರ್ 155 ಮಾದರಿಯು ಕಂಪನಿಯ ‘ಸ್ಪೋರ್ಟ್ ಹೆರಿಟೇಜ್' ಸರಣಿಯಲ್ಲಿ ವಿಶ್ವದಾದ್ಯಂತ ಮಾರಾಟವಾಗುವ ಅತ್ಯಂತ ಚಿಕ್ಕ ಬೈಕು ಆಗಿದೆ.

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್ ಕ್ಲಾಸಿಕ್-ರೆಟ್ರೊ ವಿನ್ಯಾಸ ಮತ್ತು ಮಾರ್ಡನ್ ಲುಕ್ ಸ್ಪರ್ಶವನ್ನು ನೀಡಿದೆ. ಈ ಬೈಕ್ ದುಂಡಗಿನ ಆಕಾರದ ಹೆಡ್‌ಲೈಟ್ ಮತ್ತು ವಿಭಿನ್ನ ಶೈಲಿಯ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಇನ್ನು ಈ ಬೈಕಿನಲ್ಲಿ ವೃತ್ತಾಕಾರದ ಟೈಲ್-ಲೈಟ್, ಸಿಂಗಲ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಸಿಂಗಲ್-ಪೀಸ್ ರಿಬ್ಬಡ್ ಸೀಟ್ ಅನ್ನು ಪಿಲಿಯನ್ ಗ್ರ್ಯಾಬ್ ಬೆಲ್ಟ್ ನೊಂದಿಗೆ ಮಧ್ಯದಲ್ಲಿ ಇರಿಸಲಾಗಿದೆ. ಇದು ಬೈಕಿನ ರೆಟ್ರೊ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿನ ಸಿಂಗಲ್-ಪಾಡ್ ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಮತ್ತು ಟ್ರಿಪ್ ಇಂಡಿಕೇಟರ್ ಅನ್ನು ಒಳಗೊಂಡಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಎಂಟಿ -15 ಮತ್ತು ಆರ್ 15ವಿ 3.0 ನಲ್ಲಿ ಅಳವಡಿಸಿರುವಂತಹ ಎಂಜಿನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ವಿವಿಎ ತಂತ್ರಜ್ಞಾನದೊಂದಿಗೆ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ 155 ಸಿಸಿ ಎಂಜಿನ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಎಂಜಿನ್ 18.9 ಬಿಹೆಚ್‍ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಯಮಹಾ ಎಕ್ಸ್‌ಎಸ್‌ಆರ್ 155 ಸ್ಟೀಲ್-ಡೆಲ್ಟಾಬಾಕ್ಸ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ (ಯುಎಸ್‌ಡಿ) ಅಪ್‌ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಯಮಹಾ ಎಕ್ಸ್‌ಎಸ್‌ಆರ್ 155 ಬೈಕ್

ಈ ಎಕ್ಸ್‌ಎಸ್‌ಆರ್ 155 ಮಾದರಿಯು ಯಮಹಾ ಸರಣಿಯಲ್ಲಿರುವ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಯಮಹಾ ಎಕ್ಸ್‌ಎಸ್‌ಆರ್ 155 ಬೈಕಿನಲ್ಲಿ ಕ್ಲಾಸಿಕ್-ರೆಟ್ರೊ ವಿನ್ಯಾಸ ಹೊಂದಿದೆ. ಇನ್ನು ಈ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ 150 ಸಿಸಿ ಸರಣಿಯಲ್ಲಿರುವ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha XSR 155 India Launch Details. Read In Kaannada.
Story first published: Saturday, July 25, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X